'ನನ್ನ ಅಪ್ಪ-ಅಮ್ಮನೂ ಅದನ್ನೇ ಹೇಳಿದ್ರೆ ನನ್ ನೋಡ್ಕೊಳ್ಳೋದು ಯಾರು?' ಶಾಕಿಂಗ್ ಪ್ರಶ್ನೆ ಕೇಳಿದ ರಶ್ಮಿಕಾ ಮಂದಣ್ಣ!

Published : Oct 04, 2026, 05:13 PM IST

ಸದ್ಯ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅಭಿನಯದ ‘ರಣಬಾಲಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಪ್ರಚಾರ ಕಾರ್ಯದಲ್ಲಿ ಇಬ್ಬರೂ ಬ್ಯುಸಿಯಾಗಿದ್ದು, ಸಂದರ್ಶನಗಳಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡುತ್ತಿದ್ದಾರೆ. ಇದೇ ವೇಳೆ ರಶ್ಮಿಕಾ ಈ ಮಾತು ಹೇಳಿದ್ದಾರೆ..

PREV
17

Rashmika Mandanna and Vijay Deverakonda Marriage Incident: ನ್ಯಾಷನಲ್ ಕ್ರಶ್ ಎಂದೇ ಅಭಿಮಾನಿಗಳ ಮನಸ್ಸಿನಲ್ಲಿ ಸ್ಥಾನ ಪಡೆದಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇದೀಗ ವೈಯಕ್ತಿಕ ಜೀವನದ ಕುತೂಹಲಕಾರಿ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ನಟಿ ಹಾಗೂ ವಿಜಯ್ ದೇವರಕೊಂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಮದುವೆಯ ಸುತ್ತಲಿನ ಕೆಲವು ಮುದ್ದಾದ ಸಂಗತಿಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅದರಲ್ಲೂ ಮದುವೆ ಸಂದರ್ಭದಲ್ಲಿ ಕುಟುಂಬಸ್ಥರು ಹಾಗೂ ಅಭಿಮಾನಿಗಳು ನೀಡಿದ ಒಂದೇ ರೀತಿಯ ಸಲಹೆ ರಶ್ಮಿಕಾ ಅವರನ್ನು ನಗೆಗಡಲಲ್ಲಿ ತೇಲಿಸಿದೆ.

27

ಸದ್ಯ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅಭಿನಯದ ‘ರಣಬಾಲಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಪ್ರಚಾರ ಕಾರ್ಯದಲ್ಲಿ ಇಬ್ಬರೂ ಬ್ಯುಸಿಯಾಗಿದ್ದು, ಸಂದರ್ಶನಗಳಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡುತ್ತಿದ್ದಾರೆ. ಇದೇ ವೇಳೆ ಮದುವೆಯ ಸಂದರ್ಭದಲ್ಲಿ ತಮಗೆ ಬಂದ ಸಲಹೆಗಳ ಬಗ್ಗೆ ರಶ್ಮಿಕಾ ಹೇಳಿಕೊಂಡಿದ್ದಾರೆ.

37

ಮದುವೆಗೂ ಮುನ್ನ ರಶ್ಮಿಕಾ ಅವರ ಕುಟುಂಬಸ್ಥರು ವಿಜಯ್‌ ಅವರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಅವರಿಗೆ ಹೇಳಿದ್ದರಂತೆ. ಮದುವೆಯ ಸಮಯದಲ್ಲೂ ಅಪ್ಪ-ಅಮ್ಮ ಇದೇ ಮಾತನ್ನು ಮತ್ತೊಮ್ಮೆ ನೆನಪಿಸಿದ್ದರಂತೆ. ಆದರೆ ಅಷ್ಟಕ್ಕೆ ಕಥೆ ಮುಗಿದಿಲ್ಲ. ಮದುವೆಯ ನಂತರ ಅಭಿಮಾನಿಗಳೂ ರಶ್ಮಿಕಾ ಬಳಿ ಬಂದು, ‘ನಮ್ಮ ವಿಜಯ್ ಅಣ್ಣನನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ಹೇಳುತ್ತಿದ್ದರಂತೆ!

47

ಇದನ್ನು ಕೇಳಿದ ರಶ್ಮಿಕಾ, ‘ಓಕೆ ಬಾಸ್, ಆದರೆ ನನ್ನನ್ನು ಯಾರು ನೋಡಿಕೊಳ್ಳುತ್ತಾರೆ?’ ಎಂದು ತಮಾಷೆಯಾಗಿ ಪ್ರಶ್ನಿಸಿದ್ದಾರೆ. ಅವರ ಈ ಮಾತು ಕೇಳಿ ವಿಜಯ್ ಕೂಡ ನಕ್ಕಿರುವ ಸಾಧ್ಯತೆ ಇದ್ದು, ಈ ಮುದ್ದಾದ ಹೇಳಿಕೆ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಶುಭಂಕರ್ ಮಿಶ್ರಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಭಾಗವಹಿಸಿದ್ದ ರಶ್ಮಿಕಾ ಮತ್ತು ವಿಜಯ್ ತಮ್ಮ ದಾಂಪತ್ಯ ಜೀವನದ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮದುವೆಯಾದ ನಂತರ ಮೊದಲ ಬಾರಿ ಯಾವ ವಿಚಾರಕ್ಕೆ ಜಗಳವಾಯಿತು ಎಂಬ ಪ್ರಶ್ನೆ ಎದುರಾದಾಗ, ರಶ್ಮಿಕಾ ನೀಡಿದ ಉತ್ತರ ಮತ್ತಷ್ಟು ಕುತೂಹಲ ಮೂಡಿಸಿದೆ.

