ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿ, ನಟಿ ಸೋನು ಪಾಟೀಲ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 2024ರಲ್ಲಿ ಶ್ರೀವಾಯು ಎಂಬುವವರನ್ನು ಸದ್ದಿಲ್ಲದೆ ಮದುವೆಯಾಗಿದ್ದ ಅವರು, ಇದೀಗ ತಮ್ಮ ಸೀಮಂತ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿಯಾಗಿದ್ದ, ನಟಿ ಸೋನು ಪಾಟೀಲ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಅದ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯವರಾದ ನಟಿ, 2024ರಲ್ಲಿ ಶ್ರೀವಾಯು ಎನ್ನುವವರ ಜೊತೆ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆಗಲೂ ಮದುವೆಯಾದ ಬಳಿಕ ಸರ್ಪ್ರೈಸ್ ಮಾಡಿದ್ದ ನಟಿ, ಈಗ ತುಂಬು ಗರ್ಭಿಣಿಯಾಗಿರುವ ಫೋಟೋಶೂಟ್ ಮತ್ತು ವಿಡಿಯೋಶೂಟ್ಗಳನ್ನು ಅಪ್ಲೋಡ್ ಮಾಡಿದ್ದಾರೆ.
26
ಹಲವು ಸೀರಿಯಲ್, ಸಿನಿಮಾಗಳಲ್ಲಿ ನಟನೆ
‘ಮೊಗ್ಗಿನ ಮನಸ್ಸು’, ‘ಗಾಂಧಾರಿ’, ‘ಅಮೃತವರ್ಷಿಣಿ’ಯಂತಹ ಹಲವು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಸೋನು ಪಾಟೀಲ್, ‘ಧರ್ಮಸ್ಯ’, ‘ದೋಸ್ತಿ ಗ್ಯಾಂಗ್’ ಮುಂತಾದ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಇದೀಗ ಅವರು ಸೀಮಂತ ಶಾಸ್ತ್ರದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
36
ಹಾಸ್ಯ ನಟಿಯಾಗುವ ಕನಸು
ಹಾಸ್ಯ ನಟಿಯಾಗುವ ಕನಸು ಟಿವಿ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸೋನು ಪಾಟೀಲ್ ಸಿನಿಮಾಗಳಲ್ಲಿ ನಟಿಸುವ ಆಸೆಯಿಂದ ಕಿರುತೆರೆಗೆ ಕಾಲಿಟ್ಟರು. ಹಲವು ಸೀರಿಯಲ್ಗಳಲ್ಲಿ ನಟಿಸುತ್ತಿರುವಾಗಲೇ ಸಾಧು ಕೋಕಿಲಾ ಜತೆ ಸಿನಿಮಾದಲ್ಲಿ ಕಾಣಿಸಿಕೊಂಡರು. ಮೊದಲು ನಟಿಸಿದ ಚಿತ್ರ ‘ಧರ್ಮಸ್ಯ’. ಈ ಚಿತ್ರದಲ್ಲಿ ಸಾಧು ಕೋಕಿಲ ಅವರೊಂದಿಗೆ ಹಾಸ್ಯ ನಟಿಯಾಗಿ ಕಾಣಿಸಿಕೊಂಡ ಮೇಲೆ ಚಿತ್ರೀಕರಣ ಮುಗಿಸಿದ ಕೊನೆಯ ಚಿತ್ರವೇ ಮೊದಲು ಬಿಡುಗಡೆಯಾಗಿದ್ದು ವಿಶೇಷ.
ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿ ಸೋನು ಪಾಟೀಲ್ ತಾಯಿ ಮಹಾದೇವಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ನ್ಯೂಮೊನಿಯಾ ಆಗಿತ್ತು. ಅದಕ್ಕಾಗಿ ಅವರನ್ನು ಬಾಗಲಕೋಟೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ನೀಡಿದ ನಂತರ ಹಣವಿಲ್ಲದೇ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಆ ಸಂದರ್ಭದಲ್ಲಿ ಸುದೀಪ್ ಚಾರಿಟೇಲವ್ ಟ್ರಸ್ಟ್ ಮೂಲಕ 5 ಲಕ್ಷ ರೂಪಾಯಿ ನೀಡಿ ಸಹಾಯ ಮಾಡಲಾಗಿತ್ತು.
56
ನಟಿಯ ಕುರಿತು
ಇನ್ನು ನಟಿಯ ಕುರಿತು ಹೇಳುವುದಾದರೆ, ಇವರು, ಪತ್ರಿಕೋದ್ಯಮದಲ್ಲಿ ಮಾಸ್ಟರ್ ಡಿಗ್ರಿ ಮಾಡಿಕೊಂಡು ಕೆಲಸ ಹುಡುಕುತ್ತ ಬೆಂಗಳೂರಿಗೆ ಬಂದವರು ಮುಂದೆ ಸಿನಿಮಾ ನಟಿ ಆದವರು. ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುತ್ತಲೇ ಈಗ ತಮಿಳಿನ ಪ್ರಸಿದ್ಧ ರಿಯಾಲಿಟಿ ಷೋನ ಸ್ಪರ್ಧಿಯೂ ಆಗಿದ್ದಾರೆ.
66
ತಮಿಳು ರಿಯಾಲಿಟಿ ಷೋನಲ್ಲಿ ಸೋನು
ಕನ್ನಡದ ಕಿರುತೆರೆಯಲ್ಲಿ ‘ಪ್ಯಾಟೇ ಹುಡ್ಗೀರ ಹಳ್ಳಿ ಲೈಫು’ ರೀತಿಯಲ್ಲೇ ತಮಿಳಿನಲ್ಲಿ ‘ಒರು ನಾಳ್ ಗ್ರಾಮತ್ತಿಲ್’ ಎನ್ನುವ ರಿಯಾಲಿಟಿ ಷೋ ಬಂದಿತ್ತು. ಇದರಲ್ಲಿ ಸಿನಿಮಾ ಹಾಗೂ ಕಿರುತೆರೆ ನಟ, ನಟಿಯರೇ ಸ್ಪರ್ಧಿಗಳು. ಇಂಥ ಶೋನಲ್ಲಿ ಸೋನು ಪಾಟೀಲ್ ಕೂಡ ಸ್ಪರ್ಧಿಯಾಗಿ ಭಾಗವಹಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.