ಅಮೃತಧಾರೆ ಭೂಮಿಕಾಗೆ Miserable Syndrome ಸಮಸ್ಯೆ! ಏನಿದು ಗಂಭೀರ ಕಾಯಿಲೆ?

Published : Sep 21, 2025, 11:24 AM IST

'ಅಮೃತಧಾರೆ' ಧಾರಾವಾಹಿಯಲ್ಲಿ ಗೌತಮ್ ಮುಚ್ಚಿಟ್ಟ ಸತ್ಯದಿಂದಾಗಿ ಭೂಮಿಕಾ ಅವನನ್ನು ತೊರೆದಿದ್ದಾಳೆ. ವೀಕ್ಷಕರು ಭೂಮಿಕಾಳ ವರ್ತನೆಗೆ ಅಸಮಾಧಾನಗೊಂಡಿದ್ದು, ಇದರ ಹಿಂದೆ 'Miserable husband Syndrome' ಎಂಬ ಮಾನಸಿಕ ಸಮಸ್ಯೆ ಇರಬಹುದು ಎಂದು ಮನಃಶಾಸ್ತ್ರ ವಿವರಿಸುತ್ತದೆ. ಏನಿದು ಸಮಸ್ಯೆ? 

PREV
17
ಗೌತಮ್​-ಭೂಮಿಕಾ ಒಂದಾಗಲಿ ಎಂದು ಹಾರೈಕೆ

ಅಮೃತಧಾರೆ ಸೀರಿಯಲ್​ (Amuthadhaare Serial) ಮೇಲೆ ಅಭಿಮಾನಿಗಳಿಗೆ ಯಾಕೋ ಸ್ವಲ್ಪ ಅಸಮಾಧಾನ ಉಂಟಾಗುತ್ತಾ ಇದೆ. ಇದಕ್ಕೆ ಕಾರಣ ಭೂಮಿಕಾಳ ನಡವಳಿಕೆ. ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅತ್ಯಾಪ್ತರಾಗಿದ್ದ ಜೋಡಿ ಗೌತಮ್​ ಮತ್ತು ಭೂಮಿಕಾ. ಇದ್ದರೆ ಹೀಗೆಯೇ ಇರಬೇಕು ಎಂದು ಎಷ್ಟೋ ಮಂದಿ ಉದಾಹರಣೆ ಕೊಟ್ಟಿದ್ದರು. ಮಿಡ್ಲ್​ ಏಜ್​ನಲ್ಲಿ ಮದುವೆಯಾದರೂ ಅವರ ಕೆಮೆಸ್ಟ್ರಿಗೆ ಫ್ಯಾನ್ಸ್​ ಫಿದಾ ಆಗಿದ್ದರು.

27
ಭೂಮಿಕಾ ಕಂಡ್ರೆ ಬೈತಿರೋ ವೀಕ್ಷಕರು

ಆದರೆ, ಇದೀಗ ಸ್ಟೋರಿ ಉಲ್ಟಾ ಹೊಡೆದಿದೆ. ಭೂಮಿಕಾಳನ್ನು ಕಂಡರೆ ಯಾರು ನಮ್​ ಭೂಮಿ ಮಿಸ್ಸು ಎನ್ನುತ್ತಿದ್ದರೋ ಅವರೇ ಈಗ ಛೇ, ಇವಳು ಹೀಗೆ ಮಾಡಿದ್ದು ಸರಿಯಲ್ಲ, ಭೂಮಿಕಾ ಮೇಲೆ ಕೋಪ ಬರ್ತಿದೆ, ಇವಳದ್ದು ಅತಿಯಾಯ್ತು, ಗಂಡನನ್ನು ಈ ರೀತಿ ನಡೆಸಿಕೊಳ್ತಿರೋದು ಸರಿಯಲ್ಲ, ಪಾಪ ಗೌತಮ್​ ಎಂದೆಲ್ಲಾ ಹೇಳುತ್ತಿದ್ದಾರೆ.

