Amruthadhaare Serial: ಸತ್ಯ ಬಾಯ್ಬಿಟ್ಟ ದಿಯಾ- ಶಕುಂತಲಾ ತಲೆಗೆ ಭೂಮಿಕಾ ಪಿಸ್ತೂಲ್​! ಅತ್ತೆ ಖೇಲ್​ ಕಥಮ್​!

Published : Sep 02, 2025, 05:53 PM IST

ಅಮೃತಧಾರೆ ಇದೀಗ ರೋಚಕ ತಿರುವು ಪಡೆದುಕೊಂಡಿದ್ದು, ಮಗುವನ್ನು ಕಿಡ್​ನ್ಯಾಪ್​ ಮಾಡಿಸಲು ಅತ್ತೆಯೇ ಹೇಳಿದ್ದಾಗಿ ದಿಯಾ ಬಾಯ್ಬಿಟ್ಟಿದ್ದಾಳೆ. ಅಲ್ಲಿಗೆ ಶಕುಂತಲಾ ಖೇಲ್​ ಕಥಮ್​ ಆಗಿದೆ. ಮುಂದೇನಾಯ್ತು ನೋಡಿ... 

PREV
18
ರಂಗೋಲಿ ಕೆಳಗೆ ನುಸುಳಿದ ಭೂಮಿಕಾ

ಜೈದೇವ್​ ಮತ್ತು ಶಕುಂತಲಾ ಚಾಪೆ ಕೆಳಗೆ ನೂಕಿದರೆ, ಭೂಮಿಕಾ ಮತ್ತು ಮಲ್ಲಿ ರಂಗೋಲಿ ಕೆಳಗೇ ನುಸುಳಿದ್ದಾರೆ. ಅತ್ತೆ ಜೈದೇವ್​ ಭೂಮಿಕಾ ಮಗುವನ್ನು ಕಿಡ್​ನ್ಯಾಪ್​ ಮಾಡಿದ್ದ. ಇದರ ಸೂತ್ರಧಾರಿ ಶಕುಂತಲಾ ಎನ್ನುವುದು ಬೇರೆ ಹೇಳಬೇಕಾಗಿಲ್ಲ.

28
ಹಿಂದೆಯೂ ಕಿಡ್​ನ್ಯಾಪ್​

ಅಷ್ಟಕ್ಕೂ ಹೀಗೆ ಆಗ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆಯೂ ಹೀಗೆಯೇ ಮಾಡಿದ್ದರು ಇವರಿಬ್ಬರು. ಆ ಸಲವೂ ಪ್ಲ್ಯಾನ್ ಫ್ಲಾಪ್​ ಆಗಿತ್ತು. ಈ ಸಲ ಗೌತಮ್​ ವಿದೇಶಕ್ಕೆ ಹೋದದನ್ನೇ ನೋಡಿ ಮಗುವನ್ನು ಇಬ್ಬರೂ ಸೇರಿ ಕಿಡ್​ನ್ಯಾಪ್​ ಮಾಡಿಸಿದ್ದಾರೆ.

38
ಡ್ರೋನ್​ ಮೂಲಕ ಪತ್ತೆ

ಆದರೆ ಭೂಮಿಕಾ ಮತ್ತು ಮಲ್ಲಿ ಪೊಲೀಸರನ್ನು ಕರೆಸಿ, ಡ್ರೋನ್​ ಮೂಲಕ ಅದನ್ನು ಪತ್ತೆ ಹಚ್ಚಿಸಿದ್ದಾರೆ. ಆದರೆ ಮಗುವನ್ನು ಜೈದೇವ ಸುಲಭದಲ್ಲಿ ಕೊಡುವುದಿಲ್ಲ ಎಂದು ಅವರಿಗೆ ಗೊತ್ತು. ಇದೇ ಕಾರಣಕ್ಕೆ ಮಲ್ಲಿ ದಿಯಾಳನ್ನು ಕಿಡ್​ನ್ಯಾಪ್​ ಮಾಡಿಕೊಂಡು ಬಂದಿದ್ದಳು.

48
ದಿಯಾಳ ಕಿಡ್​ನ್ಯಾಪ್​

ಮಗುವಿಗೆ ಬದಲಾಗಿ ದಿಯಾಳನ್ನು ಅವರು ಪರ್ಯಾಯ ವ್ಯವಸ್ಥೆಯಾಗಿ ಇಟ್ಟುಕೊಂಡಿದ್ದರು. ಅದೇ ವೇಳೆ ಮಗುವನ್ನು ಕರೆದುಕೊಂಡು ಅದನ್ನು ಕೊಲ್ಲುವ ಬೆದರಿಕೆ ಹಾಕಿದ್ದಾನೆ ಜೈದೇವ್​. ಅದಾಗಲೇ ಪಿಸ್ತೂಲ್​ ತಂದಿದ್ದ ಭೂಮಿಕಾ, ಅದನ್ನು ಜೈದೇವ್​ ತಲೆಗೆ ಗುರಿ ಇಟ್ಟಿದ್ದಾಳೆ. ಅಷ್ಟರಲ್ಲಿಯೇ ಕೈಯಲ್ಲಿ ಪಿಸ್ತೂಲ್​ ಇದ್ದರೆ ಸಾಲದು ಅದನ್ನು ಹೊಡೆಯಲು ಧೈರ್ಯಬೇಕು ಎಂದು ಮಗುವಿನತ್ತ ಗುರಿ ಇಟ್ಟಿದ್ದಾನೆ ಜೈದೇವ.

