Brahmagantu Serial: ಆಕಾಶದಿಂದ ಧರೆಗಿಳಿದ ದಿಶಾಳ ನಶೆಯಲ್ಲಿ ಹಜ್​ಬೆಂಡು! ಇತ್ತ ಸಂಜನಾಳಿಗೆ ಅತ್ತೆ ಮನೆಯಿಂದ ಗೇಟ್​ಪಾಸ್​

Published : Sep 22, 2025, 02:21 PM IST

ಬ್ರಹ್ಮಗಂಟು ಧಾರಾವಾಹಿಯು ಯಾರೂ ಊಹಿಸದ ರೋಚಕ ತಿರುವು ಪಡೆದುಕೊಂಡಿದೆ. ದೀಪಾ ಈಗ ಮಾಡೆಲ್ ದಿಶಾ ಆಗಿ ಬದಲಾಗಿದ್ದು, ಅವಳೇ ತನ್ನ ಪತ್ನಿ ಎಂದು ತಿಳಿಯದ ಚಿರು ಅವಳತ್ತ ಆಕರ್ಷಿತನಾಗಿದ್ದಾನೆ. మరోవైపు, ಸಂಜನಾಳ ಕುತಂತ್ರ ಬಯಲಾಗಿ ಆಕೆಯನ್ನು ಮನೆಯಿಂದ ಹೊರಹಾಕಲಾಗಿದೆ.

PREV
16
ಟ್ವಿಸ್ಟ್​ ಮೇಲೆ ಟ್ವಿಸ್ಟ್​

ಬ್ರಹ್ಮಗಂಟು (Brahmagantu) ಯಾರೂ ಊಹಿಸದ ರೋಚಕ ತಿರುವಿನಲ್ಲಿ ಸಾಗಿದೆ. 'ಪ್ಲೀಸ್​ ದೀಪಾ, ನಿನ್ನ ರಿಯಲ್​ ಮುದ್ದು ಮುಖ ತೋರಿಸು ಕಣೆ... ಹೀಗೆ ನೋಡಲು ಆಗಲ್ಲ'... 'ಡೈರೆಕ್ಟರ್​ ಸಾಹೇಬ್ರೇ ಈ ವೇಷ ಯಾವಾಗ ಬದಲಿಸ್ತೀರಾ?', 'ಇವಳ ಒರಿಜಿನಲ್​ ಮುಖ ತೋರಿಸಿಲ್ಲಾ ಅಂದ್ರೆ ಸೀರಿಯಲ್ ನೋಡೋದನ್ನೇ ಬಿಟ್​ಬಿಡ್ತೀವಿ ಅಷ್ಟೇ ಎಂಬ ಧಮ್ಕಿ!...' ಹೀಗೆ ಪ್ರತಿನಿತ್ಯವೂ ನಟಿಯ ನಿಜವಾದ ಮುಖವನ್ನು ನೋಡಲು ಕಾತರದಿಂದ ವೀಕ್ಷಕರು ಕಾಯುತ್ತಿದ್ದ ಸೀರಿಯಲ್​ ವೀಕ್ಷಕರಿಗೆ ದೀಪಾ ದಿಶಾ ಆಗಿ ಹೆಲಿಕಾಪ್ಟರ್​ ಮೂಲಕ ಧರೆಯಿಂದ ಇಳಿದು ಬಂದೇ ಬಿಟ್ಟಿದ್ದಾಳೆ.

26
ಹೊಸ ಮಾಡೆಲ್​ ನೋಡಿ ಫುಲ್​ ಖುಷ್​

ಈ ಹೊಸ ಮಾಡೆಲ್​ ತನ್ನ ಪತ್ನಿ ಎಂದೂ ತಿಳಿಯದ ಚಿರು, ದಿಶಾಳ ನಶೆಯಲ್ಲಿಯೇ ಸುತ್ತುತ್ತಿದ್ದಾನೆ. ಬೇರೆ ಬೇರೆ ಮಾಡೆಲ್​ಗಳ ಫೋಟೋಶೂಟ್​ ಮಾಡುತ್ತಿದ್ದ ಚಿರುಗೆ ಈ ಹೊಸ ಮಾಡೆಲ್​ ಕಂಡು ಸುಸ್ತಾಗಿ ಹೋಗಿದೆ. ಎವೆಯಿಕ್ಕದೇ ಅವಳನ್ನೇ ನೋಡುತ್ತಾ ನಿಂತಿದ್ದಾನೆ. ಅವನಿಗೆ ಇನ್ನೂ ಇವಳೇ ತನ್ನನ್ನು ಹಜ್​ಬೆಂಡು ಹಜ್​ಬೆಂಡು ಎಂದು ಕರೆಯುವ ಪ್ರೀತಿಯ ಪತ್ನಿ ಎನ್ನೋದು ಗೊತ್ತೇ ಆಗಲಿಲ್ಲ.

