'ಅಣ್ಣಯ್ಯ' ಸೀರಿಯಲ್‌ನ ಶಿವು ಮತ್ತು ಪಾರು ಜೋಡಿಯ ಆನ್‌ಸ್ಕ್ರೀನ್ ಕೆಮಿಸ್ಟ್ರಿಗೆ ಅಭಿಮಾನಿಗಳು ಮನಸೋತಿದ್ದಾರೆ. ಇವರಿಬ್ಬರು ನಿಜ ಜೀವನದಲ್ಲೂ ಒಂದಾಗಲಿ ಎಂದು ಹಾರೈಸುತ್ತಿದ್ದು, ಈ ಕುರಿತು ನಟಿ ನಿಶಾ ರವಿಕೃಷ್ಣನ್ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಅಣ್ಣಯ್ಯ ಸೀರಿಯಲ್ (Annayya Serial) ಸದ್ಯ ಕುತೂಹಲದ ಘಟ್ಟ ತಲುಪಿದೆ. ಅಣ್ಣಯ್ಯನ ತಂಗಿಯರ ಸಂಸಾರ ಒಂದೊಂದು ವಿಭಿನ್ನ ರೀತಿಯಲ್ಲಿ ನಡೆಯುತ್ತಿದ್ದರೆ, ಇತ್ತ ಅಣ್ಣಯ್ಯ ಶಿವು ಮತ್ತು ಪಾರು ಲವ್‌ಸ್ಟೋರಿ ಶುರುವಾಗಿದೆ. ಇವರಿಬ್ಬರ ನಡುವೆ ಬಾಂಧವ್ಯ ಹೆಚ್ಚಾಗಿದೆ.
29
ಅಣ್ಣಯ್ಯ-ಪಾರು ಕೆಮಿಸ್ಟ್ರಿಗೆ ಫಿದಾ
ಅಣ್ಣಯ್ಯ ಮತ್ತು ಪಾರು ಕೆಮೆಸ್ಟ್ರಿಯನ್ನು ವೀಕ್ಷಕರು ಸಕತ್ ಮೆಚ್ಚಿಕೊಂಡಿದ್ದಾರೆ. ಇವರಿಬ್ಬರಿಗೂ ಆಫ್ ಸ್ಕ್ರೀನ್ ಮಾತ್ರವಲ್ಲದೇ ಆನ್ ಸ್ಕ್ರೀನ್‌ನಲ್ಲಿಯೂ ಒಂದಾಗಲಿ ಎಂದು ಕಮೆಂಟ್‌ಗಳ ಸುರಿಮಳೆಯೇ ಆಗುತ್ತಿರುತ್ತದೆ.
39
ಎಲ್ಲ ಸೀರಿಯಲ್‌ನಲ್ಲೂ ಸೇಮ್ ಸ್ಟೋರಿ
ಅಷ್ಟಕ್ಕೂ ಇದು ಈ ಸೀರಿಯಲ್ ಸ್ಟೋರಿ ಮಾತ್ರವಲ್ಲ. ಎಲ್ಲಾ ಸೀರಿಯಲ್‌ಗಳಲ್ಲಿನ ನಾಯಕ-ನಾಯಕಿಗೆ ರಿಯಲ್ ಲೈಫ್‌ನಲ್ಲಿ ಮದುವೆಯಾಗಿಲ್ಲ ಎಂದು ವೀಕ್ಷಕರದ್ದು ಒಂದೇ ಹಠ, ಇವರಿಬ್ಬರೂ ಮದುವೆಯಾಗಬೇಕು ಎನ್ನುವುದು. ಒಂದು ಸೀರಿಯಲ್‌ನಲ್ಲಿ ಒಬ್ಬ ಹೀರೋ, ಇನ್ನೊಂದು ಸೀರಿಯಲ್‌ನಲ್ಲಿ ಇನ್ನೊಬ್ಬ ಹೀರೋ ಇದ್ದರೂ ಆಯಾ ಸೀರಿಯಲ್ ನಡೆಯುವ ಸಮಯದಲ್ಲಿ ಅವರ ಕೆಮೆಸ್ಟ್ರಿ ಮೆಚ್ಚಿಕೊಂಡು ಅವರ ಜೊತೆ ಮದುವೆ ಮಾಡಲೇ ತುದಿಗಾಲಿನಲ್ಲಿ ನಿಂತಿರುತ್ತಾರೆ ವೀಕ್ಷಕರು.
ಅದೇ ರೀತಿ ಅಣ್ಣಯ್ಯ ಸೀರಿಯಲ್ ಪಾರು ಅರ್ಥಾತ್ ನಿಶಾ ರವಿಕೃಷ್ಣನ್ (Nisha Ravikrishnan) ಅವರಿಗೂ ಈ ಬಗ್ಗೆ ಅಭಿಮಾನಿಗಳು ಕಾಟ ಕೊಡುತ್ತಲೇ ಇರುತ್ತಾರೆ. ಅಣ್ಣಯ್ಯ ಹೀರೋ ಅರ್ಥಾತ್ ವಿಕಾಶ್ ಅವರ ಜೊತೆ ರಿಯಲ್ ಲೈಫ್‌ನಲ್ಲಿಯೂ ಒಂದಾಗಿ, ಅವರನ್ನು ಮದುವೆಯಾಗಿ ಎಂದು.
