ಶರಾವತಿ ಎಂದ್ರೆ ಸಾಕು, ಸೀರಿಯಲ್ ಪ್ರಿಯರಿಗೆ ದೃಷ್ಟಿಬೊಟ್ಟು ವಿಲನ್ನತ್ತ ಚಿತ್ತ ಹರಿಯುತ್ತದೆ, ಜೊತೆಗೆ ನಖಶಖಾಂತ ಉರಿ ಹತ್ತುತ್ತದೆ. ಇದಕ್ಕೆ ಕಾರಣ, ಆಕೆಯ ನೆಗೆಟಿವ್ ರೋಲ್. ನಾಯಕ ದತ್ತನನ್ನು ಕೈಗೊಂಬೆ ರೀತಿ ಆಡಿಸುತ್ತಾ, ದೃಷ್ಟಿ ಮತ್ತು ದತ್ತನನ್ನು ದೂರ ಮಾಡಲು ಇನ್ನಿಲ್ಲದ ಕುತಂತ್ರ ಮಾಡುತ್ತಲೇ ಜನರಿಗೆ ಛೀಮಾರಿ ಹಾಕಿಸಿಕೊಳ್ತಿರೊ ಕ್ಯಾರೆಕ್ಟರ್ ಇದು. ಜನರು ವಿಲನ್ ಪಾತ್ರಕ್ಕೆ ಅದೆಷ್ಟರ ಮಟ್ಟಿಗೆ ಉಗಿಯುತ್ತಾರೆ ಎಂದರೆ, ಆ ಪಾತ್ರಕ್ಕೆ ಆ ಪಾತ್ರಧಾರಿಗಳು ಅದೆಷ್ಟರ ಮಟ್ಟಿಗೆ ನ್ಯಾಯ ಒದಗಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತದೆ.
27
ಮುದ್ದು ಕಂದನ ಜೊತೆ ದೃಷ್ಟಿಬೊಟ್ಟು ಶರಾವತಿ
ನಿಜ ಜೀವನದಲ್ಲಿ ನಡೆಯುವ ಪಾತ್ರಗಳೇ ಸೀರಿಯಲ್ಗಳಲ್ಲಿಯೂ ಪಾತ್ರಧಾರಿಗಳ ರೂಪದಲ್ಲಿ ಮೈದಳೆದರೂ, ಟಿವಿಯಲ್ಲಿ ಅದನ್ನು ನೋಡುವಾಗ ವಿಲನ್ಗಳ ಮೇಲೆ ಹರಿಹಾಯುವುದು ಉಂಟು. ಅದೆಷ್ಟರ ಮಟ್ಟಿಗೆ ಎಂದರೆ ವಿಲನ್ ಪಾತ್ರಧಾರಿಗಳು ಎಲ್ಲಿಯಾದರೂ ಹೊರಗೆ ಬಂದರೆ, ಅಲ್ಲಿಯೂ ಜನರಿಗೆ ಉಗಿಸಿಕೊಳ್ಳುವುದೂ ಇದೆ, ಅವರನ್ನು ನೋಡಿ ಅಸಹ್ಯ ಪಟ್ಟುಕೊಳ್ಳುವ ವರ್ಗವೂ ಇದೆ. ಅಷ್ಟರಮಟ್ಟಿಗೆ ಸೀರಿಯಲ್ಗಳು ವೀಕ್ಷಕರ ಮೇಲೆ ಪ್ರಭಾವ ಬೀರ್ತಿದೆ ಎಂದರ್ಥ.
37
ದೃಷ್ಟಿಬೊಟ್ಟು ತಂಡದ ಜೊತೆ ನಟಿ ತನ್ಮಯ ಕಶ್ಯಪ್
ಇನ್ನು ರಿಯಲ್ ಲೈಫ್ನಲ್ಲಿ ವಿಲನ್ ಪಾತ್ರಧಾರಿಗಳ ರೋಲೇ ಬೇರೆ. ಸೀರಿಯಲ್ಗಳಲ್ಲಿ ವಯಸ್ಸಿಗೆ ಮೀರಿದ ಪಾತ್ರ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ರಿಯಲ್ ಲೈಫ್ನಲ್ಲಿ ಅವರದ್ದು ವಿಭಿನ್ನ ರೀತಿಯ ಪಾತ್ರಗಳು ಇರುತ್ತವೆ. ಇದೀಗ ಶರಾವತಿ ಅರ್ಥಾತ್ ನಟಿ ತನ್ಮಯ ಕಶ್ಯಪ್ ಅವರು ತಮ್ಮ ಕ್ಯೂಟ್ ಮಗನ ಜೊತೆ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಎರಡು ವರ್ಷದ ಪುಟ್ಟ ಕಂದಮ್ಮ ಅಮ್ಮನನ್ನೇ ಮೀರಿಸೋ ರೀತಿಯಲ್ಲಿ ಆ್ಯಕ್ಷನ್ ಮಾಡ್ತಿರೋದು ಕಚಗುಳಿ ಇಡುತ್ತಿದೆ. ಒಂದೇ ಹುಬ್ಬನ್ನು ಏರಿಸೋ ಅಮ್ಮನನ್ನೇ ಕಾಪಿ ಮಾಡಿ ಮಗ ಕೂಡ ಅದೇ ರೀತಿಮಾಡಿದ್ದು, ಹಾರ್ಟ್ ಎಮೋಜಿಗಳ ಮಹಾಪೂರವೇ ಹರಿದು ಬರುತ್ತಿದೆ.
