ಕರ್ಣ ಸರ್ ಪ್ರೀತಿ ಹೇಳಿಕೊಳ್ಳುತ್ತಿದ್ದಂತೆ ದುಬೈಗೆ ಹಾರಿದ ಸುಂದರಿ ನಿಧಿ… ಅಲ್ಲ… ಭವ್ಯಾ ಗೌಡ

Published : Sep 16, 2025, 06:39 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕರ್ಣ ಧಾರಾವಾಹಿಯಲ್ಲಿ ನಿಧಿ ಪಾತ್ರದ ಮೂಲಕ ಮುದ್ದು ಮುದ್ದಾಗಿ ನಟಿಸಿ, ಕನ್ನಡಿಗರ ಮನ ಗೆದ್ದಿರುವ ನಟಿ ಭವ್ಯಾ ಗೌಡ, ಸದ್ಯ ಸೀರಿಯಲ್ ಗೆ ಬ್ರೇಕ್ ಕೊಟ್ಟು ದುಬೈಗೆ ಹಾರಿದ ಸುಂದರಿ, ಅಲ್ಲಿನ ಸುಂದರ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

PREV
17
ಭವ್ಯಾ ಗೌಡ

ಗೀತಾ ಧಾರಾವಾಹಿ (Geetha Serial) ಮೂಲಕ ಸೀರಿಯಲ್ ಪ್ರಪಂಚಕ್ಕೆ ಎಂಟ್ರಿ ಕೊಟ್ಟು, ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕರ್ಣ ಧಾರಾವಾಹಿಯಲ್ಲಿ ನಿಧಿ ಪಾತ್ರದ ಮೂಲಕ ಮಿಂಚುತ್ತಿರುವ ಚೆಲುವೆ ಭವ್ಯಾ ಗೌಡ.

27
ದುಬೈನಲ್ಲಿ ಭವ್ಯಾ

ಭವ್ಯಾ ಗೌಡ (Bhavya Gowda) ಇದೀಗ ಸೀರಿಯಲ್ ಗೆ ಬ್ರೇಕ್ ಕೊಟ್ಟು ದುಬೈಗೆ ಹೋದಂತಿದೆ. ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ದುಬೈನಲ್ಲಿ ತೆಗೆಸಿರುವಂತಹ ಫೋಟೊಗಳನ್ನು ಶೇರ್ ಮಾಡಿದ್ದು, ನೀಲಿ ಮತ್ತು ಬಿಳಿ ಬಣ್ಣದ ಶಾರ್ಟ್ ಡ್ರೆಸಲ್ಲಿ ಭವ್ಯಾ ಮಿಂಚುತ್ತಿದ್ದಾರೆ.

37
ಹಳೆ ಫೋಟೊಗಳನ್ನು ಮತ್ತೆ ಹಂಚಿಕೊಂಡ ನಟಿ

ಧಾರಾವಾಹಿಯಲ್ಲಿ ಕರ್ಣ ತನ್ನ ಮನದಾಳದ ಮಾತುಗಳನ್ನು, ತನ್ನ ಪ್ರೀತಿಯನ್ನು ನಿಧಿಯ ಮುಂದೆ ಹೇಳುತ್ತಿದ್ದಂತೆ, ನಿಧಿ… ಅಲ್ಲಲ್ಲ ಭವ್ಯಾ ಗೌಡ ಖುಷಿಯಲ್ಲಿ ದುಬೈಗೆ ಹಾರಿದ್ರಾ ಅಂದುಕೊಂಡ್ರೆ, ಭವ್ಯಾ ಇದು ಥ್ರೋ ಬ್ಯಾಕ್ ಫೋಟೊಗಳು ಎಂದು ಬರೆದುಕೊಂಡಿದ್ದಾರೆ.

