Amruthadhaare: ಭೂಮಿಕಾಗೆ ಮತ್ತೊಂದು ಮಗುವಾಗೋ ಟೈಮ್​ ಬಂದಾಯ್ತು? ಶ್ರೀರಸ್ತು ಶುಭಮಸ್ತು ರಿಪೀಟ್ಸ್

Published : May 27, 2026, 12:40 PM IST

ಮಕ್ಕಳಿಲ್ಲದ ಮಹಿಮಾಗಾಗಿ ಭೂಮಿಕಾ ಮತ್ತೊಂದು ಮಗುವನ್ನು ಹೆರುತ್ತಾಳಾ ಎಂಬ ಪ್ರಶ್ನೆ ಅಮೃತಧಾರೆ ಸೀರಿಯಲ್​ನಲ್ಲಿ ಮೂಡಿದೆ. ಜ್ಯೋತಿಷಿಯ ಭವಿಷ್ಯದಂತೆ ಹೊಸ ಮಗು ಗೌತಮ್ ಪ್ರಾಣಕ್ಕೆ ಕಂಟಕ ತಂದರೆ, ಆ ಮಗು ಮುಂದೆ ವಿಲನ್ ಆಗುವ ಸಾಧ್ಯತೆಯ ಬಗ್ಗೆ ಕಥೆ ಕುತೂಹಲ ಕೆರಳಿಸಿದೆ.

PREV
15
ರೋಚಕ ಹಂತದಲ್ಲಿ ಅಮೃತಧಾರೆ

​ಅಮೃತಧಾರೆ ಸೀರಿಯಲ್​ (Amruthadhaare serial) ಇದೀಗ ರೋಚಕ ಹಂತ ತಲುಪಿದೆ. ಮಕ್ಕಳಾಗದ ಮಹಿಮಾ ದಂಪತಿಗೆ ಮಿಂಚುವನ್ನು ನೀಡುವಂತೆ ಭೂಮಿಕಾ ಅಮ್ಮ ಸಲಹೆ ಕೊಟ್ಟಾಗಿದೆ. ಆದರೆ, ಮಿಂಚು ತಮ್ಮ ಹೆತ್ತ ಪುತ್ರಿ ಎಂದು ಅರಿವೇ ಇರದಿದ್ದರೂ, ಆಕೆಯನ್ನು ಹೇಗೆ ಕೊಟ್ಟಾರು ಭೂಮಿಕಾ ಮತ್ತು ಗೌತಮ್​?

25
ಜ್ಯೋತಿಷಿ ಮಾತು

ಇದರ ನಡುವೆಯೇ, ಮಹಿಮಾಳನ್ನು ಸಮಾಧಾನ ಮಾಡಲು ಮಗು ಬೇಕೇ ಬೇಕು. ಅದೇ ಇನ್ನೊಂದೆಡೆ ಭೂಮಿಕಾಗೆ ಇನ್ನೊಂದು ಹೆಣ್ಣುಮಗು ಹುಟ್ಟತ್ತೆ, ಅದರಿಂದ ಗೌತಮ್​ ಪ್ರಾಣಕ್ಕೆ ಕಂಟಕ ಇದೆ ಎನ್ನುವ ಮಾತನ್ನು ಜ್ಯೋತಿಷಿಗಳು ಹೇಳಿದ್ದು, ಸೀರಿಯಲ್​ ಜ್ಯೋತಿಷಿಗಳ ಮಾತು ನಿಜವಾಗಲೇಬೇಕಿದೆ.

35
ಭೂಮಿಕಾಗೆ ಮಗು

ಇವನ್ನೆಲ್ಲಾ ನೋಡಿದ್ರೆ ಮಹಿಮಾಗೆ ಕೊಡುವ ಸಲುವಾಗಿ ಭೂಮಿಕಾ-ಗೌತಮ್​ ಮತ್ತೊಂದು ಮಗುವನ್ನು ಮಾಡಿಕೊಳ್ತಾರಾ ಎನ್ನುವ ಪ್ರಶ್ನೆ ಕಾಡುತ್ತಿದೆ.

45
ಶ್ರೀರಸ್ತು ಶುಭಮಸ್ತು ಸೀರಿಯಲ್​ ರಿಪೀಟ್​

ಹಾಗೆ ಆದಲ್ಲಿ ಶ್ರೀರಸ್ತು ಶುಭಮಸ್ತು ಸೀರಿಯಲ್​ ರಿಪೀಟ್​ ಆಗೋ ಸಾಧ್ಯತೆ ಇದೆ. ಏಕೆಂದರೆ, ಅಲ್ಲಿ ಕೂಡ ತುಳಸಿ ಮಗುವಾಗದ ತನ್ನ ಸೊಸೆ ಪೂರ್ಣಿಗಾಗಿ ಮಗುವನ್ನು ಹೆತ್ತು ಕೊಟ್ಟಿದ್ದಳು. ಅದೇ ರೀತಿ ಮಹಿಮಾಗಾಗಿ ಭೂಮಿಕಾ ಮಗು ಹೆರುತ್ತಾಳಾ ಎನ್ನುವುದು ಸದ್ಯಕ್ಕೆ ಇರುವ ಸಂದೇಹ.

55
ಅವಳೇ ವಿಲನ್​?

ಒಂದು ವೇಳೆ ಹೀಗಾದರೆ ಅದೇ ಮಗು, ತನ್ನನ್ನು ಬೇರೆಯವರಿಗೆ ಕೊಟ್ಟ ಕಾರಣ ಸಿಟ್ಟಾಗಿ ಅಪ್ಪ-ಅಮ್ಮನ ಮೇಲೆ ದ್ವೇಷ ಸಾಧಿಸ್ತಾಳಾ ಅಥವಾ ಆಕೆ ಜೈದೇವನ ಕೈಗೆ ಸಿಕ್ಕು ಆತ ಬ್ರೈನ್​ವಾಷ್​ ಮಾಡ್ತಾನಾ ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories