90ರ ದಶಕದ ಕೆಲವು ಕನ್ನಡ ಸಿನಿಮಾಗಳು ತಮ್ಮ ದುರಂತ ಅಂತ್ಯದಿಂದ ಪ್ರೇಕ್ಷಕರ ಹೃದಯವನ್ನು ಘಾಸಿಗೊಳಿಸಿದ್ದವು. ಈ ಸಿನಿಮಾಗಳು ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿದ್ದು, ಇಂದಿನ ಯುವ ಪೀಳಿಗೆಯೂ ನೋಡಲೇಬೇಕಾದ ಚಿತ್ರಗಳಾಗಿವೆ.
90ರ ದಶಕದ ಕೆಲ ಸಿನಿಮಾಗಳು ನೋಡುಗರ ಹೃದಯವನ್ನ ಘಾಸಿಗೊಳಿಸಿದ್ದವು. ಸಿನಿಮಾ ನೋಡಿದ ನಂತರ ಇಡೀ ದಿನ ನಿಮ್ಮನ್ನು ಆವರಿಸುತ್ತವೆ. ಇಂತಹ ಹತಾಶೆಯಲ್ಲಿಯೂ ಒಂದೊಳ್ಳೆ ಸಿನಿಮಾ ನೋಡಿದ ತೃಪ್ತಿ ನಿಮ್ಮದಾಗುತ್ತವೆ. ಇಂದಿನ ಜೆನ್ ಜಿ ಯುವ ಸಮುದಾಯ ಈ ಸಿನಿಮಾಗಳನ್ನು ಮಿಸ್ ಮಾಡದೇ ನೋಡಲೇಬೇಕು.
26
ಕೃಷ್ಣನ ಲವ್ ಸ್ಟೋರಿ
ಅಜೇಯ್ ರಾವ್ ಮತ್ತು ರಾಧಿಕಾ ಪಂಡಿತ್ ನಟನೆಯ ಕೃಷ್ಣನ ಲವ್ ಸ್ಟೋರಿ ಸಿನಿಮಾ ಸಹ ಕೊನೆಗೆ ಒಂಟಿ ಭಾವ ನಿಮ್ಮನ್ನು ಕಾಡುತ್ತದೆ. ಪ್ರೀತಿಯನ್ನು ದಿಕ್ಕರಿಸಿ ಹೋಗುವ ನಟಿಗೆ ಮತ್ತೆ ಹಳೇ ಪ್ರೇಮವೇ ಆಸರೆಯಾಗುತ್ತದೆ.
ಎಲ್ಲವನ್ನೂ ಮರೆತು ಪ್ರೇಯಸಿಯನ್ನು ಒಪ್ಪಿಕೊಂಡರೂ, ನಟಿಗೆ ಮಾತ್ರ ತನ್ನ ತಪ್ಪು ಪದೇ ಪದೇ ಕಾಡುತ್ತಿರುತ್ತದೆ. ಮಿಡಲ್ ಕ್ಲಾಸ್ ಕುಟುಂಬದ ಕಥೆ ಜೊತೆ ನವೀರಾದ ಲವ್ ಸ್ಟೋರಿಯನ್ನು ಈ ಸಿನಿಮಾ ಹೊಂದಿದೆ.
36
ಅಮೃತವರ್ಷಿಣಿ
ರಮೇಶ್ ಅರವಿಂದ್, ಶರತ್, ಸುಹಾಸಿನಿ ಮತ್ತು ನಿವೇದಿತಾ ಜೈನ್ ನಟನೆಯ ಅಮೃತಧಾರೆ ಸಿನಿಮಾ ಮ್ಯೂಸಿಕಲ್ ಹಿಟ್ ಅಗಿತ್ತು. ಪ್ರೇಯಸಿಯನ್ನು ಕಳೆದುಕೊಂಡು ಒಂಟಿಯಾಗಿರೋ ಹೀರೋ, ಆಪ್ತ ಗೆಳೆಯನ ಮನೆಗೆ ಬರುತ್ತಾನೆ. ಇಲ್ಲಿ ನಾಯಕನಿಗೆ ಗೆಳೆಯನ ಹೆಂಡ್ತಿ ಮೇಲೆ ಪ್ರೇಮಾಂಕುರವಾಗುತ್ತದೆ. ಇದಕ್ಕಾಗಿ ಗೆಳೆಯನನ್ನೇ ಕೊಲ್ಲುತ್ತಾನೆ. ನಂತರ ಆತನನ್ನು ಗೆಳೆಯನ ಹೆಂಡ್ತಿಯೂ ಒಪ್ಪಿಕೊಳ್ಳುತ್ತಾನೆ. ಕೊನೆಗೆ ಹೀರೋಯಿನ್ ಕೈಗೆ ಗಂಡನ ಕ್ಯಾಮೆರಾ ಸಿಗುತ್ತದೆ. ಇದರಿಂದ ಸಿನಿಮಾದ ಇಡೀ ಕಥೆಯೇ ಬದಲಾಗುತ್ತದೆ.
