ಕಳಚಿಬಿತ್ತು ಮುಸುಕುಧಾರಿಯ ಮುಖವಾಡ; ಕೆನ್ನೆಗೆ ಬಿದ್ದ ಏಟಿಗೆ ವಿಲನ್​ ವಿಲವಿಲ!

Published : Aug 19, 2025, 08:58 PM IST

ಮುಸುಕು ಧರಿಸಿ ಬಂದು ಮಗುವನ್ನು ಮುಗಿಸಲು ಸಂಚು ಹೂಡಿದ್ದ ಜೈದೇವನ ಬಂಡವಾಳ ಭೂಮಿಕಾ ಮುಂದೆ ಬಯಲಾಗಿದೆ. ಜೈದೇವನ ಕಪಾಳಮೋಕ್ಷ ಮಾಡಿದ್ದಾಳೆ ಭೂಮಿಕಾ. ಮುಂದೇನು ನೋಡಿ! 

PREV
17
ಅಮೃತಧಾರೆ ಸೀರಿಯಲ್ಗೆ ರೋಚಕ ತಿರುವು

ಅಮೃತಧಾರೆ ಸೀರಿಯಲ್​ ಇದೀಗ ಭಾರಿ ರೋಚಕ ತಿರುವು ಪಡೆದುಕೊಂಡಿದೆ. ಇದಾಗಲೇ ವಿಲನ್​ಗಳ ಮುಖವಾಡ ಭೂಮಿಕಾ ಮುಂದೆ ಬಟಾಬಯಲಾಗಿದೆ. ಅತ್ತೆ ಶಕುಂತಲಾ ಎಷ್ಟು ದೊಡ್ಡ ಸಂಚು ಮಾಡಿದ್ದಾಳೆ ಎಂದು ಸಾಕ್ಷಿ ಸಹಿತ ಪೆದ್ದು ಗಂಡನಿಗೆ ತೋರಿಸಿದರೂ, ಆತನಿಗೆ ತನ್ನ ಚಿಕ್ಕಮ್ಮನೇ ಸರ್ವಸ್ವ. ಅವಳ ವಿರುದ್ಧ ಒಂದೇ ಒಂದು ಮಾತು ಕೇಳಲು ಆತನಿಗೆ ಆಗುವುದಿಲ್ಲ. ಇದೇ ಕಾರಣಕ್ಕೆ ಭೂಮಿಕಾಗೆ ಭಾರಿ ಸೋಲು ಉಂಟಾಗಿದೆ.

27
ಬೆಂಕಿಯ ಚೆಂಡಾದ ಭೂಮಿಕಾ

ಆದರೆ ಆಕೆ ಬರೀ ಭೂಮಿಕಾ ಅಲ್ಲ, ಬೆಂಕಿಯ ಚೆಂಡು. ಇದೇ ವೇಳೆ ಮನೆಗೆ ನುಗ್ಗಿ ಮನೆಯಲ್ಲಿ ಮಲಗಿದ್ದ ಭೂಮಿಕಾಳ ಮಗುವನ್ನು ಕೊಲ್ಲಲು ಮಾಸ್ಕ್​ ಹಾಕಿಕೊಂಡು ಬಂದಿದ್ದ ಜೈದೇವ. ಆದರೆ ಮಲ್ಲಿ ಆತನನ್ನು ಹೊಡೆದು ಓಡಿಸಿದ್ದಳು.ಆದರೆ ಆತನೇ ಜೈದೇವ ಎನ್ನುವುದು ತಿಳಿದಿರಲಿಲ್ಲ

37
ಮಾಸ್ಕ್​ಮ್ಯಾನ್​ ಜೈದೇವ

ಇದೀಗ ಸೃಜನ್​ ಈ ಬಗ್ಗೆ ತನಿಖೆ ನಡೆಸಿದಾಗ ಮಾಸ್ಕ್​ಮ್ಯಾನ್​ ಜೈದೇವ ಎನ್ನುವುದು ತಿಳಿದಿದೆ. ಇದನ್ನು ಗೌತಮ್​ಗೆ ಹೇಳೋಣ ಎಂದು ಸೃಜನ್​ ಹೇಳಿದಾಗ ಭೂಮಿಕಾ ಅದನ್ನು ಒಪ್ಪಲಿಲ್ಲ. ಇದಕ್ಕೆ ಕಾರಣ, ಇದನ್ನೂ ಆತ ನಂಬದಿದ್ದರೆ ಎನ್ನುವ ಸ್ಥಿತಿ ಅವಳದ್ದು. ಅಷ್ಟೇ ಅಲ್ಲದೇ ಈ ಮಾಸ್ಕ್​ಮ್ಯಾನ್​ ಜೈದೇವನೇ ಎಂದು ಸಾಬೀತು ಮಾಡುವುದು ಆಕೆಗೆ ಕಷ್ಟವೂ ಆಗಿದೆ.

