BBK 12: ಎಲಿಮಿನೇಶನ್‌ ಇಲ್ಲದೆ, ಈ ವಾರ ಇಬ್ಬರು ಘಟಾನುಘಟಿ ಸ್ಪರ್ಧಿಗಳು ಹೊರಗಡೆ ಬರ್ತಾರಾ?

Published : Dec 13, 2025, 09:33 AM IST

Bigg Boss Kannada Season 12 This Week Elimination: ವೀಕೆಂಡ್‌ ಬಂತು ಎಂದರೆ ಎಲಿಮಿನೇಶನ್‌ ಕಾವು ಹೆಚ್ಚುವುದು. ಈ ವಾರ ಬಿಗ್‌ ಬಾಸ್‌ ಮನೆಯಿಂದ ಯಾರು ಹೊರಗಡೆ ಹೋಗ್ತಾರೆ ಎಂಬ ಕುತೂಹಲ ಇರಬಹುದು. ಆದರೆ ಈ ವಾರ ನಾಮಿನೇಶನ್‌ ಭಾರೀ ಟ್ವಿಸ್ಟ್‌ ಪಡೆದುಕೊಳ್ಳಲಿದೆ. ಹಾಗಾದರೆ ಮುಂದೆ ಏನಾಗಲಿದೆ? 

PREV
15
ನಾಮಿನೇಶನ್‌ ಟಾಸ್ಕ್‌ ನಡೆದಿದೆ

ಈ ವಾರ ನಾಮಿನೇಶನ್‌ ಟಾಸ್ಕ್‌ ನಡೆದಿದೆ. ಗಿಲ್ಲಿ ನಟ, ರಜತ್‌, ಧ್ರುವಂತ್‌, ಅಶ್ವಿನಿ ಗೌಡ, ಸೂರಜ್‌ ನಾಮಿನೇಟ್‌ ಆಗಿದ್ದರು. ಕಾವ್ಯ ಶೈವ, ಮಾಳು ನಿಪನಾಳ ಅವರು ನಾಮಿನೇಟ್‌ ಆಗದೆ ಬಚಾವ್‌ ಆಗಿದ್ದರು. ಈ ಬಾರಿ ಯಾರೂ ಮನೆಯಿಂದ ಎಲಿಮಿನೇಟ್‌ ಆಗಿ ಹೋಗುವಂತೆ ಕಾಣುತ್ತಿಲ್ಲ.

25
ವೋಟಿಂಗ್‌ ಲೈನ್ಸ್‌ ಒಪನ್‌ ಆಗಿಲ್ಲ

ಈ ವಾರವು ವೋಟಿಂಗ್‌ ಲೈನ್ಸ್‌ ಒಪನ್‌ ಆಗಿಲ್ಲ. ಹೌದು, ಜಿಯೋಹಾಟ್‌ಸ್ಟಾರ್‌ನಲ್ಲಿ ವೋಟಿಂಗ್‌ ಲೈನ್ಸ್ ಒಪನ್‌ ಆಗಿಲ್ಲ. ಹೀಗಾಗಿ ಎಲಿಮಿನೇಶನ್‌ ನಡೆಯೋದಿಲ್ಲ. ಇನ್ನು ಕೇವಲ ಒಂದು ತಿಂಗಳು ಇದೆ. ಹೀಗಾಗಿ ಎಲಿಮಿನೇಶನ್‌ ನಡೆಯಬೇಕಿತ್ತು ಅಲ್ವಾ? ಇಲ್ಲೊಂದು ಟ್ವಿಸ್ಟ್‌ ಇದೆ.

35
ಕಳೆದ ಸೀಸನ್ ಸ್ಪರ್ಧಿಗಳ ಎಂಟ್ರಿ

ಹೌದು, ರಜತ್‌ ಕಿಶನ್‌, ಚೈತ್ರಾ ಕುಂದಾಪುರ, ತ್ರಿವಿಕ್ರಮ್‌, ಮೋಕ್ಷಿತಾ ಪೈ, ಮ್ಯಾಕ್ಸ್‌ ಮಂಜು ಅವರು ಈ ಸೀಸನ್‌ಗೆ ಅತಿಥಿಗಳಾಗಿ ಬಂದಿದ್ದರು. ಅವರಲ್ಲಿ ಚೈತ್ರಾ ಕುಂದಾಪುರ, ರಜತ್‌ ಅವರು ವೈಲ್ಡ್‌ಕಾರ್ಡ್‌ ಸ್ಪರ್ಧಿಗಳು ಎಂದು ಘೋಷಣೆಯಾಯ್ತು. ಇವರು ದೊಡ್ಮನೆಗೆ ಬಂದಮೇಲೆ ಅಶ್ವಿನಿ ಗೌಡ, ಧ್ರುವಂತ್‌ಗೆ ಬೇಸರ ಆಗಿದ್ದುಂಟು.

45
ಹೊರಗಡೆ ಹೋಗೋರು ಯಾರು?

ಕಳೆದ ಒಂದು ವಾರದಿಂದ ಚೈತ್ರಾ ಕುಂದಾಪುರ, ರಜತ್‌ ಅವರು ವೈಲ್ಡ್‌ಕಾರ್ಡ್‌ ಸ್ಪರ್ಧಿಗಳಲ್ಲ, ಅತಿಥಿಗಳು, ಆದಷ್ಟು ಬೇಗ ಮನೆಯಿಂದ ಹೊರಗಡೆ ಹೋಗ್ತಾರೆ ಎನ್ನಲಾಗ್ತಿದೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಕೂಡ ಆಗಿದೆ. ಹೀಗಾಗಿ ಇವರು ನಿಜಕ್ಕೂ ವೈಲ್ಡ್‌ಕಾರ್ಡ್‌ ಸ್ಪರ್ಧಿಗಳಾ ಎಂಬ ಪ್ರಶ್ನೆ ಬಂದಿತ್ತು.

55
ವೀಕ್ಷಕರ ಊಹೆ ಏನು?

ಅಂದಹಾಗೆ ಈ ವಾರ ರಜತ್‌, ಚೈತ್ರಾ ಕುಂದಾಪುರ ಅವರು ಮನೆಯಿಂದ ಹೊರಗಡೆ ಹೋಗ್ತಾರೆ, ಹೀಗಾಗಿ ವೋಟಿಂಗ್‌ ಲೈನ್ಸ್‌ ಆಫ್‌ ಮಾಡಲಾಗಿದೆ. ಇವರಿಬ್ಬರು ಮನೆಯಲ್ಲಿ ಇರುತ್ತಾರೆ ಎಂದು ಕೂಡ ವೀಕ್ಷಕರು ಊಹೆ ಮಾಡುತ್ತಿದ್ದಾರೆ.

ಇನ್ನೊಮ್ಮೆ ಈ ವಾರ ಯಾರನ್ನೂ ಕಳಿಸದೆ, ಮುಂದಿನ ವಾರ ಡಬಲ್‌ ಎಲಿಮಿನೇಶನ್‌ ನಡೆಯಲಿದೆ ಎನ್ನಲಾಗಿದೆ.

Read more Photos on
click me!

Recommended Stories