ಕಿಚ್ಚ ಸುದೀಪ್ ಅವರ 52ನೇ ಹುಟ್ಟುಹಬ್ಬದಂದು 'ಮಾರ್ಕ್' ಚಿತ್ರದ ಟೈಟಲ್ ಟೀಸರ್ ಮತ್ತು 'ಬಿಲ್ಲ ರಂಗ ಭಾಷಾ' ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಹೊಸ ಹೇರ್‌ಸ್ಟೈಲ್‌ನೊಂದಿಗೆ ಕಾಣಿಸಿಕೊಂಡಿರುವ ಸುದೀಪ್, ಈ ಬಗ್ಗೆ ಇಂಟರೆಸ್ಟಿಂಗ್ ವಿಷ್ಯ ರಿವೀಲ್ ಮಾಡಿದ್ದಾರೆ. ಏನದು ನೋಡಿ!
ಇಂದು ಅರ್ಥಾತ್ ಸೆಪ್ಟೆಂಬರ್ 2 ಕಿಚ್ಚ ಸುದೀಪ್ (Kiccha Sudeep) ಅವರಿಗೆ 52ನೇ ಹುಟ್ಟುಹಬ್ಬದ ಸಂಭ್ರಮ . ಇದಾಗಲೇ ನಟ, ರಾತ್ರಿಯೇ ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ ಮಾರ್ಕ್ ಸಿನಿಮಾ ಟೈಟಲ್ ಟೀಸರ್ ರಿಲೀಸ್ ಆಗಿದೆ. ಬಿಲ್ಲಾ ರಂಗ ಭಾಷಾ ಚಿತ್ರದ ಹೊಸ ಫೋಸ್ಟರ್ ರಿಲೀಸ್ ಆಗಿದ್ದು, ಇದರಲ್ಲಿ ಸುದೀಪ್ ಅವರ ಗೆಟಪ್ ನೋಡಿ ಫ್ಯಾನ್ಸ್ ಹುಚ್ಚೆದ್ದು ಕುಣಿಯುತ್ತಿದ್ದಾರೆ.
27
ಕ್ರಿಸ್ಮಸ್ಗೆ ಮಾರ್ಕ್
ಮಾರ್ಕ್ ಸಿನಿಮಾ ಕ್ರಿಸ್‌ಮಸ್ ಹಬ್ಬಕ್ಕೆ ಥಿಯೇಟರ್‌ಗೆ ಬರೋದಾಗಿ ಅಭಿಮಾನಿಗಳಿಗೆ ಕಿಚ್ಚನಿಂದ ಇದಾಗಲೇ ಗುಡ್‌ನ್ಯೂಸ್ ನೀಡಿದ್ದು, ಬಿಲ್ಲ ರಂಗ ಬಾಷಾ ಸಿನಿಮಾದ ಬಿಗ್ ಅಪ್‌ಡೇಟ್ ಕೂಡ ನೀಡಿದ್ದಾರೆ. ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಬಹುನಿರೀಕ್ಷಿತ ‘ಬಿಲ್ಲ ರಂಗ ಭಾಷಾ: ದಿ ಫಸ್ಟ್ ಬ್ಲಡ್’ (Billa Ranga Baasha) ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಶೂಟಿಂಗ್ ಆರಂಭವಾಗಿ ಅದೆಷ್ಟೋ ದಿನಗಳ ಬಳಿಕ ಇಂದು ಸುದೀಪ್ ಬರ್ತಡೇ ಪ್ರಯುಕ್ತ ನಿರ್ದೇಶಕ ಅನೂಪ್ ಭಂಡಾರಿ ಅವರು ಸಿನಿಮಾದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದಾರೆ.
37
ಬಿಲ್ಲ ರಂಗ ಬಾಷಾ ಹಾಗೂ ಮಾರ್ಕ್ ಚಿತ್ರದ ಚಿತ್ರೀಕರಣ
ವಿಕ್ರಾಂತ್ ರೋಣ ಚಿತ್ರದ ಸಕ್ಸಸ್‌ನ ನಂತರ ಅನೂಪ್ ಭಂಡಾರಿ ಹಾಗೂ ಸುದೀಪ್ ಕಾಂಬಿನೇಷನ್‌ನಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ಮೂಡಿ ಬರ್ತಿರುವ ಬಿಲ್ಲ ರಂಗ ಬಾಷಾ ಈ ಸಿನಿಮಾದ ಖಡಕ್ ಪೋಸ್ಟರ್ ಬರ್ತ್ಡೇ ಸ್ಪೆಷಲ್ ರಿಲೀಸ್ ಮಾಡಿದೆ ಚಿತ್ರತಂಡ. ಕಿಚ್ಚನ ಬೆಂಕಿ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ತಯಾರಾಗ್ತಿರುವ ಬಿಲ್ಲ ರಂಗ ಬಾಷಾ ಹಾಗೂ ಮಾರ್ಕ್ ಚಿತ್ರದ ಚಿತ್ರೀಕರಣ ನಡೆಯುತ್ತಿವೆ.
