ಭಕ್ತಿಪರವಶನಾಗಿ 'ಅಯ ಗಿರಿನಂದಿನಿ', ಸಿಯಾ ರಾಮ್ ಹಾಡು ಹೇಳಿದ ಗಾಯಕ ಮೊಹಮದ್ ದಾನಿಶ್

Published : May 14, 2026, 01:30 PM IST

ಇಂಡಿಯನ್ ಐಡಲ್ ಖ್ಯಾತಿಯ ಗಾಯಕ ಮೊಹಮದ್ ದಾನಿಶ್, 'ಅಯಿಗಿರಿ ನಂದಿನಿ' ಮತ್ತು 'ರಾಮ್ ಸಿಯಾ ರಾಮ್' ಭಕ್ತಿಗೀತೆಗಳನ್ನು ಹಾಡಿರುವ ವಿಡಿಯೋ ವೈರಲ್ ಆಗಿದೆ. ಅವರ ವಿಶಿಷ್ಟ ಗಾಯನ ಶೈಲಿ ಮತ್ತು ಧಾರ್ಮಿಕ ಸಾಮರಸ್ಯದ ಕುರಿತ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿವೆ.

PREV
15
ಗಾಯಕ ಮೊಹಮದ್ ದಾನಿಶ್

ಖಾಸಗಿ ವಾಹಿನಿಯ ಇಂಡಿಯನ್ ಐಡಲ್ ರಿಯಾಲಿಟಿ ಶೋ ಖ್ಯಾತಿಯ ಗಾಯಕ ಮೊಹಮದ್ ದಾನಿಶ್ ಅವರ ಹಾಡಿನ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಮೊಹಮದ್ ದಾನಿಶ್, ಅಯ ಗಿರಿನಂದಿನಿ ಮತ್ತಿ ರಾಮ್ ಸಿಯಾ ರಾಮ್ ಹಾಡು ಹೇಳಿದ್ದಾರೆ.

25
ಅಯ ಗಿರಿನಂದಿನಿ ಮತ್ತು ಸಿಯಾ ರಾಮ್ ಹಾಡು

ಮೊಹಮದ್ ದಾನಿಶ್ ಅಂದ್ರೆ ರಾಕ್ ಸ್ಟಾರ್ ಎಂಬ ಮಾತಿದೆ. ಹಾಡು ಹೇಳಲು ಆರಂಭಿಸುತ್ತಿದ್ದಂತೆಯೇ ತಮ್ಮನ್ನೇ ತಾವು ಮರೆತು ಕುಣಿಯಲು ಆರಂಭಿಸುತ್ತಾರೆ. ಹಿಂದಿ ರಿಯಾಲಿಟಿ ಶೋ ವೀಕ್ಷಕರಿಗೆ ದಾನಿಶ್ ಹಾಡುಗಳು ಹೇಗಿರುತ್ತೆ ಎಂಬುದರ ಬಗ್ಗೆ ಕಲ್ಪನೆ ಇರುತ್ತದೆ. ಅದೇ ರೀತಿಯಲ್ಲಿಯೇ ಭಕ್ತಿಗೀತೆಗಳಾದ ಅಯ ಗಿರಿನಂದಿನಿ ಮತ್ತು ಸಿಯಾ ರಾಮ್ ಹಾಡುಗಳಲ್ಲಿಯೂ ತಮ್ಮನೇ ಮರೆತಿದ್ದಾರೆ.

35
ಗಾಯನಕ್ಕೆ ಕೇಳುಗರು ಹೇಳಿದ್ದೇನು?

