Darshan And Om Prakash Rao Movie: ನಟ, ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ನಟ ದರ್ಶನ್‌ಗೆ ಏಳು ಸಿನಿಮಾಗಳಿಂದ ಕದ್ದು ಸಿನಿಮಾ ಮಾಡಿದ್ದರಂತೆ. ಈ ಚಿತ್ರ ರಿಲೀಸ್‌ಗೂ ಮುನ್ನ ಅವರು ಈ ವಿಷಯ ರಿವೀಲ್ ಮಾಡಿದ್ದರು. ಆಮೇಲೆ ಈ ಸಿನಿಮಾ ದಾಖಲೆ ಮಟ್ಟಕ್ಕೆ ಹಿಟ್ ಆಗಿತ್ತು.
“ನಾನು ನೀಡಿದ ಸಿನಿಮಾಗಳನ್ನು ಸೂಪರ್ ಹಿಟ್ ಅಂತ ಜನರು ಕರೆದಿದ್ದಾರೆ. ಆದರೆ ಹೀರೋಗಳು ಬೆಲೆ ಕೊಡಲಿಲ್ಲ. ಹೀರೋಗಳು ಎಲ್ಲಿ ಇದ್ದರೆ, ಮಾತನಾಡಿದರೆ ಚಪ್ಪಾಳೆ ಹೊಡೆಯುತ್ತಾರೆ ಅಂತ ನನಗೆ ಗೊತ್ತಿದೆ. ಕನ್ನಡಿಗರ ನಾಡಿಮಿಡಿತ ಅರ್ಥ ಆಗಿಲ್ಲ ಅಂದರೆ ನಿರ್ದೇಶಕನಾಗಿ ಎಷ್ಟು ಪ್ರಯೋಜನ? ಓಂ ಪ್ರಕಾಶ್ ರಾವ್ ಅಂದರೆ ಯಾರು ಅಂತ ನಾನು ಸ್ಟಾರ್‌ಗಳನ್ನಾಗಿ ಮಾಡಿದ ಹೀರೋಗಳು ಮಾತನಾಡಬೇಕು” ನಿರ್ದೇಶಕರು ಬೇಸರ ಹೊರಹಾಕಿದ್ದಾರೆ.
25
ನನ್ನ ಯಶಸ್ಸಿನ ಬಗ್ಗೆ ಮಾತಾಡೋರಿಲ್ಲ
“50 ಸಿನಿಮಾಗಳ ನಿರ್ದೇಶನ ಮಾಡಿದೆ. ಈ ಸಿನಿಮಾಗಳಲ್ಲಿ ಯಶಸ್ಸಿನ ರೇಟ್ 60% ಮೇಲಿದೆ. ನನ್ನ ಯಶಸ್ಸಿನ ಬಗ್ಗೆ ಬೇರೆಯವರು ಮಾತನಾಡ್ತಾರೆ, ಹೀರೋಗಳು ಮಾತನಾಡಲ್ಲ ಎನ್ನೋ ಬೇಸರವಿದೆ” ಎಂದು ಓಂ ಪ್ರಕಾಶ್ ರಾವ್ ಹೇಳಿದ್ದಾರೆ.
35
ದರ್ಶನ್ ತುಂಬ ಒಳ್ಳೆಯ ನಟ
“ಯೋಧ ಸಿನಿಮಾ ಶೂಟಿಂಗ್ ಮಾಡುತ್ತಿದ್ದೆವು. ಶ್ರೀನಿವಾಸ್ ಮೂರ್ತಿ ಅವರು ಊಟ ಮಾಡುತ್ತಿದ್ದಾರೆ, ಆಗ ದರ್ಶನ್‌ಗೆ ಹೊಡೆಯಬೇಕಿತ್ತು. ನನಗೆ ಸರಿಯಾಗಿ ಹೊಡೆಯಿರಿ, ಆಮೇಲೆ ಡೈರೆಕ್ಟರ್ ಬೈತಾರೆ ಅಂತ ಮೂರು ಸಲ ಶ್ರೀನಿವಾಸ್ ಮೂರ್ತಿ ಬಳಿ ಹೊಡೆಸಿಕೊಂಡರು” ಎಂದು ಓಂ ಪ್ರಕಾಶ್ ರಾವ್ ಹೇಳಿದ್ದಾರೆ.
ಸಾಹುಕಾರ ಸಿನಿಮಾ ಮಾಡುತ್ತಿದ್ದೆ. ಆ ಟೈಮ್‌ನಲ್ಲಿ ಕಲಾಸಿಪಾಳ್ಯ ಸಿನಿಮಾ ಕಥೆ ಕದ್ದು ಸಿನಿಮಾ ಮಾಡಿದ್ದೆ. ಈ ಸಿನಿಮಾ ರಿಲೀಸ್‌ಗೂ ಮುನ್ನವೇ ನಾನು ಏಳು ಸಿನಿಮಾ ಕದ್ದು ಸಿನಿಮಾ ಮಾಡಿದೆ, ಇದು ವೀಕ್ಷಕರಿಗೆ ಇಷ್ಟ ಆಗಿತ್ತು ಎಂದು ಹೇಳಿದೆ. ಈ ಸಿನಿಮಾವು ದರ್ಶನ್‌ಗೂ, ರಕ್ಷಿತಾಗೂ ಸ್ಟಾರ್‌ಗಿರಿ ತಂದುಕೊಟ್ಟಿದೆ ಎಂದು ಓಂ ಪ್ರಕಾಶ್ ರಾವ್ ಹೇಳಿದ್ದಾರೆ.
55
ಸಿನಿಮಾ ಕಲೆಕ್ಷನ್ ಎಷ್ಟು?
ರಾಮು ಅವರು ನಿರ್ಮಾಣ ಮಾಡಿದ್ದ ‘ಕಲಾಸಿಪಾಳ್ಯ’ ಸಿನಿಮಾಕ್ಕೆ ಓಂ ಪ್ರಕಾಶ್ ರಾವ್ ಅವರು ನಿರ್ದೇಶನ ಮಾಡಿದ್ದರು. ಸಾಧುಕೋಕಿಲ ಅವರು ಸಂಗೀತ ನೀಡಿದ್ದರು. ತಮಿಳಿನ ‘ಖಾಖ ಖಾಖ’, ಹಿಂದಿಯ ‘ವಾಸ್ತವ್’, ತಮಿಳಿನ ‘ಧೂಳ್’ ಸಿನಿಮಾದಿಂದ ಕೂಡ ಒಂದಿಷ್ಟು ವಿಷಯಗಳನ್ನು ಕಾಪಿ ಮಾಡಿದ್ದರಂತೆ. 2004ರಲ್ಲಿ ರಿಲೀಸ್ ಆಗಿದ್ದ ಸಿನಿಮಾವು ಅಂದು 22 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತಂತೆ.