ಸೂಪರ್‌ಸ್ಟಾರ್ ರಜಿನಿಕಾಂತ್ ಅವರು ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮವೊಂದರಲ್ಲಿ, ಯಾರೂ ತಮ್ಮನ್ನು ಗಮನಿಸದಿದ್ದಾಗ ಆದ ಅನುಭವ ಮತ್ತು ತಮ್ಮ ಅಹಂಕಾರ ಹೇಗೆ ಮುರಿಯಿತು ಎಂಬುದನ್ನು ಹಂಚಿಕೊಂಡಿದ್ದಾರೆ. ಈ ಘಟನೆಯು ಅವರಿಗೆ ಬಣ್ಣದ ಲೋಕದ ಹೊರತಾದ ಸತ್ಯದ ಅರಿವನ್ನು ಮೂಡಿಸಿತು.
ಸೆಲೆಬ್ರಿಟಿಗಳನ್ನೇ ದೇವರು ಎಂದು ನಂಬುವ, ಅತಿರೇಕದ ಅಭಿಮಾನ ಇರುವ ಒಂದಷ್ಟು ಫ್ಯಾನ್ಸ್ ಇದ್ದಾರೆ. ಅವರ ಒಂದು ನೋಟಕ್ಕಾಗಿ ಪ್ರಾಣವನ್ನೂ ಪಣಕ್ಕಿಡುವವರು ಇದ್ದಾರೆ. ಸಿನಿಮಾದಲ್ಲಿ ಹೀರೋ ಆಗಿ ಮಿಂಚುವವರು ನಿಜ ಜೀವನದಲ್ಲಿ ಹೇಗಿರುತ್ತಾರೆ, ಅದೊಂದು ಸಿನಿಮಾ ಮಾತ್ರ ಇದ್ಯಾವುದರ ಕಲ್ಪನೆಯೂ ಇಲ್ಲದೇ ಅತಿರೇಕವಾಗಿ ವರ್ತಿಸುವವರೂ ಇದ್ದಾರೆ. ಅದೇ ರೀತಿ ಅಭಿಮಾನಿಗಳ ಸಂಖ್ಯೆ ಹೆಚ್ಚಿದಂತೆ ಅದನ್ನೇ ಬಂಡವಾಳ ಮಾಡಿಕೊಂಡು ಮತ್ತಷ್ಟು ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಳ್ಳುವ ತವಕದಲ್ಲಿರುವ ನಟರೂ ಇದ್ದಾರೆ.
27
ಸೆಲೆಬ್ರಿಟಿಗಳ ಭ್ರಮ ನಿರಸನ
ಆದರೆ, ಇಂಥ ಅಭಿಮಾನಿಗಳ ವರ್ಗವೇ ಬೇರೆ, ಈ ಬಣ್ಣದ ಲೋಕವಾಗಿರುವ ಸಿನಿಮಾ ಹೊರತಾಗಿಯೂ ಪ್ರಪಂಚ ಇದೆ ಎಂದು ನಂಬಿ ಸತ್ಯದ ಅರಿವಿನಲ್ಲಿ ಬದುಕುತ್ತಿರುವ ದೊಡ್ಡ ವರ್ಗವೂ ಇದೆ. ಇಂಥ ಲೋಕಕ್ಕೆ ಹೋದಾಗ ಎಲ್ಲೆಡೆ ತಮ್ಮದೇ ಹವಾ ಎಂದುಕೊಳ್ಳುವ ಸೆಲೆಬ್ರಿಟಿಗಳ ಭ್ರಮ ನಿರಸನ ಹೇಗಾಗುತ್ತದೆ, ಅಹಂಕಾರ ಹೇಗೆ ಮುರಿದು ಬೀಳುತ್ತದೆ ಎನ್ನುವ ಬಗ್ಗೆ ಓಪನ್ ಆಗಿ, ಸತ್ಯದ ಅರಿವಿನ ಬಗ್ಗೆ ಅತ್ಯಂತ ಸೊಗಸಾಗಿ ಮಾತನಾಡಿದ್ದಾರೆ ಸಿನಿಲೋಕ ಕಂಡಿರುವ ಅಪರೂಪದ ನಟ ರಜಿನಿಕಾಂತ್.
37
ದೇಶಾದ್ಯಂತ ಫ್ಯಾನ್ಸ್
ರಜನಿಕಾಂತ್ ಜನಸಂದಣಿಯಲ್ಲಿ ಕಾಣಿಸಿಕೊಂಡಾಗ, ಅವರನ್ನು ನೋಡಲು ಕಾಲ್ತುಳಿತ ಆಗುವುದೂ ಇದೆ. ಅಷ್ಟೊಂದು ಅಭಿಮಾನಿಗಳು ಇಡೀ ದೇಶದ ತುಂಬೆಲ್ಲಾ ಇದ್ದಾರೆ. ಒಂದು ಸೆಲ್ಫಿಗಾಗಿ ಮುಗಿಬೀಳುವ, ರಜಿನಿ ಬರುತ್ತಿದ್ದಾರೆ ಎಂದರೆ ಗಂಟೆಗಟ್ಟೆ ಕಾದು ಒಮ್ಮೆ ನೋಡಿ ಇಡೀ ಜನ್ಮ ಸಾರ್ಥಕವಾಯಿತು ಎಂದುಕೊಳ್ಳುವ ದೊಡ್ಡ ವರ್ಗವೇ ಇದೆ. ಆದರೆ ಇದೇ ರಜಿನಿಕಾಂತ್ ಅವರು ತಮ್ಮ ಅಹಂಕಾರದ ಗೋಡೆ ಹೇಗೆ ಕಳಿಚಿತು ಎನ್ನುವ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರಕ್ಕೆ ಭೇಟಿ ನೀಡಿದಾಗ ಇದರ ಅರಿವು ಆಯ್ತು ಎಂದಿದ್ದಾರೆ.