57

‘ನಾವು ಜಗಳವಾಡುವುದಿಲ್ಲ, ಏಕೆಂದರೆ ಎಲ್ಲವನ್ನೂ ಒಟ್ಟಿಗೆ ಎಂಜಾಯ್ ಮಾಡುತ್ತೇವೆ’ ಎಂದು ರಶ್ಮಿಕಾ ಹೇಳಿದ್ದಾರೆ. ಆದರೆ ಪತ್ನಿಗೆ ಪತಿಯ ಗಮನ ಬೇಕಾದಾಗ ಮಾತ್ರ ಸಣ್ಣಪುಟ್ಟ ಕಿರಿಕಿರಿ ಆಗುತ್ತದಂತೆ. ವಿಜಯ್ ಯಾವುದಾದರೂ ಕೆಲಸದಲ್ಲಿ ಬ್ಯುಸಿಯಾಗಿ ಫೋನ್ ನೋಡುತ್ತಿದ್ದರೆ, ರಶ್ಮಿಕಾ ಮೊದಲು ನಿಧಾನವಾಗಿ ಎರಡು ಬಾರಿ ‘ವಿಜು.. ವಿಜು..’ ಎಂದು ಕರೆಯುತ್ತಾರಂತೆ. ಮೂರನೇ ಬಾರಿ ಪ್ರತಿಕ್ರಿಯೆ ಸಿಗದಿದ್ದರೆ ಮಾತ್ರ ಅವರು ತಾಳ್ಮೆ ಕಳೆದುಕೊಳ್ಳುತ್ತಾರಂತೆ. ಆಗ ವಿಜಯ್ ತಕ್ಷಣ ಪತ್ನಿಯತ್ತ ಗಮನ ಹರಿಸುತ್ತಾರಂತೆ.

67

ಇದೇ ವೇಳೆ ವಿಜಯ್ ದೇವರಕೊಂಡ ಕೂಡ ರಶ್ಮಿಕಾ ಅವರನ್ನು ಮನಸಾರೆ ಹೊಗಳಿದ್ದಾರೆ. ರಶ್ಮಿಕಾ ತುಂಬಾ ಅರ್ಥಮಾಡಿಕೊಳ್ಳುವ ವ್ಯಕ್ತಿ ಎಂದು ಹೇಳಿರುವ ವಿಜಯ್, ತಾವು ಯಾವುದಾದರೂ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೆ ಪತ್ನಿ ತಮಗೆ ಅಗತ್ಯವಾದ ಜಾಗವನ್ನು ನೀಡುತ್ತಾರೆ ಎಂದು ಹೇಳಿದ್ದಾರೆ.

ಇದಕ್ಕೆ ರಶ್ಮಿಕಾ ಕೂಡ ಕಾರಣವನ್ನು ವಿವರಿಸಿದ್ದಾರೆ. ‘ನಾವಿಬ್ಬರೂ ಒಂದೇ ಉದ್ಯಮದಲ್ಲಿ ಕೆಲಸ ಮಾಡುತ್ತೇವೆ. ಶೂಟಿಂಗ್, ಸಿನಿಮಾ ಪ್ರಚಾರ, ರಿಲೀಸ್ ಸೇರಿದಂತೆ ಸಿನಿಮಾ ಕ್ಷೇತ್ರದ ಒತ್ತಡ ನಮಗೆ ಚೆನ್ನಾಗಿ ಗೊತ್ತು’ ಎಂದು ಹೇಳಿದ್ದಾರೆ. ಹೀಗಾಗಿ ಒಬ್ಬರ ವೃತ್ತಿಜೀವನದ ಒತ್ತಡವನ್ನು ಮತ್ತೊಬ್ಬರು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಅವರ ಮಾತಿನ ಸಾರ.

77

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ 2026ರ ಫೆಬ್ರವರಿ 26ರಂದು ಉದಯಪುರದಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದಾರೆ ಎನ್ನಲಾಗಿದ್ದು, ಮದುವೆಗೂ ಮುನ್ನ ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ಇದೀಗ ದಾಂಪತ್ಯದ ಹೊಸ ಅಧ್ಯಾಯದ ಜೊತೆಗೆ ತೆರೆಮೇಲೂ ‘ರಣಬಾಲಿ’ ಮೂಲಕ ಒಂದಾಗಿ ಕಾಣಿಸಿಕೊಳ್ಳುತ್ತಿರುವ ಈ ಜೋಡಿ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories