ದಿಢೀರ್​ ಲೈವ್​ನಲ್ಲಿ ಕಾಣಿಸಿಕೊಂಡ Drishtibottu ನಾಯಕಿ ಅರ್ಪಿತಾ ಕೊಟ್ರು ಬಿಗ್​ ಸರ್​ಪ್ರೈಸ್​! ಏನದು ನೋಡಿ....

Published : Sep 22, 2025, 07:49 PM IST

ದೃಷ್ಟಿಬೊಟ್ಟು ಧಾರಾವಾಹಿಯಲ್ಲಿ ನಾಯಕಿ ದೃಷ್ಟಿಯ ನಿಜಬಣ್ಣ ಬಯಲಾಗಿದ್ದು, ಸೀರಿಯಲ್ ಅಂತ್ಯದ ವದಂತಿಗಳಿವೆ. ಈ ನಡುವೆ, ನಟಿ ಅರ್ಪಿತಾ ಮೋಹಿತೆ ಇನ್​ಸ್ಟಾಗ್ರಾಮ್​ ಲೈವ್​ನಲ್ಲಿ ಕಾಣಿಸಿಕೊಂಡು ಕೆಲವೊಂದು ವಿಷಯದ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು? 

PREV
17
ದೃಷ್ಟಿಬೊಟ್ಟು ನಾಯಕಿ ಪ್ರತ್ಯಕ್ಷ

ದೃಷ್ಟಿಬೊಟ್ಟು ಸೀರಿಯಲ್​ನಲ್ಲಿ ((Drishti Bottu Serial) ದೃಷ್ಟಿ ಪಾತ್ರಧಾರಿಯಾಗಿರುವ ನಟಿ ಅರ್ಪಿತಾ ಮೋಹಿತೆ. ಸದ್ಯ ನಾಯಕಿ ದೃಷ್ಟಿಯ ರಿಯಲ್​ ಬಣ್ಣ ಬಯಲಾಗಿದೆ. ಇಷ್ಟು ವರ್ಷಗಳವರೆಗೆ ಕಪ್ಪು ಮಸಿ ಬಳೆದುಕೊಂಡಿದ್ದ ದೃಷ್ಟಿ ಕೊನೆಗೂ ಗಂಡನ ಬಳಿ ತನ್ನ ರಿಯಲ್​ ಬಣ್ಣವನ್ನು ತೋರಿಸಿದ್ದಾಳೆ. ತನ್ನ ಮಗಳಿಗೆ ಕೆಟ್ಟವರ ದೃಷ್ಟಿ ಬೀಳುತ್ತದೆ ಎನ್ನುವ ಕಾರಣಕ್ಕೆ ದೃಷ್ಟಿಯ ಅಮ್ಮ ಆಕೆಗೆ ಚಿಕ್ಕಂದಿನಿಂದಲೂ ಮೈಯೆಲ್ಲಾ ಮಸಿಬಳೆಯುತ್ತಿದ್ದಳು. ಕೊನೆಗೆ ಅದನ್ನೇ ರೂಢಿ ಮಾಡಿಕೊಂಡಿದ್ದಳು ದೃಷ್ಟಿ. ಗಂಡನಿಗೂ ಅಸಲಿ ವಿಷಯ ಗೊತ್ತಾಗುವಷ್ಟರಲ್ಲಿಯೇ ನಾಯಕ ಕಾಣೆಯಾಗಿದ್ದಾನೆ!

27
ದೃಷ್ಟಿಬೊಟ್ಟು ಮುಂದೇನು?

