ಧುರಂಧರ್ ಬೆಡಗಿಗೆ ಸಿಕ್ತಾ ಮತ್ತೊಂದು ಬಿಗ್ ಆಫರ್? ಬಾಲಿವುಡ್‌ನಲ್ಲಿ ಕೇಳಿಬಂತು ಹೊಸ ಸುದ್ದಿ!

Published : Nov 29, 2026, 07:51 PM IST

‘ಧುರಂಧರ್’ ಬೆಡಗಿ ಸಾರಾ ಅರ್ಜುನ್‌ಗೆ ಯಶ್ ರಾಜ್ ಫಿಲ್ಮ್ಸ್‌ನಿಂದ ಮತ್ತೊಂದು ಸಿನಿಮಾ ಆಫರ್ ಸಿಕ್ಕಿದೆ ಎನ್ನಲಾಗಿದೆ. ಮನೀಶ್ ಶರ್ಮಾ ನಿರ್ದೇಶನದ ಎಂಟು ಹಾಡುಗಳ ಮ್ಯೂಸಿಕಲ್ ಲವ್‌ಸ್ಟೋರಿಯಲ್ಲಿ ನಟಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಕುತೂಹಲ ಮೂಡಿದೆ.

PREV
14
ಮತ್ತೊಂದು ಬಂಪರ್ ಆಫರ್

‘ಧುರಂಧರ್’ ಸಿನಿಮಾದ ಬ್ಲಾಕ್‌ಬಸ್ಟರ್ ಯಶಸ್ಸಿನ ಬಳಿಕ ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಆಗಿ ಗುರುತಿಸಿಕೊಂಡಿರುವ ಯುವ ನಟಿ ಸಾರಾ ಅರ್ಜುನ್ ಅವರಿಗೆ ಬಾಲಿವುಡ್‌ನಲ್ಲಿ ಮತ್ತೊಂದು ಬಂಪರ್ ಆಫರ್ ಸಿಕ್ಕಿದೆ ಎನ್ನಲಾಗುತ್ತಿದೆ. ಯಶ್ ರಾಜ್ ಫಿಲ್ಮ್ಸ್ (ವೈಆರ್‌ಎಫ್) ಬ್ಯಾನರ್‌ನಲ್ಲಿ ನಿರ್ಮಾಣವಾಗಲಿರುವ ಮ್ಯೂಸಿಕಲ್ ಲವ್‌ಸ್ಟೋರಿಯಲ್ಲಿ ನಟಿಸಲು ಸಾರಾ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

24
ಮ್ಯೂಸಿಕಲ್ ರೊಮ್ಯಾಂಟಿಕ್ ಸಿನಿಮಾ

ಇನ್ನೂ ಹೆಸರಿಡದ ಈ ಮ್ಯೂಸಿಕಲ್ ರೊಮ್ಯಾಂಟಿಕ್ ಸಿನಿಮಾಗೆ ಮನೀಶ್ ಶರ್ಮಾ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ‘ಸಪ್ನೇ ವರ್ಸಸ್ ಎವೆರಿವನ್’ ಖ್ಯಾತಿಯ ಅಂಬರೀಶ್ ವರ್ಮಾ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ, ಸಿನಿಮಾದಲ್ಲಿ ಒಟ್ಟು ಎಂಟು ಹಾಡುಗಳು ಇರಲಿವೆಯಂತೆ. ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, 2027ರ ಜನವರಿಯಲ್ಲಿ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಯೋಜನೆ ರೂಪಿಸಿದೆ ಎನ್ನಲಾಗಿದೆ.

34
ನಿರ್ದೇಶಕರ ಯೋಜನೆಯೇನು?

‘ಬ್ಯಾಂಡ್ ಬಾಜಾ ಬಾರಾತ್’, ‘ಶುದ್ಧ್ ದೇಸಿ ರೊಮ್ಯಾನ್ಸ್’ ಅಂತಹ ಯೂತ್‌ಫುಲ್ ಹಿಟ್ ಸಿನಿಮಾಗಳನ್ನು ನೀಡಿರುವ ಮನೀಶ್ ಶರ್ಮಾ, ‘ಟೈಗರ್ 3’ ಬಳಿಕ ಮತ್ತೆ ತಮ್ಮ ನೆಚ್ಚಿನ ರೊಮ್ಯಾಂಟಿಕ್ ಜಾನರ್‌ಗೆ ಮರಳುತ್ತಿದ್ದಾರೆ. ಆದರೆ, ಈ ಕಥೆಯನ್ನು ‘ಆಶಿಕಿ’ ಅಥವಾ ‘ಸಯಾರಾ’ ಮಾದರಿಯಲ್ಲಿ ಹೇಳುವ ಬದಲು, ವಿಭಿನ್ನ ಶೈಲಿಯಲ್ಲಿ ಪ್ರೇಕ್ಷಕರ ಮುಂದೆ ತರಲು ನಿರ್ದೇಶಕರು ಯೋಜಿಸಿದ್ದಾರಂತೆ.

44
ಮಧುಬಾಲಾ ಬಯೋಪಿಕ್‌ನಲ್ಲೂ ಸಾರಾ ಹೆಸರು?

ಈಗಾಗಲೇ ವೈಆರ್‌ಎಫ್‌ನ ಟ್ಯಾಲೆಂಟ್ ವಿಂಗ್‌ಗೆ ಸೇರ್ಪಡೆಯಾಗಿರುವ ಸಾರಾ ಅರ್ಜುನ್, ಮತ್ತೊಂದು ದೊಡ್ಡ ಸಿನಿಮಾದಲ್ಲೂ ನಟಿಸುವ ಅವಕಾಶದ ರೇಸ್‌ನಲ್ಲಿದ್ದಾರೆ ಎನ್ನಲಾಗಿದೆ. ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಲಿರುವ ಮಧುಬಾಲಾ ಬಯೋಪಿಕ್‌ನಲ್ಲೂ ಸಾರಾ ಹೆಸರು ಕೇಳಿಬರುತ್ತಿದೆ. ಒಂದು ವೇಳೆ ಈ ಅವಕಾಶಗಳು ಕೈಗೂಡಿದರೆ, ಸಾರಾ ಅರ್ಜುನ್ ಬಾಲಿವುಡ್‌ನಲ್ಲಿ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಮಿಂಚುವುದು ಖಚಿತ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories