ಮೈಯಲ್ಲಿದ್ದ ಹೂವುಗಳ ಒಳಹೊಕ್ಕು ಮೆಲ್ಲನೆ ಕಚ್ಚಿತ್ತು ತುಂಟ ಮೊಲ! ಆ ಅನುಭವ ತೆರೆದಿಟ್ಟ Samantha Ruth Prabhu

Published : Sep 11, 2025, 06:21 PM IST

ಸಮಂತಾ ರುತ್​ ಪ್ರಭು ಅವರ 'ಶಾಕುಂತಲಂ' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅವರು ಎದುರಿಸಿದ ಕಷ್ಟಗಳ ಬಗ್ಗೆ ಹೇಳಿದ್ದಾರೆ. ಮೊಲದ ಮರಿಯೊಂದು ತಾವು ಧರಿಸಿದ್ದ ಹೂವುಗಳ ಒಳಹೊಕ್ಕು ಕಚ್ಚಿದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ನಟಿ . ಅವರ ಅನುಭವ ಕೇಳಿ... 

PREV
17
ಉದ್ಯಮ ಜಗತ್ತಿನಲ್ಲಿ...

ಬಹುಭಾಷಾ ತಾರೆ ಸಮಂತಾ ರುತ್​ ಪ್ರಭು ಸದ್ಯ ಸಿನಿಮಾಕ್ಕಿಂತಲೂ ಹೆಚ್ಚಾಗಿ ಉದ್ಯಮ ಜಗತ್ತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೀಕ್ರೆಟ್ ಆಲ್ಕೆಮಿಸ್ಟ್ ನಂತರ, ಅವರು ಈಗ ಮಹಿಳಾ ಮುಟ್ಟಿನ ಮತ್ತು ಕ್ಷೇಮ ಬ್ರ್ಯಾಂಡ್ ZOY ನ ಸಹ-ಸಂಸ್ಥಾಪಕಿಯಾಗಿದ್ದಾರೆ. ಇದರ ಮೂಲಕ ಸಮಾಜಮುಖಿ ಕಾರ್ಯದಲ್ಲಿಯೂ ಅವರು ತೊಡಗಿದ್ದಾರೆ.

27
ಶಾಕುಂತಲೆಯಾಗಿದ್ದ ಸಮಂತಾ ರುತ್​ ಪ್ರಭು

2023ರಲ್ಲಿ ಅವರು ತುಂಬಾ ಸದ್ದು ಮಾಡಿದ್ದು 'ಶಾಕುಂತಲಂ' ಚಿತ್ರದ ಮೂಲಕ. 'ಶಾಕುಂತಲಂ' ಚಲನಚಿತ್ರವು ಕಾಳಿದಾಸನ ಪೌರಾಣಿಕ ನಾಟಕವಾದ 'ಅಭಿಜ್ಞಾನ ಶಾಕುಂತಲಂ' ಆಧರಿಸಿದ ತೆಲುಗು ಚಿತ್ರವಾಗಿದೆ. ಈ ಚಲನಚಿತ್ರದಲ್ಲಿ ಸಮಂತಾ 'ಶಾಕುಂತಲಾ' ಪಾತ್ರವನ್ನು ನಿರ್ವಹಿಸಿದ್ದರು. ಕಾಳಿದಾಸನ 'ಅಭಿಜ್ಞಾನ ಶಾಕುಂತಲಂ' ನಾಟಕವನ್ನು ಆಧರಿಸಿದ ಈ ಚಿತ್ರವನ್ನು ಗುಣಶೇಖರ್ ನಿರ್ದೇಶಿದ್ದಾರೆ. ಈ ಚಿತ್ರದಲ್ಲಿ ನಟಿ ಅದ್ಭುತ ನಟನೆ ತೋರಿದರೂ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು.

