ಲಕ್ಷ್ಮೀ ನಿವಾಸ ನಟ ಅಜಯ್ ರಾಜ್ ಮಗನ ಅದ್ದೂರಿ ನಾಮಕರಣ… ಮುದ್ದಾದ ಹೆಸರನ್ನಿಟ್ಟ ಜೋಡಿ

Published : Aug 19, 2025, 06:56 PM IST

ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ನಟಿಸಿ ಜನಪ್ರಿಯತೆ ಗಳಿಸಿರುವ ನಟ ಅಜಯ್ ರಾಜ್ ಹಾಗೂ ಪದ್ಮಿನಿ ದೇವನಹಳ್ಳಿ ತಮ್ಮ ಮುದ್ದು ಮಗನಿಗೆ ನಾಮಕರಣ ಮಾಡಿ, ಮುದ್ದಾದ ಹೆಸರಿಟ್ಟಿದ್ದಾರೆ. 

PREV
17

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಲಕ್ಷ್ಮೀ ಶ್ರೀನಿವಾಸರ ಕಿರಿಯ ಪುತ್ರ ಹರೀಶನ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿರುವ ನಟ ಅಜಯ್ ರಾಜ್ ಅವರು ತಮ್ಮ ಮುದ್ದು ಮಗನ ನಾಮಕರಣವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.

27

ಹೌದು, ಕನ್ನಡ ಚಿತ್ರರಂಗದಲ್ಲಿ ಬಾಲನಟನಾಗಿ ಗುರುತಿಸಿಕೊಂಡು, ನಂತರ ಹಲವು ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟ ಅಜಯ್ ರಾಜ್ ಹಾಗೂ ಹಿಟ್ಲರ್ ಕಲ್ಯಾಣ ಧಾರಾವಾಹಿಯ ನಟಿ ಪದ್ಮಿನಿ ದೇವನಹಳ್ಳಿ ಕೆಲವು ತಿಂಗಳ ಹಿಂದೆ ಚೊಚ್ಚಲ ಮಗುವನ್ನು ಬರಮಾಡಿಕೊಂಡಿದ್ದರು.

37

ಹಲವು ವರ್ಷಗಳಿಂದ ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರ್ರುವ ಪದ್ಮಿನಿ ದೇವನಹಳ್ಳಿ - ಅಜಯ್ ರಾಜ್‌ 2020ರಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದರು. ಈ ಜೋಡಿ 2025ರ ಏಪ್ರಿಲ್ 15 ರಂದು ಗಂಡು ಮಗುವನ್ನು ತಮ್ಮ ಜೀವನದಲ್ಲಿ ಬರಮಾಡಿಕೊಂಡಿದ್ದರು.

47

ಇದೀಗ ಮಗು ಜನಿಸಿ ನಾಲ್ಕು ತಿಂಗಳ ಬಳಿಕ ತಮ್ಮ ಮುದ್ದಾದ ಮಗನಿಗೆ ಪೋಷಕರಾಗಿ ಅಜಯ್ ರಾಜ್ - ಪದ್ಮಿನಿ ಅದ್ಧೂರಿಯಾಗಿ ನಾಮಕರಣ ಶಾಸ್ತ್ರವನ್ನು ಮಾಡಿ, ಮಗುವಿಗೆ ಮುದ್ದಾದ ಹಾಗೂ ವಿಭಿನ್ನವಾದ ಹೆಸರನ್ನಿಟ್ಟಿದ್ದಾರೆ.

57

ಸೋಶಿಯಲ್ ಮೀಡಿಯಾದಲ್ಲಿ ಅಜಯ್ ರಾಜ್ ಪುತ್ರನ ನಾಮಕರಣ ಸಮಾರಂಭದ ಫೋಟೊಗಳು ವೈರಲ್ ಆಗುತ್ತಿವೆ. ಅಷ್ಟಕ್ಕೂ ಈ ಜೋಡಿ ಮಗುವಿಗೆ ಏನೆಂದು ಹೆಸರಿಟ್ಟಿದ್ದಾರೆ ಗೊತ್ತಾ? ಪುಟ್ಟ ಕಂದನಿಗೆ ತಸ್ಮೈ ವಿಷ್ಣು ಎಂದು ಹೆಸರಿಟ್ಟಿದ್ದಾರೆ.

67

ನಾಮಕರಣ ಶಾಸ್ತ್ರಕ್ಕೆ ಲಕ್ಷ್ಮೀ ನಿವಾಸ ಧಾರಾವಾಹಿಯ ನಟರು ಸೇರಿ ಹಲವರು ಆಗಮಿಸಿ ಶುಭ ಕೋರಿದ್ದಾರೆ. ಲಕ್ಷ್ಮೀ ನಿವಾಸ ಧಾರಾವಾಹಿಯ ಅಶೋಕ್ ಜಂಬೆ, ದಿವ್ಯಶ್ರೀ, ಲಕ್ಷ್ಮೀ ಹೆಗಡೆ ಸೇರಿ ಹಲವು ಕಲಾವಿದರು ಆಗಮಿಸಿದ್ದರು.

77

ಅಜಯ್ ರಾಜ್ ಹಳ್ಳಿ ಮೇಷ್ಟ್ರು ಸಿನಿಮಾದಲ್ಲಿ ರವಿಚಂದ್ರನ್ ಜೊತೆ ಬಾಲ ನಟರಾಗಿ ನಟಿಸಿದ್ದರು. ಅದಾದ ಬಳಿಕ ಹಲವು ಸೀರಿಯಲ್ ಗಳಲ್ಲಿ ನಟಿಸಿ, ಸದ್ಯ ಲಕ್ಷ್ಮೀ ನಿವಾಸದಲ್ಲಿ ನಟಿಸುತ್ತಿದ್ದಾರೆ. ಪತ್ನಿ ಪದ್ಮಿನಿ ಕೊನೆಯದಾಗಿ ಹಿಟ್ಲರ್ ಕಲ್ಯಾಣದಲ್ಲಿ ನಟಿಸಿದ್ದರು. ಗರ್ಭಿಣಿಯಾದ ಬಳಿಕ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.

Read more Photos on
click me!

Recommended Stories