ಅವನನ್ನು ವಿಲನ್ ಶರಾವತಿ ಸಾಯಿಸಿದಂತೆ ತೋರಿಸಲಾಗಿದೆ. ಆದರೆ ನಾಯಕನಿಗೆ ನಿಜವಾಗಿಯೂ ಏನಾಯ್ತು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಕಲರ್ಸ್​ ಕನ್ನಡದಲ್ಲಿ ಬಿಗ್​ಬಾಸ್​ ಆರಂಭವಾಗಲಿರುವ ಹಿನ್ನೆಲೆಯಲ್ಲಿ ದೃಷ್ಟಿಬೊಟ್ಟು ಸೀರಿಯಲ್​ ಕೂಡ ಅಂತ್ಯಗೊಳ್ಳಲಿದೆ ಎನ್ನಲಾಗುತ್ತಿದೆ. ಇದರ ನಾಯಕ ದತ್ತಾಬಾಯಿ ಅರ್ಥಾತ್​ ವಿಜಯ ಸೂರ್ಯ (Vijay Surya) ಅವರೂ ಬಿಗ್​ಬಾಸ್​ಗೆ ಹೋಗಲಿರುವ ಕಾರಣ, ಸದ್ಯ ಅವರು ಅದರ ತಯಾರಿಯಲ್ಲಿ ಇರುವುದರಿಂದ ಸೀರಿಯಲ್​ನಲ್ಲಿ ಕಾಣಿಸಿಕೊಳ್ತಿಲ್ಲ ಎಂದೂ ಹೇಳಲಾಗುತ್ತಿದೆ.

37
ಸೀರಿಯಲ್​ ಬಗ್ಗೆ ವೀಕ್ಷಕರಿಗೆ ಚಿಂತೆ

ಸೀರಿಯಲ್​ ಮುಂದೇನು ಎಂದು ವೀಕ್ಷಕರು ತಲೆ ಕೆಡಿಸಿಕೊಂಡಿರೋ ಬೆನ್ನಲ್ಲೇ ದೃಷ್ಟಿ ಅರ್ಥಾತ್​ ನಟಿ ಅರ್ಪಿತಾ ಮೋಹಿತೆ (Arpitha Mohite) ಇನ್​ಸ್ಟಾಗ್ರಾಮ್​ ಲೈವ್​ಗೆ ಬಂದು ಬಿಗ್​ ಅಪ್​ಡೇಟ್​ ಕೊಟ್ಟಿದ್ದಾರೆ. ಇವರು ದೃಷ್ಟಿಬೊಟ್ಟು ಸೀರಿಯಲ್​ ಬಗ್ಗೆ ಏನಾದರೂ ಹೇಳುತ್ತಿದ್ದಾರೆ ಎಂದು ನೆಟ್ಟಿಗರೆಲ್ಲರೂ ಕಾತರದಿಂದ ಕಾಯುತ್ತಿದ್ದರು. ಆದರೆ ನಟಿ ಬಂದದ್ದೇ ಬೇರೆ ವಿಷಯಕ್ಕೆ.

47
ಸುಬ್ಬಣ್ಣ ಮತ್ತು ವಾಸಂತಿ ಭಕ್ತಿ ಕಥೆ

ಅದೇನೆಂದರೆ ಇಂದಿನಿಂದ ನವರಾತ್ರಿ ಶುರು ಆಗಿರುವ ಹಿನ್ನೆಲೆಯಲ್ಲಿ ಕಲರ್ಸ್​ ಕನ್ನಡದಲ್ಲಿ ನವಶಕ್ತಿ- ನವರಾತ್ರಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಅದು 10 ಗಂಟೆಗೆ ಪ್ರಸಾರ ಆಗಲಿದೆ. ಅದರಲ್ಲಿ ಇಂದು ಅಂದರೆ ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ಅವತಾರವಿದೆ. ಇಂದು ಶೈಲಪುತ್ರಿಗೆ ಪೂಜೆ ಸಲ್ಲಿಸಲಾಗುವುದು. ಆದ್ದರಿಂದ ಅರ್ಪಿತಾ ಅವರು ಶೈಲಪುತ್ರಿ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

57
ನವರಾತ್ರಿಯ ಮೊದಲ ದಿನ ಆರಾಧನೆ

ಇನ್ನು ಶೈಲಪುತ್ರಿ (Shailaputri) ಕುರಿತು ಪುರಾಣದಲ್ಲಿ ಉಲ್ಲೇಖವಿರುವುದು ಏನೆಂದರೆ, ಶೈಲಪುತ್ರಿಯು ಪರ್ವತ ರಾಜ ಹಿಮವತ್ ಮಗಳು. ಈ ರೂಪವು ಪಾರ್ವತಿ ದೇವಿಯ ಶುದ್ಧ ರೂಪವಾಗಿ ಪ್ರತಿನಿಧಿಸಲ್ಪಡುತ್ತದೆ. ನವರಾತ್ರಿಯ ಮೊದಲ ದಿನದಂದು ಪೂಜಿಸಲ್ಪಡುವ ಮೊದಲ ನವದುರ್ಗೆ ಇವಳು ಮತ್ತು ಈಕೆಯನ್ನು ಸತಿ ದೇವಿಯ ಪುನರ್ಜನ್ಮ ಎಂದು ಹೇಳಲಾಗುತ್ತದೆ.