47
ಅಭಿಮಾನಿಗಳ ಮೆಚ್ಚುಗೆ :

ಫೋಟೊಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದು, ಸ್ಮೈಲಿಂಗ್ ಸುಂದರಿ ನಿಧಿ, ನೀವು ತುಂಬಾ ಕ್ಯೂಟು, ಭವ್ಯಾ ಗೌಡ ಕ್ಲಾಸ್ ಗೂ ಸೈ, ಮಾಸ್ ಗೂ ಸೈ, ಬ್ಯೂಟಿ ಕ್ವೀನ್, ತುಂಬಾನೆ ಮುದ್ದಾಗಿ ಕಾಣಿಸ್ತೀರಿ, ನಿಮ್ಮ ಸೀರಿಯಲ್ ಕೂಡ ಸೂಪರ್ ಎಂದಿದ್ದಾರೆ.

57
ಕರ್ಣನ ನಿಧಿ

ಕರ್ಣ ಧಾರಾವಾಹಿಯಲ್ಲಿ ಭವ್ಯ ಗೌಡ ನಿಧಿ ಎನ್ನುವ ವೈದ್ಯ ವಿದ್ಯಾರ್ಥಿನಿಯಾಗಿ ನಟಿಸಿದ್ದು, ಲೆಕ್ಚರರ್ ಆಗಿರುವ ಕರ್ಣನನ್ನು ಪ್ರೀತಿಸುವ ನಿಧಿ, ಅವರಿಗಾಗಿ ಏನು ಬೇಕಾದರೂ ಮಾಡಲು ತಯಾರಿರುತ್ತಾಳೆ. ತಮ್ಮ ಬಬ್ಲಿ ಪಾತ್ರದ ಮೂಲಕವೇ ಭವ್ಯಾ ಗೌಡ ಕನ್ನಡ ಕಿರುತೆರೆ ವೀಕ್ಷಕರ ಮನಸ್ಸು ಗೆದ್ದಿದ್ದಾರೆ.

67
ಕರ್ಣನಿಗೂ ಲವ್ ಆಗಿದೆ

ಇಲ್ಲಿವರೆಗೆ ಧಾರಾವಾಹಿಯಲ್ಲಿ ನಿಧಿ ತನ್ನ ಪ್ರೀತಿಯನ್ನು ಕರ್ಣನಿಗೆ ವಿಧ ವಿಧವಾಗಿ ತಿಳಿಸಿಯಾಗಿದೆ. ಆದರೆ ಕರ್ಣ ಮಾತ್ರ ಪ್ರೀತಿಗೆ ಒಪ್ಪಿಗೆ ಸೂಚಿಸಿಯೇ ಇರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕರ್ಣನಿಗೂ ನಿಧಿ ಮೇಲೆ ಲವ್ ಆಗಿರುವಂತಿದೆ, ಪ್ರತಿ ಮಾತಲ್ಲೂ ಕರ್ಣನ ಮುಖದಲ್ಲೂ ಲವ್ ಆಗಿರೋದು ಎದ್ದು ಕಾಣುತ್ತಿದೆ.

77
ಹೊಸ ಪ್ರೋಮೊದಲ್ಲಿ ಪ್ರೇಮ ನಿವೇದನೆ

ಕರ್ಣ ಧಾರಾವಾಹಿಯಲ್ಲಿ ಸದ್ಯ ತೋರಿಸಿರುವ ಪ್ರೊಮೋದಲ್ಲಿ ಕರ್ಣ ಸರ್ ಗೂ ನಿಧಿ ಮೇಲೆ ಲವ್ ಆಗಿದ್ದು, ಅವರು ಕುಡಿದ ಮಂಪರಿನಲ್ಲಿ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದಾನೆ. ಇನ್ನೇನಿದ್ದರೂ ಇಬ್ಬರ ಪ್ರೇಮ ಕಥೆಗಳು ಪ್ರಸಾರವಾಗಲಿದೆ.

Read more Photos on
click me!

Recommended Stories