59
ಅಣ್ಣಯ್ಯ ಜೊತೆ ಮದುವೆ- ಸ್ಪಷ್ಟನೆ
ಇದರ ನಡುವೆಯೇ ಇಬ್ಬರೂ ಹಾರ ಹಾಕಿಕೊಂಡಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಈಗ fdfs_kannadaಗೆ ನೀಡಿರುವ ಸಂದರ್ಶನದಲ್ಲಿ ನಿಶಾ ಅವರು, ಇದು ಪ್ರತಿ ಸೀರಿಯಲ್‌ನಲ್ಲಿಯೂ ನಡೆದೇ ಇರುತ್ತದೆ. ಆನ್‌ಸ್ಕ್ರೀನ್ ಜೋಡಿಯನ್ನು ಮೆಚ್ಚಿಕೊಂಡು ಜನರು ಒಂದಾಗಲಿ ಎನ್ನುತ್ತಾರೆ. ಇದು ಅವರ ಅಭಿಮಾನ ಅಷ್ಟೇ. ಅದೆಲ್ಲಾ ರಿಯಲ್ ಆಗಲು ಸಾಧ್ಯವಿಲ್ಲ ಎಂದಿದ್ದಾರೆ.
69
ಸದ್ಯ ಮದುವೆ ಯೋಚನೆ ಇಲ್ಲ
ಇದೇ ವೇಳೆ ಮದುವೆಯ ಬಗ್ಗೆಯೂ ಮಾತನಾಡಿರುವ ನಟಿ, ಸದ್ಯ ನನಗೆ ಮದುವೆಯ ಬಗ್ಗೆ ಯೋಚನೆ ಇಲ್ಲ. ಕರಿಯರ್ ಮುಖ್ಯ. ಪ್ರಾಜೆಕ್ಟ್‌ಗಳು ಇವೆ. ಆದ್ದರಿಂದ ಸದ್ಯ ಮದುವೆಯ ಬಗ್ಗೆ ಏನೂ ಯೋಚನೆ ಮಾಡಿಲ್ಲ. ಮದುವೆ ಆಗುವುದಿಲ್ಲ ಎಂದಿದ್ದಾರೆ.
79
ನಟಿಯ ರಿಯಲ್ ಲೈಫ್
ಇನ್ನು ನಟಿಯ ರಿಯಲ್ ಲೈಫ್ ಕುರಿತು ಹೇಳುವುದಾದರೆ, ಇವರಿನ್ನೂ ಸಿಂಗಲ್. ಈ ಕುರಿತು ನಟಿಯೇ ಹೇಳಿಕೊಂಡಿದ್ದಾರೆ. ಸೀರಿಯಲ್ಗಳಲ್ಲಿ ಎಂಟು ಮದ್ವೆಯಾಗಿದೆ. ಅವುಗಳಲ್ಲಿ ಆಡಂಬರದ ಮದುವೆಗಳೇ ಜಾಸ್ತಿ ಇದ್ದವು. ಆದರೆ ರಿಯಲ್ ಲೈಫ್‌ನಲ್ಲಿ ಸಿಂಪಲ್ ಆಗಿ ಮದುವೆಯಾಗುವ ಆಸೆ ಇದೆ ಎಂದಿದ್ದಾರೆ ನಿಶಾ.
89
ಮೂಲತಃ ಮಲಯಾಳಿ ನಟಿ
ಚಟಪಟ ಎಂದು ಕನ್ನಡ ಮಾತನಾಡುವ ನಿಶಾ ರವಿಕೃಷ್ಣನ್ ಅವರು ಮೂಲತಃ ಮಲಯಾಳಿ. ಆದರೆ ಮಿಂಚುತ್ತಿರುವುದು ಕನ್ನಡ ಮತ್ತು ತೆಲಗು ಬಣ್ಣದ ಲೋಕದಲ್ಲಿ. ನಿಶಾ ಮಿಲನ್ ಎಂದು ಕೂಡ ಫೇಮಸ್ ಆಗಿದ್ದಾರೆ ನಟಿ. 2018ರಲ್ಲಿ ಸ್ಟಾರ್ ಸುವರ್ಣದಲ್ಲಿ ತೆರೆ ಕಂಡ ‘ಸರ್ವಮಂಗಲ ಮಾಂಗಲ್ಯೆ’ ಸೀರಿಯಲ್ ಮೂಲಕ ಕನ್ನಡಕ್ಕೆ ಪರಿಚಿತರಾದರು. 2019ರಲ್ಲಿ ಅವರಿಗೆ ‘ಗಟ್ಟಿಮೇಳ’ ಸೀರಿಯಲ್‌ನ ಅಮೂಲ್ಯ ಪಾತ್ರ ಅವರಿಗೆ ಬ್ರೇಕ್ ಕೊಟ್ಟಿತು. ರೌಡಿ ಬೇಬಿ ಎಂದೇ ಈಗಲೂ ಎಲ್ಲರೂ ಅವರನ್ನು ಕರೆಯುತ್ತಾರೆ.
99
ಹುಟ್ಟಿದ್ದ ಬೆಂಗಳೂರು
ಐದು ವರ್ಷ ಈ ಸೀರಿಯಲ್ ತೆರೆ ಕಂಡಿದೆ. ಈ ಬಳಿಕ ನಿಶಾ ತೆಲುಗು ಸೀರಿಯಲ್‌ನಲ್ಲಿ ಕಾಣಿಸಿಕೊಂಡರು. ಕನ್ನಡದ ಅಣ್ಣಯ್ಯದಲ್ಲಿ ಪಾರು ಆಗಿ ಹಾಗೂ ತೆಲಗುಇನ ಅಮ್ಮಯ್ಯಿಗಾರು ಸೀರಿಯಲ್‌ನಲ್ಲಿಯೂ ನಟಿಸುತ್ತಿದ್ದಾರೆ. ನಿಶಾ ಅವರು ಹುಟ್ಟಿದ್ದು ಬೆಂಗಳೂರೇ. ಆದರೆ, ಮೂಲತಃ ಕೇರಳದವರು.