ಬಾಲಿವುಡ್‌ನ ಶಾಶ್ವತ ಫ್ಯಾಷನ್ ಟ್ರೆಂಡ್‌ಗಳು ಕನ್ನಡ ಸಿನಿಮಾದಲ್ಲಿ ಭಾರತೀಯ ಫ್ಯಾಷನ್‌ನಲ್ಲಿ ಬಾಲಿವುಡ್ ಚಿತ್ರರಂಗವು ಬಹಳ ಸಮಯದಿಂದಲೂ ಟ್ರೆಂಡ್‌ಸೆಟರ್ ಆಗಿದೆ. ಈ ಟ್ರೆಂಡ್ ಸೆಟ್ಟಿಂಗ್ ಕನ್ನಡ ಸಿನಿಮಾಗಳ ಮೇಲೆ ಬೆಳಕು ಬೀರಿದೆ.
ಕನ್ನಡ ಸಿನಿಮಾಗಳು ತಮ್ಮದೇ ಆದ ವಿಶಿಷ್ಟ ಸಾಂಸ್ಕೃತಿಕ ಗುರುತನ್ನು ಹೊಂದಿದ್ದರೂ, ಅವುಗಳು ಆಗಾಗ ಬಾಲಿವುಡ್‌ನ ಐಕಾನಿಕ್ ಫ್ಯಾಷನ್ ಟ್ರೆಂಡ್‌ಗಳನ್ನು ಅಳವಡಿಸಿಕೊಳ್ಳುತ್ತವೆ.
28
ಅನಾರ್ಕಲಿ ಸೂಟ್
ಮೊಘಲ್ ಯುಗದಿಂದ ಸ್ಫೂರ್ತಿಯನ್ನು ಪಡೆದಿರುವ ಮತ್ತು ಮೊಘಲ್-ಎ-ಆಜಮ್ (1960) ಸಿನಿಮಾದಿಂದ ಜನಪ್ರಿಯಗೊಂಡ ಅನಾರ್ಕಲಿ ಸೂಟ್ ಎಲ್ಲ ಕಾಲಕ್ಕೂ ಮೆಚ್ಚುಗೆ ಪಡೆದಿದೆ. ಇದರ ತೇಲುವ ಸಿಲೂಯೆಟ್, ಸೂಕ್ಷ್ಮವಾದ ಕಸೂತಿ ಕೆಲಸ, ರಾಜಮನೆತನದ ಆಕರ್ಷಣೆಯಾಗಿದೆ. ಇದನ್ನು ಉತ್ಸವದಲ್ಲಿ, ಮದುವೆಗಳಲ್ಲಿ ಪ್ರಮುಖ ಆಯ್ಕೆ ಮಾಡಿಕೊಳ್ಳಲಾಗಿದೆ. ಕನ್ನಡ ಸಿನಿಮಾದಲ್ಲಿ, ರಾಧಿಕಾ ಪಂಡಿತ್, ರಚಿತಾ ರಾಮ್‌ರಂತಹ ನಟಿಯರು ಕೂಡ ಈ ಡ್ರೆಸ್ ಹಾಕಿದ್ದರು. ಬಾಲಿವುಡ್‌ನ ವೈಭವದ ಶೈಲಿ ಜೊತೆಗೆ ಕರ್ನಾಟಕದ ಸಾಂಪ್ರದಾಯಿಕ ನೇಯ್ಗೆಗಳಾದ ಇಳಕಲ್, ಬನಾರಸಿಯೊಂದಿಗೆ ಸಂಯೋಜಿಸಲಾಗಿದೆ. ಎಲ್ಲ ತಲೆಮಾರಿನ ಮಹಿಳೆಯರು ಈ ಡ್ರೆಸ್‌ನ್ನು ಹಾಕಿಕೊಳ್ಳಬಹುದು.
