ಕಾಲಿವುಡ್‌ನ ಜನಪ್ರಿಯ ನಟಿ ತ್ರಿಷಾ ರಾಜಕೀಯಕ್ಕೆ ಬರ್ತಾರೆ, ತಿರುಚ್ಚಿ ಪೂರ್ವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ತ್ರಿಷಾ ಈ ಹಿಂದೆಯೇ ನೀಡಿದ್ದ ಹೇಳಿಕೆಯೊಂದು ಈಗ ವೈರಲ್ ಆಗಿದೆ. ಆ ಕುರಿತ ಪೂರ್ಣ ವಿವರ ಇಲ್ಲಿದೆ.
ತಮಿಳು ಚಿತ್ರರಂಗದ ಮುಂಚೂಣಿ ನಟಿ ತ್ರಿಷಾ ಕೃಷ್ಣನ್ ಸುತ್ತ ಸದಾ ಒಂದಿಲ್ಲೊಂದು ವಿವಾದಗಳು ಸುತ್ತುತ್ತಲೇ ಇರುತ್ತವೆ. ಅದರಲ್ಲೂ ನಟ ವಿಜಯ್ ಜೊತೆಗಿನ ಆಪ್ತತೆಯಿಂದಾಗಿ, ತ್ರಿಷಾ ರಾಜಕೀಯಕ್ಕೆ ಬರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ವಿಜಯ್ ಪ್ರಮಾಣ ವಚನ ಸ್ವೀಕರಿಸುವಾಗ ತ್ರಿಷಾ ಭಾವುಕರಾಗಿದ್ದು ಈ ಚರ್ಚೆಗೆ ಮತ್ತಷ್ಟು ಬಲ ನೀಡಿದೆ.
25
ವಿಜಯ್ ರಾಜೀನಾಮೆ ನೀಡುವ ಕ್ಷೇತ್ರ ಆಯ್ಕೆ ಮಾಡಿಕೊಳ್ತಾರಾ?
ನಟ ವಿಜಯ್, ಪೆರಂಬೂರ್ ಮತ್ತು ತಿರುಚ್ಚಿ ಪೂರ್ವ ಎರಡೂ ಕ್ಷೇತ್ರಗಳಲ್ಲಿ ಗೆದ್ದಿದ್ದರು. ಬಳಿಕ ತಿರುಚ್ಚಿ ಪೂರ್ವ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಅಲ್ಲಿ ಉಪಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' ಪಕ್ಷದಿಂದ ತ್ರಿಷಾ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಹಬ್ಬಿದೆ.
35
ಹಳೆ ಹೇಳಿಕೆ ಮುನ್ನಲೆ
ತ್ರಿಷಾ ಸಿನಿಮಾ ಬಿಟ್ಟು ರಾಜಕೀಯಕ್ಕೆ ಹೋಗ್ತಾರಾ ಎಂಬ ಚರ್ಚೆ ಜೋರಾಗಿದೆ. ಆದರೆ, ಈ ಬಗ್ಗೆ ತ್ರಿಷಾ ವರ್ಷಗಳ ಹಿಂದೆಯೇ ಉತ್ತರ ನೀಡಿದ್ದಾರೆ. ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ತ್ರಿಷಾ 'ಕುಂದವೈ' ಪಾತ್ರದಲ್ಲಿ ಮಿಂಚಿದ್ದರು. ಈ ಪಾತ್ರ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತ್ತು.
'ಪೊನ್ನಿಯಿನ್ ಸೆಲ್ವನ್' ಪ್ರಚಾರದ ವೇಳೆ, 'ನೀವು ರಾಜಕೀಯಕ್ಕೆ ಬರುತ್ತೀರಾ?' ಎಂದು ತ್ರಿಷಾರನ್ನು ಕೇಳಲಾಗಿತ್ತು. ಅದಕ್ಕೆ, 'ಖಂಡಿತಾ ಇಲ್ಲ, ನನಗೆ ರಾಜಕೀಯದ ಬಗ್ಗೆ ಏನೂ ಗೊತ್ತಿಲ್ಲ. ಹಾಗಾಗಿ ನಾನು ಏನೂ ಮಾಡಲು ಸಾಧ್ಯವಿಲ್ಲ' ಎಂದು ಸ್ಪಷ್ಟವಾಗಿ ಉತ್ತರಿಸಿದ್ದರು. ಅವರ ಈ ಹಳೆಯ ಸಂದರ್ಶನ ಈಗ ವೈರಲ್ ಆಗಿದೆ.
55
ಬಿಡುಗಡೆಗೆ ಸಿದ್ಧವಾಗಿರುವ ಕರುಪ್ಪು
ಸದ್ಯ ತ್ರಿಷಾ ಕೈಯಲ್ಲಿ 'ಕರುಪ್ಪು' ಎಂಬ ಸಿನಿಮಾ ಇದೆ. ಇದರಲ್ಲಿ ಸೂರ್ಯಗೆ ನಾಯಕಿಯಾಗಿ ನಟಿಸಿದ್ದು, ಆರ್.ಜೆ.ಬಾಲಾಜಿ ನಿರ್ದೇಶಿಸಿದ್ದಾರೆ. ಹಣಕಾಸಿನ ಸಮಸ್ಯೆಯಿಂದಾಗಿ ಈ ಚಿತ್ರದ ಬಿಡುಗಡೆ ಸದ್ಯಕ್ಕೆ ನಿಂತಿದೆ. ಸಮಸ್ಯೆ ಬಗೆಹರಿದರೆ, ನಾಳೆ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.