ಈತ ನನ್ನ ವಜ್ರ. ಅಮ್ಮ-ಮಗನ ಆಟದ ಸಮಯ ಎಂದು ನಟಿ ತನ್ಮಯ ಕಶ್ಯಪ್ ಬರೆದುಕೊಂಡಿದ್ದಾರೆ. ಅಂದಹಾಗೆ ತನ್ಮಯ ಕಶ್ಯಪ್ ಅವರು ಮೈಸೂರಿನವರು. ಅಲ್ಲಿಯೇ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ನಟಿ, ಚೋರ ಚರಣದಾಸ, ಅಗ್ನಿ ಮತ್ತು ಮಳೆ, ಮೋಜಿ ಸೀಮೆಯ ಆಚೆ ಒಂದೂರು, ಸತ್ರು ಸತ್ರ ಸೇರಿದಂತೆ ಅನೇಕ ನಾಟಕಗಳಲ್ಲಿ ನಟಿಸಿದ್ದಾರೆ.
57
ಕುಟುಂಬದ ಜೊತೆ ನಟಿ
150ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ. ಆ ಬಳಿಕ ಕೆಲವು ಸೀರಿಯಲ್ಗಳಲ್ಲಿ ಚಿಕ್ಕಪುಟ್ಟ ರೋಲ್ ಮಾಡಿದ್ದಾರೆ. ಕೊನೆಗೆ 'ಸಿದ್ಧಗಂಗಾ' ಸಿನಿಮಾದಲ್ಲಿ ನಟಿಸಿದರು. ಜೊತೆಗೆ 'ಹಳ್ಳಿಯ ಮಕ್ಕಳು' ಮತ್ತು ತಮಿಳಿನ ಒಂದು ಸಿನಿಮಾ, ಶರಣ್ ಅವರೊಂದಿಗೆ 'ರಾಜ ರಾಜೇಂದ್ರ' ಸಿನಿಮಾದಲ್ಲಿ ಅಭಿನಯಿಸಿದರು.
67
ಕುಟುಂಬದವರ ಜೊತೆ ನಟಿ
ದಿನೇಶ್ ಬಾಬು ಅವರ ನಿರ್ದೇಶನದಲ್ಲಿ 2013ರಲ್ಲಿ 'ಸ್ವಾತಿ ಮುತ್ತು' ಎನ್ನುವ ಧಾರಾವಾಹಿ ಮೂಲಕ ಅಧಿಕೃತವಾಗಿ ಕಿರುತೆರೆಗೆ ಎಂಟ್ರಿ ಕೊಟ್ಟರು. ಅದಾದ ಬಳಿಕ "ಉಘೇ ಉಘೇ ಮಹದೇಶ್ವರ", "ಸರ್ಪ ಸಂಬಂಧ" ಮುಂತಾದ ಧಾರಾವಾಹಿಗಳಲ್ಲಿಯೂ ನಟಿಸಿದ್ದರು.
77
ಮುದ್ದು ಕಂದನ ಜೊತೆ ದೃಷ್ಟಿಬೊಟ್ಟು ಶರಾವತಿ
ಹಿಂದೊಮ್ಮೆ ತಮ್ಮ ಫಿಟ್ನೆಸ್, ಬ್ಯೂಟಿ ಬಗ್ಗೆ ಹೇಳಿದ್ದ ಅವರು, 'ನನ್ನ ದೇಹದ ಪ್ರಕೃತಿ ಇರೋದೆ ಹೀಗೆ. ಆ ದೇವರು ಕೊಟ್ಟ ವರ ಇದು. ಹೊಟ್ಟೆ 80% ತುಂಬಿದಾಗಲೇ ಊಟ ನಿಲ್ಲಿಸಬೇಕು ಅಂತಾರೆ. ಅದನ್ನು ಸ್ವಲ್ಪ ಫಾಲೋ ಮಾಡ್ತೀನಿ' ಎಂದಿದ್ದರು. ಇದೀಗ ಎರಡು ವರ್ಷದ ಮಗನ ಜೊತೆ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.