58
ದಿಯಾಳ ಕರೆತಂದ ಮಲ್ಲಿ

ಅದೇ ವೇಳೆ, ಮಲ್ಲಿ ದಿಯಾಳನ್ನು ಕರೆದುಕೊಂಡು ಬಂದಿದ್ದಾಳೆ. ಅವಳನ್ನು ಕಟ್ಟಿ ಹಾಕಿದ್ದನ್ನು ನೋಡಿ ಜೈದೇವ ಥರಥರ ನಡುಗಿ ಹೋಗಿದ್ದಾನೆ. ಅವರ ತಲೆಗೆ ಪಿಸ್ತೂಲ್​ ಗುರಿ ಇಟ್ಟಿದ್ದರಿಂದ ಮಗುವನ್ನು ವಾಪಸ್​ ಕೊಡಲೇಬೇಕಾದ ಅನಿವಾರ್ಯತೆ ಜೈದೇವ್​ಗೆ ಬಂದಿದೆ.

68
ಬಾಯ್ಬಿಟ್ಟ ದಿಯಾ

ಇತ್ತ ಹೆದರಿದ ದಿಯಾ, ಇದನ್ನೆಲ್ಲಾ ಮಾಡಿಸಲು ಅತ್ತೆನೇ ಹೇಳಿದ್ದು ಎಂದು ಬಾಯಿ ಬಿಟ್ಟಿದ್ದಾಳೆ. ಅಷ್ಟಕ್ಕೂ ಭೂಮಿಕಾಗೆ ಇದೇನು ಗೊತ್ತಿರದೇ ಇರುವ ವಿಷಯವೇನಲ್ಲ. ಆದರೆ ದಿಯಾಳ ಬಾಯಿಯಿಂದ ಜೈದೇವ್​ ಎದುರು ಬರಿಸಬೇಕಿತ್ತು ಅಷ್ಟೇ.

78
ಕಿಡಿಕಿಡಿಯಾದ ಭೂಮಿಕಾ

ಅತ್ತೆಯ ಹೆಸರು ಹೇಳುತ್ತಿದ್ದಂತೆಯೇ ಕಿಡಿಕಿಡಿಯಾದ ಭೂಮಿಕಾ ನೇರವಾಗಿ ಅತ್ತೆಯ ಬಳಿ ಹೋಗಿ ಹಣೆಗೆ ಪಿಸ್ತೂಲ್​ ಗುರಿಯಿಟ್ಟಿದ್ದಾಳೆ. ಇನ್ನೇನು ಹೊಡೆಯುವುದರಲ್ಲಿ ಇರುವಾಗಲೇ ಶಕುಂತಲಾ ಬೆವರಿ ಹೋಗಿದ್ದಾಳೆ. ಶಕುಂತಲಾ ಖೇಲ್​ ಅಲ್ಲಿಗ ಕಥಮ್​ ಆಗಿದೆ. ಆದರೆ ಅಷ್ಟಕ್ಕೂ ಭೂಮಿಕಾ ಏನೂ ಹೊಡೆಯಲ್ಲ ಬಿಡಿ. ಆದರೆ, ಇನ್ನು ಶಕುಂತಲಾ ತನ್ನ ಬಾಲ ಬಿಚ್ಚುವಂತಿಲ್ಲ ಅಷ್ಟೇ.

88
ರೋಚಕ ತಿರುವಿನಲ್ಲಿ ಸೀರಿಯಲ್​

ಒಟ್ಟಿನಲ್ಲಿ, ಅಮೃತಧಾರೆ ಸೀರಿಯಲ್​ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಲೇ ಟಿಆರ್​ಪಿ ಭದ್ರ ಮಾಡಿಕೊಂಡಿದ್ದು, ವೀಕ್ಷಕರನ್ನು ಸೆಳೆಯುತ್ತಲೇ ಇದೆ. ವಾಸ್ತವಕ್ಕೆ ಸಹಜವಾಗಿ ದೂರವಾಗಿದ್ದರೂ, ಎಲ್ಲಿಯೂ ಬೋರ್​ ಆಗದಂತೆ ಸೀರಿಯಲ್​ ನಡೆದುಕೊಂಡು ಹೋಗುತ್ತಿರುವುದಕ್ಕೆ ನೆಟ್ಟಿಗರು ಒಳ್ಳೊಳ್ಳೆ ಕಮೆಂಟ್​ ಹಾಕುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories