ಇದು ವಿಶಿಷ್ಟ ಟೈಮ್ ಲೂಪ್ ಮಿಸ್ಟರಿ ಥ್ರಿಲ್ಲರ್ ಸಿನಿಮಾವಾಗಿದೆ. ನಿಗೂಢ ಅರಣ್ಯವೊಂದರಲ್ಲಿ ನಡೆಯುವ ಈ ಕಥೆಯಲ್ಲಿ, ಕಾಡಿನೊಳಗೆ ಹೋದವರು ಕಣ್ಮರೆಯಾಗುತ್ತಾರೆ ಮತ್ತು ಒಂದು ಹನಿ ರಕ್ತ ಬಿದ್ದರೆ ಜನರು 30 ವರ್ಷಗಳಷ್ಟು ಹಿಂದಿನ ಸಮಯಕ್ಕೆ ಹೋಗುತ್ತಾರೆ.
ಮಲಯಾಳಂ ಸಿನಿಮಾವೊಂದು ತನ್ನ ವಿಶಿಷ್ಠ ಕಥೆ ಮತ್ತು ತೆರೆ ಮೇಲೆ ಬಂದ ಪರಿಕಲ್ಪನೆಯಿಂದ ಇಡೀ ದೇಶದ ಗಮನವನ್ನು ಸೆಳೆದಿತ್ತು. ಚಿತ್ರದ ಕಥೆ ಮತ್ತು ಕಲಾವಿದರ ಸಹಜ ಅಭಿನಯ ನಿಮಗೆ ಕಣ್ಣು ಮಿಟುಕಿಸಲು ಅವಕಾಶ ನೀಡಲ್ಲ. ಅಷ್ಟು ಬಿಗಿಯಾಗಿ ನಿಮ್ಮನ್ನು ಸಿನಿಮಾದ ಕಥೆ ಹಿಡಿದಿಟ್ಟುಕೊಳ್ಳುತ್ತದೆ. 2026ರ ಮಾರ್ಚ್‌ನಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ಅಕ್ಸರ್ ಅಲಿ, ವಿನೀತ್ ಕುಮಾರ್ ಮತ್ತು ಆಸಿಮ್ ಜಮಾಲ್ ಪ್ರಮುಖ ಪಾತ್ರಧಾರಿಗಳಾಗಿ ನಟಿಸಿದ್ದಾರೆ. ಜಿತು ಸಥೀಸನ್ ಮಂಗಲಥು ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.
25
Sambhavam Adhyayam Onnu
ಸಂಭವಂ ಅಧ್ಯಾಯಂ ಒನ್ನು ಸಿನಿಮಾ (Time loop mystery horror thriller film) ಒಂದು ವಿಶೇಷ ದಟ್ಟಾರಣ್ಯದ ಕಥೆಯನ್ನು ಹೊಂದಿದೆ. ಈ ಸಿನಿಮಾದಲ್ಲಿ ಈ ಕಾಡಿನೊಳಗೆ ಹೋದ ಜನರು ನಿಗೂಢವಾಗಿ ಕಣ್ಮರೆಯಾಗುತ್ತಿರುತ್ತಾರೆ. ಕಾಡಿನೊಳಗೆ ಹೋದವ್ರು ಮತ್ತೆ ಹಿಂದುರಗಿ ಬರಲ್ಲ ಎಂಬ ಭಯ ಸುತ್ತಲಿನ ಜನರಲ್ಲಿರುತ್ತದೆ. ಈ ಕಥೆಯನ್ನು ಬೆನ್ನಟ್ಟಿ ಪೊಲೀಸ್ ಅಧಿಕಾರಿ ಹೋಗುತ್ತಾನೆ.
35
ಓರ್ವ ಮಹಿಳೆ ಮತ್ತು ಎರಡು ಹೆಣ
ಸಿನಿಮಾ ಅರಂಭದಲ್ಲಿ ಹಲವು ದೃಶ್ಯಗಳು ಬೇರೆ ಬೇರೆ ಕಥೆ ಹೇಳಿದಂತೆ ಕಾಣಿಸುತ್ತದೆ. ಸಿನಿಮಾ ಹೋದಂತೆ ಎಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿದೆ ಎಂಬುವುದು ಅನ್ನೋದು ಗೊತ್ತಾಗುತ್ತದೆ. ಸಿನಿಮಾದ ಕಥೆ ಆರಂಭ, ಓರ್ವ ಮಹಿಳೆ ಎರಡು ಹೆಣಗಳೊಂದಿಗೆ ಕಾಣಿಸಿಕೊಳ್ಳುತ್ತಾಳೆ. ನಂತರ ಕಾಡಿನ ಜೊತೆ ಕಥೆ ಶುರುವಾಗುತ್ತದೆ.
ಸಿನಿಮಾ ಸಾಗುತ್ತಿದ್ದಂತೆ ಅರಣ್ಯದೊಳಗಿನ ರಕ್ತದ ಕಥೆ ಮುನ್ನಲೆಗೆ ಬರುತ್ತದೆ. ಈ ಕಾಡಿನಲ್ಲಿ ಒಂದೇ ಒಂದು ಹನಿ ರಕ್ತ ಬಿದ್ದರೆ ಜನರು ಹಳೆ ಸಮಯಕ್ಕೆ ಹಿಂದಕ್ಕೆ ಹೋಗುತ್ತಾರೆ. ಸುಮಾರು 30 ವರ್ಷಗಳ ಹಿಂದೆ ಕಾಲಘಟ್ಟದಲ್ಲಿಯೇ ಕಾಡಿನೊಳಗಿನ ಜನರು ಸಿಲುಕಿರುತ್ತಾರೆ. ಸಿನಿಮಾದ ಅಂತ್ಯಕ್ಕೆ ಅರಣ್ಯದೊಳಗಿನ ರಹಸ್ಯ ರಿವೀಲ್ ಆಗುತ್ತದೆ.
55
ಜಿಯೋಹಾಟ್‌ಸ್ಟಾರ್‌ನಲ್ಲಿ ನೋಡಿ
2 ಗಂಟೆ 9 ನಿಮಿಷದ ಸಂಭವಂ ಅಧ್ಯಾಯಂ ಒನ್ನು ಸಿನಿಮಾವನ್ನು ನೀವು ಜಿಯೋ ಹಾಟ್‌ಸ್ಟಾರ್‌ನಲ್ಲಿ ನೋಡಬಹುದಾಗಿದೆ. ಈ ಬಾರಿಯ ವೀಕೆಂಡ್‌ನಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನೋಡಲು ಪ್ಲಾನ್ ಮಾಡಿಕೊಂಡಿದ್ರೆ Sambhavam Adhyayam Onnu ನಿಮ್ಮ ಲಿಸ್ಟ್‌ಗೆ ಸೇರಿಸಿಕೊಳ್ಳಿ. ಈ ಸಿನಿಮಾಗೆ IMDBಯಲ್ಲಿ 7.4 ರೇಟಿಂಗ್ ನೀಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.