67
ಆರಾಧನೆಯಿಂದ ಜೀವನ ಸಾಕಾರ

ಶೈಲಪುತ್ರಿ ದೇವಿಯ ಆರಾಧನೆಯು ನವರಾತ್ರಿಯ ಮೊದಲ ದಿನದಂದು ಮಾತ್ರವಲ್ಲ, ಜೀವನದ ಪ್ರತಿಯೊಂದು ಸಂದರ್ಭದಲ್ಲೂ ಮುಖ್ಯವಾಗಿ ಮಾಡಬೇಕು. ಈಕೆಯ ಆರಾಧನೆಯು ತಾಳ್ಮೆ, ಧೈರ್ಯ ಮತ್ತು ಶಾಂತಿಯ ಮಾರ್ಗ ತೋರಿಸುತ್ತದೆ. ಆಕೆಯ ಅನುಗ್ರಹದಿಂದ ಸಾಧಕನು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಮತ್ತು ತೃಪ್ತಿಯನ್ನು ಪಡೆಯುತ್ತಾನೆ ಎನ್ನುತ್ತದೆ ಪುರಾಣ. ಶೈಲಪುತ್ರಿ ದೇವಿಯ ಹೆಸರು ಸ್ವತಃ ಶಕ್ತಿ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆ ಮತ್ತು ಅವಳನ್ನು ಪೂಜಿಸುವುದರಿಂದ ಭಕ್ತನು ಅಪಾರ ಸಂತೋಷ ಮತ್ತು ಶಾಂತಿಯನ್ನು ಪಡೆಯುತ್ತಾರೆ ಎನ್ನಲಾಗಿದೆ.

77
ಶೈಲಪುತ್ರಿಯ ಕಥೆ ಹೀಗಿದೆ...

ಇನ್ನು ಶೈಲಪುತ್ರಿಯ ಕಥೆ ಹೇಳುವುದಾದರೆ, ಸತಿ ದೇವಿಯು ತನ್ನ ತಂದೆ ದಕ್ಷನ ಯಾಗದಲ್ಲಿ ಹಾರಿ ತನ್ನನ್ನು ಅರ್ಪಿಸಿಕೊಂಡಾಗ , ಅವಳು ತನ್ನ ಮುಂದಿನ ಜನ್ಮದಲ್ಲಿ ಪರ್ವತಗಳ ರಾಜ ಹಿಮಾಲಯದ ಮಗಳಾಗಿ ಜನಿಸಿದಳು. ಶೈಲ ಎಂಬುದು ಹಿಮಾಲಯದ ಇನ್ನೊಂದು ಹೆಸರು. ಪರ್ವತಗಳ ರಾಜನಾದ ಹಿಮಾಲಯದ ಸ್ಥಳದಲ್ಲಿ ಆಕೆಯು ಜನಸಿರುವುದರಿಂದ ಆಕೆಗೆ ಈ ಹೆಸರನ್ನು ನೀಡಲಾಗಿದೆ. ಆಕೆಯ ಮೂಲ ಹೆಸರು ಪಾರ್ವತಿ. ದೇವಿಯು ಶಿವನನ್ನು ತನ್ನ ಪತಿಯನ್ನಾಗಿ ಪಡೆದುಕೊಳ್ಳುವುದಕ್ಕಾಗಿ ತೀವ್ರ ತಪಸ್ಸನ್ನು ಮಾಡಿದಳು. ಆಕೆಯ ತಪಸ್ಸಿಗೆ ಸಂತಸಗೊಂಡ ಶಿವನು ಅವಳಿಗೆ ಕಾಣಿಸಿಕೊಂಡು ತನ್ನ ಪತ್ನಿಯನ್ನಾಗಿ ಸ್ವೀಕರಿಸಿದನು.

Read more Photos on
click me!

Recommended Stories