ಆರ್ಟ್ ಆಫ್ ಲಿವಿಂಗ್ ಫೌಂಡೇಶನ್‌ನ 45 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಈ ಅನುಭವವನ್ನು ನಟ ಹಂಚಿಕೊಂಡರು. ನನ್ನ ಜೀವನದಲ್ಲಿ ಇದೊಂದು ಅಪೂರ್ವ ಅನುಭವ, ನಿಜಕ್ಕೂ ನನ್ನನ್ನು ಇದು ದಿಗ್ಭ್ರಮೆಗೊಳಿಸಿತು ಮತ್ತು ಅಹಂಕಾರದ ಗೋಡೆ ಕಳಚಿತು ಎಂದಿದ್ದಾರೆ ನಟ.
57
ಅಹಂಕಾರದ ಗೋಡೆ...
ಶ್ರೀ ಶ್ರೀ ರವಿಶಂಕರ್ ಒಮ್ಮೆ ಭಕ್ತರಿಂದ ತುಂಬಿದ್ದ ಸಭೆಯಲ್ಲಿ ನನ್ನನ್ನು ಆಹ್ವಾನಿಸಲಾಗಿತ್ತು. ಅಲ್ಲಿ ನೆರೆದ ಜನರು ನನ್ನನ್ನು ನೋಡಿದ ತಕ್ಷಣ ಒಹ್ ರಜಿನಿಕಾಂತ್ ಅವರುಎಂದು ಓಡೋಡಿ ಬರುತ್ತಾರೆ ಎನ್ನುವ ಕಲ್ಪನೆಯಲ್ಲಿ ಹೋದೆ. ಎಲ್ಲೆಡೆ ಆಗುವಂತೆ ಇಲ್ಲಿಯೂ ಮುತ್ತಿಗೆ ಹಾಕಬಹುದು ಎಂದುಕೊಳ್ಳುತ್ತಲೇ ಇದ್ದೆ. ಜನರು ಆಟೋಗ್ರಾಫ್ ಕೇಳುತ್ತಾರೆ, ಫೋಟೋ ತೆಗೆದುಕೊಳ್ಳುತ್ತಾರೆ ಮತ್ತು ನನ್ನ ಹೆಸರನ್ನು ಕೂಗಿ ಕೇಕೇ ಹಾಕುತ್ತಾರೆ ಎಂದೆಲ್ಲಾ ಭಾವಿಸಿದೆ.
67
ಕೈಬೀಸಿದ್ರೂ ಮೂಸಲಿಲ್ಲ
ಇದೇ ಕಾರಣಕ್ಕೆ ಅದೇ ಅಹಂಕಾರದಿಂದಲೇ ಜನರ ಬಳಿ ಕೈಬೀಸಿದೆ. ಆದರೆ ಯಾರೊಬ್ಬರೂ ನನ್ನನ್ನು ಕ್ಯಾರೇ ಮಾಡಲಿಲ್ಲ. ಜನಸಂದಣಿಯಲ್ಲಿ ಅನೇಕ ತಮಿಳು ಮಾತನಾಡುವ ಭಕ್ತರೂ ಇದ್ದರು.ಕೊನೆಯ ಪಕ್ಷ ಅವರಾದರೂ ನನ್ನನ್ನು ಗಮನಿಸುತ್ತಾರೆ ಎಂದುಕೊಂಡೆ. ಆದರೆ ಎಲ್ಲವೂ ಉಲ್ಟಾ ಆಯ್ತು. ಬದಲಾಗಿ, ಸಾವಿರಾರು ಜನರು ನಿಂತು ಗುರುದೇವರ ಮೇಲೆ ಸಂಪೂರ್ಣವಾಗಿ ಗಮನಹರಿಸಿದ್ದರು ಎನ್ನುವ ಘಟನೆ ನೆನಪಿಸಿಕೊಂಡರು.
77
ವಿಭಿನ್ನ ಪರಿಣಾಮ
"ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಯಾರೂ ನನ್ನನ್ನು ನೋಡಲಿಲ್ಲ. ಫೋಟೋಗಳು ಮತ್ತು ಆಟೋಗ್ರಾಫ್‌ಗಳನ್ನು ಮರೆತುಬಿಡಿ. ನಾನು ಸುಮ್ಮನೆ ಕೈ ಬೀಸುತ್ತಿದ್ದೆ. ಯಾರೂ ನನ್ನತ್ತ ನೋಡಲಿಲ್ಲ. ಆ ಕ್ಷಣ ತನ್ನ ಅಹಂಕಾರ ಛಿದ್ರಗೊಂಮಡಿತು. ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು ಮತ್ತು ದೊಡ್ಡ ಜನಸಮೂಹದಿಂದ ಸುತ್ತುವರೆದಿರುವ ಅನೇಕ ವರ್ಷಗಳನ್ನು ತಾನು ಕಳೆದಿದ್ದೇನೆ. ಅಲ್ಲಿ ಅವರ ಸೆಲೆಬ್ರಿಟಿ ಉಪಸ್ಥಿತಿ ಯಾವಾಗಲೂ ಗಮನ ಸೆಳೆಯುತ್ತಿತ್ತು. ಅದಕ್ಕಾಗಿಯೇ ಆಶ್ರಮದಲ್ಲಿಯೂ ಹಾಗೆ ಅಂದುಕೊಂಡೆ. ಆದರೆ ಅಲ್ಲಿ ವಿಭಿನ್ನ ಪರಿಣಾಮವನ್ನು ಬೀರಿತು ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.