ಅಜೇಯ್ ರಾವ್ ಮತ್ತು ಪೂಜಾ ಗಾಂಧಿ ನಟನೆಯ ಸುಂದರವಾದ ದುರಂತ ಪ್ರೇಮಕಥೆಯೇ ತಾಜ್ ಮಹಲ್. ಹಳ್ಳಿಯಿಂದ ಓದಲು ಸಿಟಿಗೆ ಬರುವ ಹೀರೋಗೆ ತನ್ನದೇ ಕಾಲೇಜಿನಲ್ಲಿ ಓದುತ್ತಿರುವ ನಾಯಕಿ ಮೇಲೆ ಪ್ರೇಮವಾಗುತ್ತದೆ. ಆಕೆಗಾಗಿ ಸುಳ್ಳು ಫೋನ್ ಕಾಲ್ ಮೇಲೆ ಗೆಳೆಯನಾಗುತ್ತಾನೆ. ಅಪ್ಪ-ಅಮ್ಮ ಜಮೀನು ಮಾರಿ ಹಣ ಕಳುಹಿಸುತ್ತಿದ್ರೆ ಹೀರೋ ಇದ್ಯಾವುದರ ಪರಿವೇ ಇಲ್ಲದೇ ಎಂಜಾಯ್ ಮಾಡುತ್ತಿರುತ್ತಾರೆ.
ಪ್ರೇಯಸಿಗಾಗಿ ಪರೀಕ್ಷೆ ಬರೆಯದೇ ಕಾಲೇಜಿನಿಂದ ಹೊರ ಬೀಳುತ್ತಾನೆ. ತಪ್ಪು ತಿದ್ದಿಕೊಂಡು ಊರಿಗೆ ಹೋದ ನಾಯಕನಿಗೆ ವಿಧಿ ಬದುಕುವ ಅವಕಾಶವನ್ನೇ ನೀಡಲ್ಲ. ಸತ್ಯ ತಿಳಿದು ಓಡೋಡಿ ಬರೋ ನಾಯಕಿಗೂ ದೊಡ್ಡದೊಂದು ಆಘಾತ ಕಾದಿರುತ್ತದೆ.
56
ಮುಂಗಾರುಮಳೆ
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಮಳೆ ಹುಡುಗಿ ಪೂಜಾ ಗಾಂಧಿ ನಟನೆಯ ಮುಂಗಾರುಮಳೆ ಕನ್ನಡದ ಎವರ್‌ಗ್ರೀನ್ ಸಿನಿಮಾಗಳಲ್ಲಿ ಒಂದಾಗಿದೆ. ಹೀರೋಯಿನ್ ನಂದಿನಿ ಮದುವೆಗೆ ಬರುವ ಹೀರೋಗೆ ವಧುವಿನ ಮೇಲೆ ಪ್ರೇಮಾಂಕುರವಾಗಿರುತ್ತದೆ. ಮದುವೆ ಸಂಭ್ರಮದಲ್ಲಿರುವ ನಂದಿನಿಗೆ ಪ್ರೀತಮ್ ಮೇಲೆ ಪ್ರೀತಿಯುಂಟಾಗುತ್ತದೆ. ಇನ್ನೇನು ಮದುವೆ ಮನೆಯಿಂದ ಓಡಿ ಹೋಗುವಷ್ಟರಲ್ಲಿ ಅಮ್ಮನಿಂದ ವಿರೋಧ ವ್ಯಕ್ತವಾಗುತ್ತದೆ.
ಕುಟುಂಬದಲ್ಲಿನ ಸಮಸ್ಯೆಗಳು ನಂದಿನಿ ಮತ್ತು ಪ್ರೀತಮ್ ಪ್ರೀತಿಯನ್ನು ಸೋಲಿಸುತ್ತದೆ. ಕುಟುಂಬಕ್ಕಾಗಿ ನಾಯಕ ನಟ ಪ್ರೀತಿಯನ್ನೇ ತ್ಯಾಗ ಮಾಡ್ತಾನೆ.
ಗಣೇಶ್ ಮತ್ತು ಅಮೂಲ್ಯ ನಟನೆಯ ಚೆಲುವಿನ ಚಿತ್ತಾರ ಇಡೀ ಚಿತ್ರರಂಗದಲ್ಲಿಯೇ ಹಲ್-ಚಲ್ ಸೃಷ್ಟಿಸಿತ್ತು. ಶ್ರೀಮಂತ ಕುಟುಂಬದ ಹೈಸ್ಕೂಲ್ ಹುಡುಗಿಗೆ ಊರಿನಲ್ಲಿರುವ ಬಡ ಮತ್ತು ಪೆದ್ದ ಮೆಕ್ಯಾನಿಕ್ ಮಾದೇಶನ ಮೇಲೆ ಲವ್ ಆಗುತ್ತದೆ. ಮ್ಯೂಸಿಕಲ್ ಹಿಟ್ ಸಿನಿಮಾ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಾ ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಶ್ರೀಮಂತಿಕೆ ಹೇಗೆ ಒಂದು ಶುದ್ಧ ಪ್ರೀತಿಯನ್ನು ದೂರ ಮಾಡುತ್ತೆ ಅನ್ನೋದು ಸಿನಿಮಾದ ಒನ್ ಲೈನ್ ಕಥೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.