‌ಇಂಟರ್‌ನ್ಯಾಶನಲ್‌ ಕ್ರಿಕೆಟರ್‌ನನ್ನು ಮದುವೆಯಾಗಿರೋ 'ಹಳ್ಳಿಮೇಷ್ಟ್ರು' ಸಿನಿಮಾ ಹೀರೋಯಿನ್ ಬಿಂದಿಯಾ! ಯಾರದು?

Published : May 27, 2026, 11:45 AM IST

Actress Bindiya: ವಿ ರವಿಚಂದ್ರನ್‌ ಅವರ ‘ಹಳ್ಳಿ ಮೇಷ್ಟ್ರು’ ಸಿನಿಮಾ ರಿಲೀಸ್‌ ಆಗಿ 30 ವರ್ಷಗಳ ಮೇಲಾದರೂ ಕೂಡ ಈ ಚಿತ್ರ ಇಂದಿಗೂ ಜನರ ಮನಸ್ಸಿನಲ್ಲಿ ಉಳಿದುಕೊಂಡಿದೆ. ಈಗ ಈ ಸಿನಿಮಾ ನಾಯಕಿ ಬಿಂದಿಯಾ ಅವರು ನಿರ್ದೇಶಕ ರಘುರಾಮ್ ಅವರ ಯುಟ್ಯೂಬ್‌ ಚಾನೆಲ್‌ ಜೊತೆ ಮಾತನಾಡಿದ್ದಾರೆ. 

PREV
15
ಮುಸ್ಲಿಂ ಫ್ಯಾಮಿಲಿಯಲ್ಲಿ ಬೆಳೆದರು!

ಮುಂಬೈನಲ್ಲಿ ಹುಟ್ಟಿ ಬೆಳೆದಿದ್ದಾನೆ. ನನ್ನ ತಂದೆ ಬಿಲ್ಡಿಂಗ್‌ ಕನ್‌ಸ್ಟ್ರಕ್ಷನ್ಸ್‌ ಮಾಡುತ್ತಿದ್ದರು. ಈಗ ತಂದೆ-ತಾಯಿ ಇಬ್ಬರೂ ಇಲ್ಲ. ನಾನು ಮುಸ್ಲಿಂ ಫ್ಯಾಮಿಲಿಯಲ್ಲಿ ಹುಟ್ಟಿ ಬೆಳೆದೆ. ಫರೀನಾ ನನ್ನ ಹೆಸರು ಎಂದು ಅವರು ಹೇಳಿದ್ದಾರೆ.

25
36 ಸಿನಿಮಾಗಳಲ್ಲಿ ನಟನೆ

ನನ್ನ ತಾಯಿ‌ ಸ್ನೇಹಿತೆ ರೀನಾ ರಾಯ್ ಕೂಡ ನಟಿ. ಇವರಿಂದ ನನಗೆ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿತು. ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಟ್ಟಾರೆಯಾಗಿ 36 ಸಿನಿಮಾಗಳಲ್ಲಿ ನಟಿಸಿದ್ದೇನೆ ಎಂದು ಬಿಂದಿಯಾ ಹೇಳಿದ್ದಾರೆ.

35
ಲವ್‌ ಮ್ಯಾರೇಜ್‌ ಆದರು!

ನನಗೆ ಮದುವೆಯಾಗಿ ಸೆಟಲ್‌ ಆಗಬೇಕಿತ್ತು. ನನ್ನ ಜೀವನದಲ್ಲಿ ಎಲ್ಲವೂ ಆರ್ಗಾನಿಕ್‌ ಆಯ್ತು. ತನ್ನಿಂದ ತಾನೇ ನನಗೆ ಸಿನಿಮಾ ಅವಕಾಶ ಸಿಕ್ಕಿತು, ಒಂದು ಹುಡುಗನನ್ನು ನೋಡಿ ಲವ್‌ ಆಯ್ತು, ಮದುವೆ ಕೂಡ ಆಯ್ತು ಎಂದು ಬಿಂದಿಯಾ ಹೇಳಿದ್ದಾರೆ.

45
ಹಳ್ಳಿಮೇಷ್ಟ್ರು ಸಿನಿಮಾ ನಾಯಕಿ!

ನನಗೆ ರವಿಚಂದ್ರನ್‌ ಯಾರು ಎಂದು ಗೊತ್ತಿರಲಿಲ್ಲ, ಅವರ ಕುಟುಂಬದ ಬಗ್ಗೆ ಕೂಡ ಗೊತ್ತಿರಲಿಲ್ಲ. ರವಿಚಂದ್ರನ್‌ ಅವರು ಮುಂಬೈನಲ್ಲಿ ಹೀರೋಯಿನ್‌ ಹುಡುಕುತ್ತಿದ್ದರು. ಆಗ ಕಾಫಿ ಶಾಪ್‌ನಲ್ಲಿ ಅವರು ನನ್ನ ಮೀಟ್‌ ಮಾಡಿ, ಮೇಕಪ್‌ ಇಲ್ಲದೆ ನನಗೆ ನಟಿಸುವ ಹುಡುಗಿ ಬೇಕು ಎಂದರು. ನನ್ನ ಹಿಂದಿ ಸಿನಿಮಾ ನೋಡಿ ಅವರು ಆಯ್ಕೆ ಮಾಡಿದ್ದರು ಎಂದು ಬಿಂದಿಯಾ ಹೇಳಿದ್ದಾರೆ.

55
ಗಂಡ ಯಾರು?

ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಆಡುತ್ತಿದ್ದ ಮನೋಜ್ ಪ್ರಭಾಕರ್‌ ಅವರನ್ನೇ ಬಿಂದಿಯಾ ಮದುವೆಯಾಗಿದ್ದಾರೆ. ಆಲ್‌ ರೌಂಡರ್‌ ಆಗಿದ್ದ ಮನೋಜ್‌ ಈಗ ನಿವೃತ್ತಿ ಪಡೆದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories