ಮಂತ್ರಕ್ಕೆ ತಿರುಮಂತ್ರ, ಎಲ್ಲರೂ ಶಾಕ್; ಡೋಂಟ್ ಅಂಡರ್ ಎಸ್ಟಿಮೇಟ್ ಪವರ್ ಆಫ್ ಅಂಬಿಕಾ

Published : Sep 22, 2025, 01:36 PM IST

ದುರ್ಗಾಳ ದೇಹದಲ್ಲಿರುವ ಅಂಬಿಕಾಳ ಆತ್ಮವನ್ನು ಬಂಧಿಸಲು ಹೋದ ಅಘೋರಿಯೇ ಸಂಕಷ್ಟಕ್ಕೆ ಸಿಲುಕಿದ್ದಾನೆ. ತನ್ನ ಶಕ್ತಿ ಹೆಚ್ಚಿಸಿಕೊಂಡಿರುವ ಅಂಬಿಕಾ, ಮಾಯಾ ಮತ್ತು ಧಮಯಂತಿಗೆ ಶಿಕ್ಷೆ ನೀಡಿದ್ದು, ಇತ್ತ ಪ್ರಮುಖ ಪಾತ್ರಧಾರಿ ಮಾಳವಿಕಾ ಕಾಣೆಯಾಗಿದ್ದಾರೆ.

PREV
15
ನಾ ನಿನ್ನ ಬಿಡಲಾರೆ

ದುರ್ಗಾ ಮತ್ತು ಶರತ್ ಮದುವೆ ಬಳಿಕ ಅಂಬಿಕಾ ಶಕ್ತಿ ಹೆಚ್ಚಳವಾಗಿದೆ. ದುರ್ಗಾ ದೇಹದಲ್ಲಿ ಅಂಬಿಕಾ ಸೇರಿದ್ದರಿಂದ ಶರತ್ ಮತ್ತೊಮ್ಮೆ ಅಂಬಿಕಾಗೆ ಮಾಂಗಲ್ಯಧಾರಣೆ ಮಾಡಿದ್ದನು. ಶಂಭು ಹೇಳಿದ್ದಂತೆ ಅಂಬಿಕಾ-ಶರತ್ ಪುರ್ನವಿವಾಹ ನಡೆದಿತ್ತು.

25
ಅಂಬಿಕಾ ಆತ್ಮದ ಬಂಧನ

ದುರ್ಗಾಗೆ ಅಂಬಿಕಾ ಕಾಣಿಸಿಕೊಳ್ಳುತ್ತಾಳೆ ಎಂಬ ವಿಷಯ ತಿಳಿದ ಮಾಯಾ ಮತ್ತು ಧಮಯಂತಿ ಭಯಗೊಂಡು ಅಘೋರಿ ಬಳಿ ಬಂದಿದ್ದರು. ತಮ್ಮ ಮನೆಯಲ್ಲಿರೋ ಅಂಬಿಕಾ ಅತ್ಮ ಬಂಧಿಸುವಂತೆ ಕೇಳಿಕೊಂಡಿದ್ದರು. ಈಗಾಗಲೇ ಹಲವು ಬಾರಿ ಸೋತಿರುವ ಅಘೋರಿ ತನ್ನ ಮಂತ್ರಶಕ್ತಿಯಿಂದ ಅಂಬಿಕಾಳನ್ನು ಬಂಧಿಸಿದ್ದನು.

35
ಅಂಬಿಕಾ ಆತ್ಮದ ಶಕ್ತಿ

ಬಂಧಿಸಿದ್ದ ಆತ್ಮವನ್ನು ತನ್ನ ಬಳಿ ಕರೆಸಿಕೊಂಡ ನಂತರವೇ ಅಂಬಿಕಾ ಆತ್ಮದ ಶಕ್ತಿ ಹೆಚ್ಚಳವಾಗಿರೋದು ಅಘೋರಿಗೆ ಅರ್ಥವಾಗಿದೆ. ನನ್ನನ್ನೇ ಬಂಧನ ಮಾಡ್ತೀಯಾ ಎಂದು ಅಘೋರಿಗೆ ಅಂಬಿಕಾ ತಕ್ಕ ಶಿಕ್ಷೆ ನೀಡಿದ್ದಾಳೆ. ಇದರಿಂದ ಅಘೋರಿ ಜ್ಞಾನ ಕಳೆದುಕೊಂಡಿದ್ದಾನೆ.

45
ಮಾಯಾ ಮತ್ತು ಧಮಯಂತಿ

ಇದೆಲ್ಲವೂ ಮಾಯಾ ಮತ್ತು ಧಮಯಂತಿ ಮುಂದೆ ನಡೆದಿದ್ದರಿಂದ ಇಬ್ಬರು ಆತಂಕಗೊಂಡಿದ್ದಾರೆ. ಅಂಬಿಕಾ ಇಬ್ಬರಿಗೂ ಶಿಕ್ಷೆಯನ್ನು ನೀಡಿದ್ದಾರೆ. ಅಘೋರಿ ಮುಂದೆ ಅಂಬಿಕಾ ಶಕ್ತಿ ಹೆಚ್ಚಳವಾಗಿದ್ದಕ್ಕೆ ಸಂತಸಗೊಂಡಿದ್ದಾರೆ. ಇಂದಿನ ಪ್ರೋಮೋ ನೋಡಿದ ವೀಕ್ಷಕರು, ಡೋಂಟ್ ಅಂಡರ್ ಎಸ್ಟಿಮೇಟ್ ಪವರ್ ಆಫ್ ಅಂಬಿಕಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ದೆವ್ವ ಆದ್ಮೇಲೆ ಊಟ-ತಿಂಡಿ ಇಲ್ಲದೇ ಸಣ್ಣ ಆದೆ: ನೀತಾ ಅಶೋಕ್

55
ಮಾಳವಿಕಾ ಎಲ್ಲಿ ಹೋದ್ರು?

ಶರತ್ ಮತ್ತು ದುರ್ಗಾ ಮದುವೆ ಬಳಿಕ ಕಾಣೆಯಾದ ಮಾಳವಿಕಾ ಕಾಣಿಸುತ್ತಿಲ್ಲ. ಈ ಎಲ್ಲಾ ಕಥೆ ಹಿಂದೆ ಮಾಳವಿಕಾ ಇರೋದರಿಂದ ಧಾರಾವಾಹಿಯಲ್ಲಿ ಅತ್ಯಂತ ಪ್ರಮುಖ ಪಾತ್ರವಾಗಿದೆ. ಮಾಳವಿಕಾ ಪಾತ್ರದಲ್ಲಿ ಹಿರಿಯ ನಟಿ ವೀಣಾ ಸುಂದರ್ ನಟಿಸುತ್ತಿದ್ದಾರೆ.

ಇದನ್ನೂ ಓದಿ: 'ನಾ ನಿನ್ನ ಬಿಡಲಾರೆ' ಧಾರಾವಾಹಿಯಿಂದ ದಿಢೀರ್ ಕಾಣೆಯಾದ ನಟಿ? ಎಲ್ಲಿ ಹೋದ್ರು?

Read more Photos on
click me!

Recommended Stories