38
ಮುಮ್ತಾಜ್ ಸೀರೆ; ರೆಟ್ರೊ ಚಿಕ್
ಬ್ರಹ್ಮಚಾರಿ (1968) ಸಿನಿಮಾದಲ್ಲಿ ಮುಮ್ತಾಜ್‌ರಿಂದ ಈ ಡ್ರೆಸ್ ಪರಿಚಯಿಸಲ್ಪಟ್ಟಿದೆ. ಸೀರೆ ಸ್ಟೈಲಿಂಗ್‌ನಲ್ಲಿ ಕ್ರಾಂತಿಯನ್ನೇ ತಂದಿತು. ಇದರ ಆರೇಂಜ್ ಕಲರ್ ಸೀರೆ, ವಿಶಿಷ್ಟ ಕಟ್ಟುವ ಶೈಲಿಯು ಒಂದು ಸಂಚಲನವನ್ನು ಸೃಷ್ಟಿಸಿತು. ವಿಂಟೇಜ್ ಥೀಮ್‌ನ ಲುಕ್‌ಗಳಿಗೆ ಇದು ಸ್ಫೂರ್ತಿಯಾಗಿದೆ. ಕನ್ನಡ ಸಿನಿಮಾದಲ್ಲಿ, ಈ ರೆಟ್ರೊ ಶೈಲಿಯು ಪುನರ್ ಬಳಕೆಯಾಗಿದೆ. ಕರ್ನಾಟಕದಲ್ಲಿ ಮುಮ್ತಾಜ್ ಸೀರೆಯು ಥೀಮ್ ಪಾರ್ಟಿಗಳಿಗೆ, ಹಬ್ಬಗಳಲ್ಲಿ ಜನಪ್ರಿಯವಾಗಿದೆ.
ಚಾಂದನಿ (1989) ಸಿನಿಮಾದಲ್ಲಿ ಶ್ರೀದೇವಿ, ಹಮ್ ಆಪ್‌ಕೆ ಹೈ ಕೌನ್ (1994) ರಲ್ಲಿ ಮಾಧುರಿ ದೀಕ್ಷಿತ್‌ರಂತಹ ನಟಿಯರಿಂದ ಶಿಫಾನ್ ಸೀರೆಗಳು ಜನಪ್ರಿಯವಾಗಿವೆ. ಭಾರತೀಯ ಫ್ಯಾಷನ್‌ಗೆ ಮೃದು, ರೊಮ್ಯಾಂಟಿಕ್ ವೈಬ್ ತಂದವು. ಇವುಗಳು ಲೈಟ್‌ವೇಟ್ ಆಗಿವೆ. ಕನ್ನಡ ಸಿನಿಮಾಗಳಲ್ಲಿ, ಶಿಫಾನ್ ಸೀರೆಗಳು ರೊಮ್ಯಾಂಟಿಕ್ ಸೀನ್‌ನಲ್ಲಿ ಆಗಾಗ ಕಂಡುಬರುತ್ತವೆ. ಈ ಸೀರೆಗಳು, ಆಗಾಗ ಸ್ಲೀವ್‌ಲೆಸ್ ಅಥವಾ ಉದ್ದನೆಯ ತೋಳಿನ ಬ್ಲೌಸ್‌ಗೆ ಮ್ಯಾಚ್ ಮಾಡಿ ಹಾಕಿಕೊಳ್ಳಲಾಗುತ್ತದೆ.
58
ಡೆನಿಮ್ ಮತ್ತು ಡಂಗರೀಸ್: ಕ್ಯಾಶುಯಲ್ ಕೂಲ್
1990 ರ ದಶಕದ ಬಾಲಿವುಡ್ ಸಿನಿಮಾಗಳಾದ ಕುಚ್ ಕುಚ್ ಹೋತಾ ಹೈ (1998) ಡೆನಿಮ್ ಜಾಕೆಟ್‌ಗಳು, ಡಂಗರೀಸ್ ಪಾಪ್ಯುಲರ್ ಆಯಿತು. ಕಾಜೋಲ್‌ನ ಟಾಂಬಾಯಿಶ್ ಲುಕ್ ಯುವಜನರಿಗೆ ಫೇವರಿಟ್ ಆಗಿತ್ತು. ಹರಿಪ್ರಿಯಾ, ನಭಾ ನಟೇಶ್‌ರಂತಹ ನಟಿಯರು ಡೆನಿಮ್ ಡ್ರೆಸ್ ಹಾಕಿದ್ದಾರೆ.