ಇವೆಲ್ಲಕ್ಕಿಂತಲೂ ಹೆಚ್ಚಾಗಿ ಸುದೀಪ್ ಅವರ ಕರ್ಲಿ ಹೇರ್ಸ್ಟೈಲ್ ಗೆಟಪ್ ಎಲ್ಲರ ಗಮನ ಸೆಳೆಯುತ್ತಿದೆ. ಈ ಬಗ್ಗೆ ಇದಾಗಲೇ ಸಾಕಷ್ಟು ಮಂದಿ ಪ್ರಶ್ನೆ ಮಾಡುತ್ತಿದ್ದಾರೆ. ಇದೀಗ ಅವರಿಗೆ ಈ ಹೇರ್ಸ್ಟೈಲ್ ಬಗ್ಗೆ ಪ್ರಶ್ನಿಸಲಾಗಿದೆ. ಇದರ ವಿನ್ಯಾಸಕರು ಯಾರು? ಬಿಗ್ಬಾಸ್ಗೂ ಇದಕ್ಕೂ ಸಂಬಂಧ ಇದ್ಯಾ? ಬಿಗ್ಬಾಸ್ನಲ್ಲಿಯೂ (Bigg Boss 12) ಇದೇ ಗೆಟಪ್ನಲ್ಲಿ ಬರ್ತೀರಾ ಎನ್ನುವ ಪ್ರಶ್ನೆಯನ್ನೂ ಕೇಳಲಾಗಿದೆ.
57
ಜಾಣ್ಮೆಯಿಂದ ಸುದೀಪ್ ಉತ್ತರ
ಇದಕ್ಕೆ ಸುದೀಪ್ ಅವರು ಜಾಣ್ಮೆಯಿಂದ ಉತ್ತರ ಕೊಟ್ಟಿದ್ದಾರೆ. ಈಗಲೇ ಹೇರ್ಸ್ಟೈಲಿಸ್ಟ್ ಬಗ್ಗೆ ಹೇಳಲ್ಲ. ಆಮೇಲೆ ನೀವು ಅವರ ಬಳಿ ಓಡೋದು, ನಂತರ ನನಗೇ ಅವರು ಸಿಗದೇ ಹೋಗುವುದು, ಹೀಗೆಲ್ಲಾ ಆಗುವುದು ಬೇಡ, ಇನ್ನೊಮ್ಮೆ ಹೇಳ್ತೇನೆ ಎಂದಿದ್ದಾರೆ. ಬಿಗ್ಬಾಸ್ ಬಗ್ಗೆ ಕೇಳಿದ ಪ್ರಶ್ನೆಗೆ ನಟ ದೊಡ್ಡದಾಗಿ ತಲೆ ಅಲ್ಲಾಡಿಸಿದ್ದಾರೆ.
67
ಉದ್ದ ಕೂದಲು ಬೆಳೆಸಿ ಎಂದ ನಟ
ಅದೇ ವೇಳೆ, ಮೊದಲು ಇಷ್ಟು ಉದ್ದ ಕೂದಲು ಬೆಳೆಸಿಕೊಂಡು ಬನ್ನಿ, ಆಮೇಲೆ ಎಲ್ಲಾ ಡಿಟೇಲ್ಸ್ ಹೇಳುತ್ತೇನೆ ಎನ್ನುವ ಮೂಲಕ ಎಲ್ಲ ಪ್ರಶ್ನೆಗಳಿಗೂ ಜಾಣತನದಿಂದ ನುಣುಚಿಕೊಂಡಿದ್ದಾರೆ.
77
ಬಿಗ್ಬಾಸ್ 12 ಘೋಷಣೆ
ಅಷ್ಟಕ್ಕೂ ಇದಾಗಲೇ ಬಿಗ್ಬಾಸ್ 12 (BBK 12) ಬಗ್ಗೆ ಬಿಗ್ ಅಪ್‌ಡೇಟ್ ಕೂಡ ನೀಡಲಾಗಿದೆ. ಮೈಸೂರಿನಲ್ಲಿ ನಡೆದ ನಿರ್ಮಾಪಕ, ಉದ್ಯಮಿ, ರಾಜಕಾರಣಿ ಸಂದೇಶ್ ನಾಗರಾಜ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಬಿಗ್ಬಾಸ್ ಬಗ್ಗೆ ಸುದೀಪ್ ರಿವೀಲ್ ಮಾಡಿದ್ದಾರೆ. ಸೆಪ್ಟೆಂಬರ್ 28ರಂದು ಇದು ಆರಂಭ ಆಗಲಿರುವುದಾಗಿ ಹೇಳಿದ್ದಾರೆ. ಇದರಲ್ಲಿಯೂ ಸುದೀಪ್ ಇದೇ ಗೆಟಪ್ನಲ್ಲಿ ಇರಲಿದ್ದಾರಾ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.