36
ಆಕಾಶದಿಂದ ಧರೆಗಿಳಿದ ದಿಶಾ...

ಅಷ್ಟಕ್ಕೂ ದೀಪಾಳ ರಿಯಲ್​ ಹೆಸರು ದಿಯಾ. ಆದರೆ ಸೀರಿಯಲ್​ನಲ್ಲಿ ದೀಪಾ ಆಗಿ, ಈಗ ದಿಶಾ ಆಗಿ ಬದಲಾಗಿದ್ದಾರೆ. ಹೈಹೀಲ್ಸ್​ ಧರಿಸಿ, Rampwalk ಮಾಡುತ್ತಾ ಹೆಲಿಕಾಪ್ಟರ್​ನಿಂದ ಬಂದ ಮಾಡೆಲ್​ ನೋಡಿ ಕಣ್ಣೇ ಮುಚ್ತಿಲ್ಲ ಈ ಹಜ್​ಬೆಂಡು. ಒಟ್ಟಿನಲ್ಲಿ ಸೀರಿಯಲ್​ ಪ್ರೇಮಿಗಳಿಗೆ ಹಬ್ಬವೋ ಹಬ್ಬ.

46
ಅಮ್ಮನ ಹುಟ್ಟುಹಬ್ಬಕ್ಕೆ ಗಿಫ್ಟ್​

ಅದಕ್ಕೂ ಮೊದಲೇ ಚಿರುವಿನ ಅಮ್ಮನ ಹುಟ್ಟುಹಬ್ಬದಂದು ಗೊಂಬೆಯ ಗಿಫ್ಟ್​ ಕೊಟ್ಟು ಗಂಡನ ಹೃದಯ ಗೆದ್ದಿದ್ದಾಳೆ ದೀಪಾ. ಅದನ್ನು ನೋಡಿ ದೀಪಾಳನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾನೆ ಚಿರು. ಇವರಿಬ್ಬರ ಬಾಂಡಿಂಗ್​ ನೋಡಿಯೂ ವೀಕ್ಷಕರಿಗೆ ಸಕತ್​ ಖುಷಿಯ ನಡುವೆಯೇ ದೀಪಾ ರೂಪ ಬದಲಾಗಿರೋದು ಮತ್ತಷ್ಟು ಖುಷಿ

56
ಬೂಟು ನೆಕ್ಕಲು ಹೇಳಿದ ಸಂಜನಾ

ಆದರೆ, ಇದೀಗ ನರಸಿಂಹನಿಗೆ ತಮ್ಮ ಬೂಟು ನೆಕ್ಕಿದರೆ ಕುಡಿಯಲು ಕೊಡುತ್ತೇನೆ ಎಂದಿದ್ದಳು. ಕುಡಿಯಲು ಸಿಕ್ಕರೆ ಸಾಕು ಎಂದು ನರಸಿಂಹ ಅದಕ್ಕೂ ಮುಂದಾಗಿದ್ದ. ಅದನ್ನು ನೋಡಿದ ನರಸಿಂಹನ ಅಪ್ಪ-ಅಮ್ಮನಿಗೆ ಸತ್ಯದ ಅರಿವಾಗಿದೆ. ಇಷ್ಟು ದಿನ ಅವಳೇ ಕುತಂತ್ರ ಮಾಡುತ್ತಿರುವುದು ತಿಳಿದಿದೆ.

66
ಮನೆಯಿಂದ ಹೊರಕ್ಕೆ ದಬ್ಬಿದ ಅತ್ತೆ

ಸಂಜನಾಳನ್ನು ಕುತ್ತಿಗೆ ಹಿಡಿದು ಹೊರಕ್ಕೆ ದಬ್ಬಿದ್ದಾಳೆ ಅತ್ತೆ. ಇದು ಇರೋದು ಟ್ವಿಸ್ಟು ಎನ್ನುತ್ತಲೇ ನೆಟ್ಟಿಗರಿಂದ ಶ್ಲಾಘನೆಗಳ ಸುರಿಮಳೆಯೇ ಹರಿದು ಬರುತ್ತಿದೆ. ಒಟ್ಟಿನಲ್ಲಿ ಒಂದರ ಮೇಲೊಂದರಂತೆ ಬ್ರಹ್ಮಗಂಟು ಟ್ವಿಸ್ಟ್​ ಪಡೆದುಕೊಳ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories