ಜನಪ್ರಿಯ ಪ್ಯಾನ್ ಇಂಡಿಯಾ ನಟ ಫಹಾದ್ ಫಾಸಿಲ್ ಮೊಟ್ಟ ಮೊದಲ ಬಾರಿಗೆ ತಮಿಳು ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸುತ್ತಿದ್ದಾರೆ. ಈ ಹಿಂದಿನ ಪ್ಲಾನ್ ಪ್ರಕಾರ ಪ್ರೇಮ್ ಕುಮಾರ್ ಚಿಯಾನ್ ವಿಕ್ರಂ ಅವರಿಗೆ ಹೊಸ ಸಿನಿಮಾ ಮಾಡಬೇಕಿತ್ತು.
ಭಾವನಾತ್ಮಕ ಕಥಾ ಹಂದರದಿಂದಲೇ ಮನಸ್ಸು ಗೆದ್ದಿರುವ ‘96’, ‘ಮೆಯ್ಯಳಗನ್’ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರೇಮ್ ಕುಮಾರ್ ಹೊಸ ಸಿನಿಮಾ ಮಾಡುತ್ತಿದ್ದಾರೆ.
25
ಜನಪ್ರಿಯ ಪ್ಯಾನ್ ಇಂಡಿಯಾ ನಟ
ಈ ಚಿತ್ರದ ಮೂಲಕ ಜನಪ್ರಿಯ ಪ್ಯಾನ್ ಇಂಡಿಯಾ ನಟ ಫಹಾದ್ ಫಾಸಿಲ್ ಮೊಟ್ಟ ಮೊದಲ ಬಾರಿಗೆ ತಮಿಳು ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸುತ್ತಿದ್ದಾರೆ.
35
ಫಹಾದ್ ಫಾಸಿಲ್ ಜೊತೆ ಹೊಸ ಪ್ರಾಜೆಕ್ಟ್
ಈ ಹಿಂದಿನ ಪ್ಲಾನ್ ಪ್ರಕಾರ ಪ್ರೇಮ್ ಕುಮಾರ್ ಚಿಯಾನ್ ವಿಕ್ರಂ ಅವರಿಗೆ ಹೊಸ ಸಿನಿಮಾ ಮಾಡಬೇಕಿತ್ತು. ಆದರೆ ಸದ್ಯ ಆ ಕೆಲಸ ಮುಂದಕ್ಕೆ ಹೋಗಿದ್ದು, ಈಗ ಫಹಾದ್ ಫಾಸಿಲ್ ಜೊತೆಗಿನ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ.
ಪ್ರೇಮ್ ಕುಮಾರ್, ‘ಚಿಯಾನ್ ವಿಕ್ರಂ ಸಿನಿಮಾ ಬರುವುದು ವಿಳಂಬವಾಗುತ್ತಿದೆ. ಅದಕ್ಕೂ ಮೊದಲು ಫಹಾದ್ ಫಾಸಿಲ್ ಜೊತೆ ಸಿನಿಮಾ ಮಾಡಿ ಮುಗಿಸುತ್ತೇನೆ. ನನಗೆ ಏಕಾಂತ ಇಷ್ಟ. ನನ್ನ ಸಿನಿಮಾದಲ್ಲಿರುವುದು ಕೆಲವೇ ಕೆಲವು ಸಹಜ ಪಾತ್ರಗಳು.
55
ನಾಯಕಿಯಿಲ್ಲದ ಸಾಹಸ ಸಿನಿಮಾ
ಆದರೆ ಈ ಬಾರಿ ಕೊಂಚ ಭಿನ್ನ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದೇನೆ. ಸಾಹಸ ಪ್ರಧಾನ ಸಿನಿಮಾ ಮಾಡುತ್ತಿದ್ದೇನೆ. ಇದರಲ್ಲಿ ನಾಯಕಿ ಇರೋದಿಲ್ಲ. 45 ನಿಮಿಷಗಳ ಕಾಲ ಫಹಾದ್ ಫಾಸಿಲ್‌ಗೆ ಕತೆ ಹೇಳಿದೆ. ಅವರು ಬಹಳ ಇಷ್ಟಪಟ್ಟರು’ ಎಂದಿದ್ದಾರೆ.