37
ಹೂವುಗಳಿಂದ ಅಲರ್ಜಿ

ಆದರೆ, ಈ ಚಿತ್ರದ ಚಿತ್ರೀಕರಣದ ವೇಳೆ ನಟಿಗೆ ತುಂಬಾ ವಿಚಿತ್ರ ಹಾಗೂ ಕಷ್ಟಕರ ಅನುಭವವಾಗಿದ್ದವಂತೆ. ಈ ಕುರಿತು ನಟಿ ಹೇಳಿಕೊಂಡಿದ್ದ ವಿಡಿಯೋ ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಶಕುಂತಲೆ ಎಂದರೆ ಆಕೆಗೆ ಹೂವುಗಳೇ ಶೃಂಗಾರ, ಹೂವುಗಳೇ ಆಭರಣ. ಆದರೆ ಸಮಂತಾ ಅವರಿಗೆ ಹೂವುಗಳು ಎಂದರೆ ಅಲರ್ಜಿಯಂತೆ. ಇದೇ ಕಾರಣಕ್ಕೆ ಮೈ ಮತ್ತು ತೋಳುಗಳಲ್ಲಿ ಅಲರ್ಜಿಯಾಗಿ ತುರಿಕೆಯಾಗಿದ್ದನ್ನು ಸ್ಮರಿಸಿದ್ದಾರೆ ನಟಿ. ಆದರೆ ಚಿತ್ರೀಕರಣದ ಸಂದರ್ಭದಲ್ಲಿ ಈ ಬಗ್ಗೆ ಯಾವುದೇ ದೂರು ಹೇಳದೇ ಕೆಲಸ ಮಾಡಿರುವುದಾಗಿ ಅವರು ಹೇಳಿದ್ದಾರೆ.

47
ಮೊಲ ಮಾಡಿದ ಕಿತಾಪತಿ

3 ಭಾಷೆಗಳಲ್ಲಿ ಚಿತ್ರವನ್ನು ಡಬ್ಬಿಂಗ್ ಮಾಡಬೇಕಿತ್ತು. ಇದು ತುಂಬಾ ಹಿಂಸೆಯಾಗಿತ್ತು. ನಿದ್ರೆಯಲ್ಲಿಯೂ ಡಬ್ಬಿಂಗ್ ಮಾಡುತ್ತಿದ್ದೆ ಎಂದಿರೋ ನಟಿ ಇನ್ನೊಂದು ವಿಚಿತ್ರ ಅನುಭವವನ್ನೂ ತೆರೆದಿಟ್ಟಿದ್ದಾರೆ. ಅದು ಮೊಲದ ಮರಿಯ ಕಿತಾಪತಿ. ಈ ಚಿತ್ರದ ಶೂಟಿಂಗ್​ ಕಾಡಿನ ಪರಿಸರದಲ್ಲಿ ಮಾಡಲಾಗಿತ್ತು. ಅಲ್ಲಿ ಮೊಲಗಳು ಇರಲೇಬೇಕಲ್ಲ. ಆ ಸಂದರ್ಭದಲ್ಲಿ ಮೊಲವೊಂದು ಈಕೆಯ ಹೂವಿನ ಒಳಗೆ ಹೊಕ್ಕು ಕಚ್ಚಿಬಿಟ್ಟಿತ್ತಂತೆ! ಅದರಿಂದ ಅಪಾರ ನೋವು ಆಯಿತು ಎಂದು ನಟಿ ಹೇಳಿಕೊಂಡಿದ್ದಾರೆ. ಮೊಲಗಳು ನಾವು ಅಂದುಕೊಂಡಷ್ಟು ಸಾಫ್ಟ್​ ಪ್ರಾಣಿ ಅಲ್ಲ, ಚೆನ್ನಾಗಿ ಕಚ್ಚುತ್ತವೆ, ತುಂಬಾ ಹಿಂಸೆಯಾಯಿತು ಆ ಸಮಯದಲ್ಲಿ ಎಂದು ಅವರು ಹೇಳಿದ್ದಾರೆ.

57
30 ಕೆ.ಜಿ ಲೆಹಂಗಾ

ನಟಿಯ ಗೋಳು ಇಷ್ಟಕ್ಕೇ ನಿಲ್ಲಲಿಲ್ಲ. ಕಾರಿನಲ್ಲಿ ಚಿತ್ರೀಕರಿಸಲಾದ ಕೆಲವೊಂದು ಸನ್ನಿವೇಶಗಳಲ್ಲಿ ಸಮಂತಾ 30 ಕೆಜಿ ಲೆಹೆಂಗಾವನ್ನು ಧರಿಸಬೇಕಿತ್ತಂತೆ. ಡಿಸೈನರ್ ನೀತಾ ಲುಲ್ಲಾ ತನ್ನನ್ನು ಸುಂದರಗೊಳಿಸಲು ತುಂಬಾ ಪ್ರಯತ್ನಿಸಿದರು.ಅವರು ಒಂದರ ನಂತರ ಒಂದರಂತೆ ಅದ್ಭುತವಾದ ಉಡುಪನ್ನು ವಿನ್ಯಾಸಗೊಳಿಸಿದರು. ಕೊನೆಗೆ 30 ಕೆಜಿ ಲೆಹೆಂಗಾ ಧರಿಸಿದ್ದೆ ಮತ್ತು ಚಿತ್ರದ ಸೀಕ್ವೆನ್ಸ್‌ನಲ್ಲಿ ನಾನು ತಿರುಗಾಡಬೇಕಾಯಿತು. ಆದರೆ ಆ ಸಮಯದಲ್ಲಿ ಭಾರಿ ಸಮಸ್ಯೆಯಾಯಿತು. ಭಾರವಾದ ಲೆಹೆಂಗಾದಿಂದಾಗಿ, ನಾನು ಫ್ರೇಮ್‌ನಿಂದ ಹೊರಗೆ ಹೋಗುತ್ತಿದ್ದೆ. ಕನಿಷ್ಠ 15-20 ಟೇಕ್‌ಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಈ ಸಮಯದಲ್ಲಿ, ನೃತ್ಯ ಮಾಸ್ಟರ್ ರಾಜು ಕೋಪದಿಂದ ನನ್ನನ್ನು ಫ್ರೇಮ್‌ನಲ್ಲಿಯೇ ಇರಲು ಕೇಳಿದರು ಎಂಬುದನ್ನು ನೆನೆಪಿಸಿಕೊಂಡಿದ್ದಾರೆ.

67
ಅಭಿಜ್ಞಾನ ಶಾಕುಂತಲಂ ಸ್ಟೋರಿ

ಇದರೊಂದಿಗೆ, ಶಕುಂತಲಂ ಚಿತ್ರದ ನಾಯಕಿ ಚಿತ್ರದಲ್ಲಿನ ಅವಳ ಕೂದಲು ನಿಜವಲ್ಲ ಎಂಬ ಗುಟ್ಟನ್ನೂ ಅವರು ಬಿಚ್ಚಿಟ್ಟಿದ್ದಾರೆ. ಇನ್ನು 'ಅಭಿಜ್ಞಾನ ಶಾಕುಂತಲಂ' ಕಥೆ ಹೇಳುವುದಾದರೆ, ಪುರು ರಾಜವಂಶದ ರಾಜಕುಮಾರ ದುಷ್ಯಂತ ಮತ್ತು ಮಹರ್ಷಿ ವಿಶ್ವಾಮಿತ್ರನ ಮಗಳು ಶಕುಂತಲೆಯ ನಡುವಿನ ಶಾಶ್ವತ ಪ್ರೀತಿಯ ಕಥೆಯಾಗಿದೆ. 

77
ದೇವ್ ಮೋಹನ್ ಚಿತ್ರ

ದೇವ್ ಮೋಹನ್ ಚಿತ್ರದಲ್ಲಿ ದುಷ್ಯಂತನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ದಕ್ಷಿಣ ಉದ್ಯಮದ ಅನೇಕ ಪ್ರಸಿದ್ಧ ನಟರು ಇದ್ದಾರೆ. ಅದಿತಿ ಬಾಲನ್ ಮತ್ತು ಮೋಹನ್ ಬಾಬು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ ಪುಷ್ಪ ಖ್ಯಾತಿಯ ಅಲ್ಲು ಅರ್ಜುನ್ ಅವರ ಪುತ್ರಿ ಅರ್ಹಾ ಈ ಚಿತ್ರದ ಮೂಲಕ ಪದಾರ್ಪಣೆ ಮಾಡಿದ್ದಾರೆ.

Read more Photos on
click me!

Recommended Stories