37
ಗೌತಮ್​ ಪರ ವೀಕ್ಷಕರು

ಅಷ್ಟಕ್ಕೂ ಐದು ವರ್ಷಗಳವರೆಗೆ ಭೂಮಿಕಾಳನ್ನು ಗೌತಮ್​ ಹುಡುಕಿದ ಪರಿಗೆ ಇಬ್ಬರೂ ಬೇಗ ಸಿಗಲಪ್ಪಾ ಎಂದು ಸೀರಿಯಲ್​ ಫ್ಯಾನ್ಸ್​ ಬೇಡಿಕೊಂಡಿದ್ದರು. ಇನ್ನೇನು ಇಬ್ಬರು ಸಿಕ್ಕೇಬಿಟ್ಟರು ಎನ್ನುವಷ್ಟರಲ್ಲಿಯೇ ಭೂಮಿಕಾ, ಗೌತಮ್​ ಮೋಡ ಮಾಡಿರುವುದಾಗಿ ಹೇಳಿ ಅವನನ್ನು ಮಾತನಾಡಿಸದೇ ನೋಯಿಸಿ ಹೋಗಿಬಿಟ್ಟಳು.

47
ಗೌತಮ್​ ಪಾಡು ದೇವರಿಗೇ ಪ್ರೀತಿ

ಈಗ ಕೊನೆಯ ಪಕ್ಷ ಮಗನನ್ನು ನೋಡಲು ಗೌತಮ್​ ತನ್ನ ಗೆಳೆಯ ಆನಂದ್​ ಜೊತೆ ಪಡುತ್ತಿರುವ ಪಾಡು ಆ ದೇವರಿಗೇ ಪ್ರೀತಿ. ಎಷ್ಟೆಂದರೂ ಇದು ಸೀರಿಯಲ್​. ಗಂಡನನ್ನು ನೋಡಿ ಭೂಮಿಕಾ ಸುಲಭದಲ್ಲಿ ಒಪ್ಪಿಕೊಂಡು ಬಿಟ್ಟಿದ್ದರೆ, ಸೀರಿಯಲ್​ ಮುಂದೆ ಹೋಗುತ್ತಿರಲಿಲ್ಲ ಎನ್ನಿ.

57
ಭೂಮಿಕಾಳಿಗೆ Miserable husband Syndrome

ಇದು ಬಿಡಿ. ಇದು ಸೀರಿಯಲ್​ ಕಥೆ. ಆದರೆ ರಿಯಲ್​ ಆಗಿಯೂ ಭೂಮಿಕಾಳಂಥ ಮನಸ್ಥಿತಿ ಯಾವುದಾದರೂ ಹೆಣ್ಣಿಗೆ ಬರಲು ಸಾಧ್ಯವೆ? ಹೌದು ಎನ್ನುತ್ತದೆ ಮನಶ್ಯಾಸ್ತ್ರ. ಭೂಮಿಕಾಗೆ ಆಗಿರುವ ಸಮಸ್ಯೆ ಮಾನಸಿಕ ಸಮಸ್ಯೆ. ಅದಕ್ಕೆ Miserable husband Syndrome ಎಂದು ಕರೆಯಲಾಗುತ್ತದೆ. ಇದರ ಅರ್ಥ ತುಂಬಾ ಪ್ರೀತಿಸುತ್ತಾನೆ ಎಂದುಕೊಂಡ ಗಂಡ ಸುಳ್ಳು ಹೇಳಿದಾಗ ಅದು ಹೆಣ್ಣಿನ ಮನಸ್ಸಿನ ಮೇಲೆ ಆಗುವ ಗಂಭೀರ ಪರಿಣಾಮ.

67
ಗೌತಮ್​ ಮಾಡಿದ್ದ ಒಂದೇ ಒಂದು ತಪ್ಪು

ಅಮೃತಧಾರೆ ಸೀರಿಯಲ್​ನಲ್ಲಿ ಗೌತಮ್​ ಮಾಡಿದ್ದ ಒಂದೇ ತಪ್ಪು ಎಂದರೆ, ಭೂಮಿಕಾಗೆ ಅವಳಿ ಮಕ್ಕಳು ಹುಟ್ಟಿದ್ದರ ಸತ್ಯವನ್ನು ಮುಚ್ಚಿಟ್ಟಿದ್ದು. ಹುಟ್ಟುತ್ತಲೇ ಮಗಳು ಕಿಡ್ಯಾಪ್​ ಆದಳು ಎಂದರೆ ಎಲ್ಲಿ ಭೂಮಿಕಾ ನೊಂದುಕೊಳ್ಳುತ್ತಾಳೋ ಎಂದು ಸತ್ಯ ಮುಚ್ಚಿಟ್ಟ. ಈ ಶಾಕ್​ ತಡೆದುಕೊಳ್ಳುವ ಶಕ್ತಿ ಅವಳಿಗೆ ಇಲ್ಲ ಎಂದು ವೈದ್ಯರು ಕೂಡ ಹೇಳಿದ್ದಕ್ಕೆ ಈ ನಿರ್ಧಾರ ಮಾಡಿದ್ದ. ಆದರೆ ಅದು ಕೊನೆಗೆ ಆಕೆಗೆ ಗೊತ್ತಾಗಿ ಇಷ್ಟು ದೊಡ್ಡ ಸತ್ಯವನ್ನು ಮುಚ್ಚಿಟ್ಟ ಎಂದು ಭೂಮಿಕಾಗೆ ಅರಗಿಸಿಕೊಳ್ಳಲು ಆಗಲಿಲ್ಲ.

77
ಹೆಣ್ಣಿನ ದೃಷ್ಟಿಯಲ್ಲಿ ದೊಡ್ಡ ಅಪರಾಧ

ಗಂಡ ಎಷ್ಟೇ ಪ್ರೀತಿಸಿದರೂ, ಆತ ಸುಳ್ಳು ಹೇಳದೇ ಹೋದರೂ, ಇಂಥ ದೊಡ್ಡ ಸತ್ಯ ಮುಚ್ಚಿಟ್ಟಿದ್ದು ಹೆಣ್ಣಿನ ದೃಷ್ಟಿಯಲ್ಲಿ ಬಹುದೊಡ್ಡ ಅಪರಾಧವೇ ಆಗುತ್ತದೆ. ಈ ಸೀರಿಯಲ್​ನಲ್ಲಿ ಸತ್ಯ ಏನು ಎನ್ನುವುದು ವೀಕ್ಷಕರಿಗೆ ತೋರಿಸಿದ್ದರಿಂದ ಇಲ್ಲಿ ಭೂಮಿಕಾಳ ತಪ್ಪು ಎನ್ನಿಸುತ್ತದೆ. ಆದರೆ ನಿಜ ಜೀವನದಲ್ಲಿ ಹಾಗಲ್ಲವಲ್ಲ. ಅಲ್ಲಿ ಗಂಡ ಸತ್ಯ ಮುಚ್ಚಿಟ್ಟಿದ್ದಾನೆ ಅಷ್ಟೇ. ಅಷ್ಟಕ್ಕೂ ಇದನ್ನು ಮಾತನಾಡುವ ಮೂಲಕ ಬಗೆಹರಿಸಿಕೊಂಡರೆ ಅಲ್ಲಿಗೆ ಎಲ್ಲವೂ solve ಆಗುತ್ತಿತ್ತು ಎನ್ನುವುದು ಸತ್ಯವಾದರೂ, ಹೆಣ್ಣಿನ ಮನಸ್ಸಿನ ಮೇಲೆ ಅಂಥ ದೊಡ್ಡ ಆಘಾತವಾಗಿದ್ದರಿಂದ ಭೂಮಿಕಾಳಂಥ ಹೆಣ್ಣುಮಕ್ಕಳು ಮನೆ ಬಿಡುತ್ತಾರೆ ಎನ್ನುವುದೂ ಸತ್ಯ ಎನ್ನುತ್ತದೆ ಮನಃಶಾಸ್ತ್ರ. ಇದೇ Miserable husband Syndrome.

Read more Photos on
click me!

Recommended Stories