68
ಲೆಹೆಂಗಾ ಚೋಲಿ
ದೇವದಾಸ್ (2002), ಕಭಿ ಖುಶಿ ಕಭಿ ಗಮ್ (2001) ಸಿನಿಮಾಗಳಲ್ಲಿ ಕಾಣುವ ಲೆಹೆಂಗಾ ಚೋಲಿ ಗ್ರ್ಯಾಂಡ್ ಕಾರ್ಯಕ್ರಮಗಳಿಗೆ ಹೇಳಿ ಮಾಡಿಸಿದ ಡ್ರೆಸ್ ಆಗಿದೆ. ಮನೀಷ್ ಮಲ್ಹೋತ್ರಾರಂತಹ ಡಿಸೈನರ್‌ಗಳು ಸೂಕ್ಷ್ಮ ಕಸೂತಿ ಕೆಲಸ, ಆಧುನಿಕ ಕಟ್‌ಗಳೊಂದಿಗೆ ಡೆವಲಪ್ ಮಾಡಿದ್ದಾರೆ. ಕನ್ನಡ ಸಿನಿಮಾದಲ್ಲಿ, ರಶ್ಮಿಕಾ ಮಂದಣ್ಣ, ಶ್ರದ್ಧಾ ಶ್ರೀನಾಥ್‌ರಂತಹ ನಟಿಯರು ಮದುವೆಯ ಎಪಿಸೋಡ್‌ನಲ್ಲಿ, ಸಿನಿಮಾ ಪ್ರಮೋಶನ್‌ನಲ್ಲಿ ಲೆಹೆಂಗಾಗಳನ್ನು ಧರಿಸುತ್ತಾರೆ. ಮೈಸೂರು ರೇಷ್ಮೆ ಬಟ್ಟೆ ಜೊತೆಗೆ ಈ ಡ್ರೆಸ್ ಕಂಬೈನ್ ಮಾಡುತ್ತಾರೆ.
78
ಆಥ್‌ಲೀಶರ್
ದಿಲ್ ತೋ ಪಾಗಲ್ ಹೈ (1997), ಕುಚ್ ಕುಚ್ ಹೋತಾ ಹೈ (1998) ರಂತಹ ಬಾಲಿವುಡ್ ಸಿನಿಮಾಗಳು ಆಥ್‌ಲೀಶರ್‌ನ್ನು ಪರಿಚಯಿಸಿತು, ಸ್ಪೋರ್ಟಿ ಟ್ರ್ಯಾಕ್‌ಸೂಟ್‌ಗಳು ಮತ್ತು ಹೆಡ್‌ಬ್ಯಾಂಡ್‌ಗಳು ಯುವಕರಲ್ಲಿ ಟ್ರೆಂಡಿ ಆಗಿತ್ತು.
88
ಸಾಧನಾ ಕಟ್
ಲವ್ ಇನ್ ಸಿಮ್ಲಾ (1960) ರಲ್ಲಿ ಸಧನಾರಿಂದ ಪರಿಚಯಿಸಲ್ಪಟ್ಟ ಫ್ರಿಂಜ್ ಕೇಶ ವಿನ್ಯಾಸವಾದ ಸಧನಾ ಕಟ್, 1960 ರ ದಶಕದಲ್ಲಿ ಒಂದು ಕ್ರೇಜ್ ಆಗಿತ್ತು. ಈ ಐಕಾನಿಕ್ ಲುಕ್ ಕನ್ನಡ ಸಿನಿಮಾದಲ್ಲಿ ಪ್ರಿಯಮಣಿಯಂತಹ ನಟಿಯರಿಂದ ರೆಟ್ರೊ ಆಧಾರಿತ ಪಾತ್ರಗಳಲ್ಲಿ ಮರುಸೃಷ್ಟಿಯಾಗಿದೆ.