ಓರ್ವ ಮುಸ್ಲಿಂ ಗಾಯಕ ಈ ರೀತಿಯಾಗಿಯೂ ಭಕ್ತಿಗೀತೆಗಳನ್ನು ಹಾಡಬಹುದಾ ಎಂದು ಕೇಳುಗರ ಅಚ್ಚರಿ ವ್ಯಕ್ತಪಡಿಸಿದ್ದು, ಹಾಡಿನ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಮೊಹಮದ್ ದಾನಿಶ್ ಗಾಯನಕ್ಕೆ ತಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಈ ಹಿಂದೆ ರಿಯಾಲಿಟಿ ಶೋನಲ್ಲಿ ಮೊಹಮದ್ ದಾನಿಶ್, ಹನುಮಾನ್ ಚಾಲೀಸ (ಜಯ ಹನುಮಾನ್ ಜ್ಞಾನ ಗುಣ ಸಾಗರ) ಹೇಳಿ, ತೀರ್ಪುಗಾರರನ್ನು ಬೆರಗುಗೊಳಿಸಿದ್ದರು.

45
ದಾನಿಶ್ ಧ್ವನಿಯಲ್ಲಿದೆ ಮ್ಯಾಜಿಕ್

ದಾನಿಶ್ ಹಾಡು ಕೇಳಿದ ಕೇಳುಗರು, ಕಲೆಗೆ ಯಾವುದೇ ಜಾತಿ ಧರ್ಮ ಇಲ್ಲ. ಗಾಯಕರು ಸಂಗೀತವನ್ನು ಆರಾಧಿಸುವ ಜೀವಗಳು. ನಿಜವಾದ ಗಾಯಕರು ಪ್ರತಿಯೊಂದು ಹಾಡು ಹೇಳುವಾಗ ಅದರಲ್ಲಿಯೇ ಜೀವಿಸುತ್ತಾರೆ. ದಾನಿಶ್ ಧ್ವನಿಯಲ್ಲಿ ಮ್ಯಾಜಿಕ್ ಇದ್ದು, ಕೇಳುಗರು ಕುಣಿದು ಕುಪ್ಪಳಿಸುವಂತೆ ಮಾಡುತ್ತಾರೆ. ಇದು ಅವರಲ್ಲಿರುವ ಶಕ್ತಿ ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಪ್ರಿಯಾಳ ಅತಿ ಬುದ್ಧಿವಂತಿಕೆಗೆ ಸಂಕಷ್ಟದಲ್ಲಿ ಸಿಲುಕಿದ ಮಾಧವ; ಕೈ ಕೊಟ್ಟ ಮಿಜಿ ಮಿಜಿ ಅತ್ತೆ

55
ಕೆಲವರಿಂದ ಬೇಸರ

ಈ ವಿಡಿಯೋಗಳಿಗೆ ಕಮೆಂಟ್ ಮಾಡಿರುವ ಕೆಲವರು, ಈ ಹಿಂದೆಯೂ ಮೊಹಮ್ಮದ್ ರಫಿ ಸೇರಿದಂತೆ ಹಲವು ಮುಸ್ಲಿಂ ಗಾಯಕರ ಹಿಂದೂ ಗೀತೆಗಳಿಗೆ ಧ್ವನಿಯಾಗಿದ್ದಾರೆ. ಆದ್ರೆ ಮೊಹಮದ್ ದಾನಿಶ್ ಗಾಯನಕ್ಕೆ ಇಷ್ಟೊಂದು ಆದ್ಯತೆ ಕೊಡ್ತಿರೋದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಒಂದಿಷ್ಟು ಜನರು ಹಿಂದೂ ಗಾಯಕರು, ಯಾ ಅಲಿ ಸೇರಿದಂತೆ ಸೂಫಿ ಹಾಡು ಹಾಡಿರೋದನ್ನು ಉದಾಹರಣೆಯಾಗಿ ನೀಡಿದ್ದಾರೆ.

ಇದನ್ನೂ ಓದಿ: ಕೆಡಿ ಜೈದೇವ್‌ನಿಂದ ದೂರವಾಗಿ ತಣ್ಣಗಿದ್ದ ದಿಯಾ ಬೇಬಿಗೆ ಭಯಂಕರವಾದ ಸಲಹೆ ನೀಡಿದ ಗೆಳತಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories