ಕರಗಿದೆ ಕಾಯುವಿಕೆ.. ಅಪ್ಪನಿಗೆ ಸಿಕ್ಕಿದೆ 'ಅಪ್ಪು'ವಿನ ಅಪ್ಪುಗೆ! ಗೌತಮ್ ಖುಷಿಗೆ ಪಾರವೇ ಇಲ್ಲ!

Published : Sep 22, 2025, 06:29 PM IST

ಗೌತಮ್ ಖುಷಿಗೆ ಪಾರವೇ ಇಲ್ಲ: ತನ್ನ ಮಗ ಅಪ್ಪು ಎಂದು ತಿಳಿದು ಗೌತಮ್ ಭಾವುಕನಾಗಿದ್ದಾನೆ. ಆದರೆ ಈ ಸತ್ಯ ತಿಳಿಯದ ಭೂಮಿಕಾ, ಶಾಲೆಗೆ ಅಪರಿಚಿತನನ್ನು ಕರೆತಂದಿದ್ದಕ್ಕೆ ಮಗನನ್ನು ಪ್ರಶ್ನಿಸುತ್ತಾಳೆ. ಶಾಲೆಯಲ್ಲಿ ಗೌತಮ್‌ನನ್ನು ಕಂಡು ಶಿಕ್ಷಕಿಯರು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.

PREV
15
ಮುದ್ದು ಕಂದನ ಅಪ್ಪುಗೆ

ಮಗನನ್ನು ನೋಡಲು ಬಂದಿರುವ ಗೌತಮ್‌ ದಿವಾನ್‌ಗೆ ಮುದ್ದು ಕಂದನ ಅಪ್ಪುಗೆ ಸಿಕ್ಕಿದೆ. ಕಳೆದೊಂದು ವಾರದಿಂದ ತನ್ನೊಂದಿಗೆ ತಲೆಹರಟೆ ಮಾಡುತ್ತಿದ್ದ ಹುಡುಗನೇ ತನ್ನ ಮಗ ಎಂದು ತಿಳಿದು ಗೌತಮ್ ಭಾವುಕನಾಗಿದ್ದಾನೆ.

25
ಮಗನ ವಿಷಯ ಗೊತ್ತಾಗಿದೆ

ಶಾಲೆಗೆ ಬೇರೆಯವರನ್ನು ಕರೆದುಕೊಂಡು ಬಂದು ತನ್ನ ಅಪ್ಪಾ ಎಂದು ಪರಿಚಯಿಸಿದ್ದಾನೆ ಎಂಬ ವಿಷಯ ಭೂಮಿಕಾಗೆ ಗೊತ್ತಾಗಿದೆ. ಆದರೆ ಮಗ ಅಪ್ಪು ಕರೆದುಕೊಂಡು ಬಂದಿರೋದು ತನ್ನ ಸ್ವಂತ ತಂದೆ ಎಂಬ ಸತ್ಯ ಭೂಮಿಕಾಗೆ ಗೊತ್ತಾಗಿಲ್ಲ. ಹೀಗಾಗಿ ಕ್ಲಾಸ್‌ರೂಮಿನಲ್ಲಿದ್ದ ಮಗನನ್ನು ಮನೆಗೆ ಕರೆದುಕೊಂಡು ಬಂದಿದ್ದಾಳೆ.

35
ಗೌತಮ್ ಜೊತೆ ಸೆಲ್ಫಿ ಕೇಳಿದ ಶಿಕ್ಷಕಿಯರು

ಶಾಲೆಗೆ ಗೌತಮ್‌ ಓಜಿ ಲುಕ್‌ನಲ್ಲಿ ಬಂದಿರೋದನ್ನು ಕಂಡು ಅಲ್ಲಿಯ ಟೀಚರ್ಸ್ ಖುಷಿಯಿಂದ ಸೆಲ್ಫಿ ಕೇಳುತ್ತಾರೆ. ಯಜಮಾನರು ತುಂಬಾ ಬ್ಯುಸಿ ಎಂದು ಹೇಳುತ್ತಿದ್ದರು. ನಾವು ನಿಮ್ಮನ್ನೇ ನೋಡಿರಲಿಲ್ಲ ಸರ್. ನಿಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳೋಣವಾ ಎಂದು ಶಿಕ್ಷಕಿಯರು ಕೇಳುತ್ತಾರೆ. ಆದ್ರೆ ಗೌತಮ್, ಮೀಟಿಂಗ್ ನೆಪ ಹೇಳಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

45
ಮನೆಯಲ್ಲಿ ಅಪ್ಪುಗೆ ಕ್ಲಾಸ್

ಮಗನನ್ನು ಮನೆಗೆ ಕರೆದುಕೊಂಡು ಬಂದಿರುವ ಭೂಮಿಕಾ, ಶಾಲೆಗೆ ಬಂದಿರೋದು ಯಾರು ಎಂದು ಅಪ್ಪುನನ್ನು ಪ್ರಶ್ನೆ ಮಾಡಿದ್ದಾನೆ. ಆದರೆ ತನ್ನೊಂದಿಗೆ ಬಂದಿರೋದು ತಂದೆ ಎಂಬ ವಿಷಯ ಅಪ್ಪುಗೆ ಗೊತ್ತಿಲ್ಲ. ಆ ವ್ಯಕ್ತಿ ಟ್ಯಾಕ್ಸಿ ಡ್ರೈವರ್ ಎಂಬ ವಿಷಯ ಮಾತ್ರ ಅಪ್ಪುಗೆ ಗೊತ್ತಿದೆ.

ಇದನ್ನೂ ಓದಿ: ಮಂತ್ರಕ್ಕೆ ತಿರುಮಂತ್ರ, ಎಲ್ಲರೂ ಶಾಕ್; ಡೋಂಟ್ ಅಂಡರ್ ಎಸ್ಟಿಮೇಟ್ ಪವರ್ ಆಫ್ ಅಂಬಿಕಾ

55
ಅಮೃತಧಾರೆ ಸೀರಿಯಲ್

ಇಂದು ಬಿಡುಗಡೆಯಾಗಿರುವ ಪ್ರೋಮೋಗೆ ವೀಕ್ಷಕರು ಫಿದಾ ಆಗಿದ್ದಾರೆ. ಇಂದಿನ ಸಂಚಿಕೆಯನ್ನು ನೋಡಲು ನಾವು ಕಾಯುತ್ತಿದ್ದೇವೆ ಎಂದು ಕಮೆಂಟ್ ಮಾಡಿದ್ದಾರೆ. ಅಮೃತಧಾರೆ ಸೀರಿಯಲ್ ಪ್ರತಿ ದಿನ ಸಂಜೆ 7 ಗಂಟೆಗೆ ಪ್ರಸಾರವಾಗುತ್ತದೆ.

ಇದನ್ನೂ ಓದಿ: ನಿತಿನ್ ಜೊತೆಗಿನ ಪ್ರೇಮ ಪಯಣದ ಗುಟ್ಟು ಹಂಚಿಕೊಂಡ ಸರಿಗಮಪ ಶೋ ಗಾಯಕಿ ಸುಹಾನಾ ಸೈಯದ್

Read more Photos on
click me!

Recommended Stories