47
ಜೈದೇವ್​ಗೆ ಕಪಾಳಮೋಕ್ಷ

ಹಾಗೆಂದು ಆಕೆ ಸುಮ್ಮನೇ ಬಿಡಲಿಲ್ಲ. ಸೀದಾ ಜೈದೇವ ಇರುವಲ್ಲಿಗೆ ಹೋಗಿದ್ದಾಳೆ. ಆ ಸಮಯದಲ್ಲಿ ಜೈದೇವ ಗೌತಮ್​ ಬಗ್ಗೆ ಹಗುರವಾಗಿ ಮಾತನಾಡಿದ್ದಾನೆ. ಭೂಮಿಕಾಗೂ ಏಕವಚನದಲ್ಲಿ ಬೈದಿದ್ದಾನೆ. ಗಂಡನ ಬಗ್ಗೆ ಇಲ್ಲಸಲ್ಲದ್ದು ಹೇಳಿದ್ರೆ ಭೂಮಿಕಾ ಸುಮ್ಮನೇ ಇರ್ತಾಳಾ? ಆಗ ಶಕುಂತಲಾ ಕೆನ್ನೆಗೆ ಬಿಗಿದಂತೆ ಜೈದೇವ್​ಗೂ ಕಪಾಳಮೋಕ್ಷ ಮಾಡಿದ್ದಾಳೆ.

57
ಕಂಗಾಲಾಗಿ ಹೋದ ಜೈದೇವ

ಈ ಅನಿರೀಕ್ಷಿತ ಘಟನೆಯಿಂದ ಜೈದೇವ ಕಂಗಾಲಾಗಿ ಹೋಗಿದ್ದಾನೆ. ನಿನ್ನನ್ನು ಸುಮ್ಮನೇ ಬಿಡುವುದಿಲ್ಲ. ನನ್ನನ್ನು ಮುಟ್ಟಿ ನೀನು ದೊಡ್ಡ ತಪ್ಪು ಮಾಡಿದ್ದಿ ಎಂದಿದ್ದಾನೆ. ಅದಕ್ಕೆ ಭೂಮಿಕಾ ನಿಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ. ಅಣ್ಣ ಶ್ರಮಪಟ್ಟು ಕಟ್ಟಿದ ಕೋಟೆಯಲ್ಲಿ, ಮಜ ಮಾಡಿಕೊಂಡು ಇದ್ದವರು ನೀವು. ನಿಮ್ಮದೇ ಐಡೆಂಟಿಟಿ ಏನಿದೆ ಎಂದು ಪ್ರಶ್ನಿಸಿದ್ದಾಳೆ.

67
ಶಕುಂತಲಾಗೆ ಬುದ್ಧಿ ಕಲಿಸಿದ ಭಾಗ್ಯಮ್ಮ

ಒಟ್ಟಿನಲ್ಲಿ ಅತ್ತ ಶಕುಂತಲಾ ವರ್ಸಸ್​ ಭೂಮಿಕಾ ಆಗಿದ್ರೆ ಇತ್ತ ಜೈದೇವ್​ ವರ್ಸಸ್​ ಭೂಮಿಕಾ ಆಗಿದೆ. ಅದೇ ಇನ್ನೊಂದೆಡೆ, ಭಾಗ್ಯಳಿಗೆ ಹೊಡೆಯಲು ಹೋದಾಗ ಭಾಗ್ಯ ಶಕುಂತಲಾಳ ಕೈಯನ್ನು ತಿರುಚಿದ್ದಾಳೆ. ಇದನ್ನು ನೋಡಿ ಶಕುಂತಲಾ ಥರಥರ ನಡುಗಿ ಹೋಗಿದ್ದಾಳೆ. ಭಾಗ್ಯ ಇಷ್ಟು ಹುಷಾರಾಗಿರುವುದು ಆಕೆಗೆ ತಿಳಿದಿರಲಿಲ್ಲ.

77
ಕುತೂಹಲದ ತಿರುವಿನಲ್ಲಿ ಸೀರಿಯಲ್​

ಒಟ್ಟಿನಲ್ಲಿ ಅಮೃತಧಾರೆ ಸೀರಿಯಲ್​ ದಿನದಿಂದ ದಿನಕ್ಕೆ ಕುತೂಹಲದ ತಿರುವು ಪಡೆಯುತ್ತಿರುವ ಹಿನ್ನೆಲೆಯಲ್ಲಿ, ವೀಕ್ಷಕರಿಗೆ ಸಕತ್​ ಖುಷಿ ಕೊಡುತ್ತಿದೆ.

Read more Photos on
click me!

Recommended Stories