ಒಂದಲ್ಲ, ಎರಡಲ್ಲ, ಆರು ಮದುವೆಯಲ್ಲಿ ನಿರಾಸೆ ಕಂಡ ನಟಿ; ಏಳನೇ ಬಾರಿಗೆ ಸವತಿ ಜೊತೆ ಅಡ್ಜಸ್ಟ್

Published : May 12, 2026, 02:20 PM IST

ಅಪಘಾತದ ನಂತರ ಸಿನಿಮಾ ಅವಕಾಶ ಕಳೆದುಕೊಂಡು, ಆರು ಬಾರಿ ಮದುವೆ ಮುರಿದುಬಿದ್ದ ನಂತರ, ಏಳನೇ ಬಾರಿಗೆ ಉದ್ಯಮಿಯೊಬ್ಬರನ್ನು ಮದುವೆಯಾಗಿ ಅವರ ಮೊದಲ ಪತ್ನಿಯೊಂದಿಗೆ (ಸವತಿ) ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

PREV
16
ಆರು ಮದುವೆಗಳಲ್ಲಿ ನಿರಾಸೆ

ಸಿನಿಮಾ ಇಂಡಸ್ಟ್ರಿಯಲ್ಲಿರುವ ಕಲಾವಿದರು ಅಪಾರ ಅಭಿಮಾನಿಗಳನ್ನು ಹೊಂದಿರುತ್ತಾರೆ. ತಮ್ಮ ನೆಚ್ಚಿನ ಸ್ಟಾರ್‌ಗಳ ವೈಯಕ್ತಿಕ ಜೀವನದಲ್ಲಿ ಏನಾಗ್ತಿದೆ ಎಂದು ತಿಳಿದುಕೊಳ್ಳಲು ಅಭಿಮಾನಿಗಳು ಕಾತುರರಾಗಿರುತ್ತಾರೆ. ಹಾಗೆಯೇ ಕೆಲವರ ಜೀವನವಂತೂ ವಿವಾದಗಳಿಂದಲೇ ತುಂಬಿರುತ್ತದೆ. ಇಂದು ನಾವು ಹೇಳುತ್ತಿರುವ ನಟಿ ತಮ್ಮ ಆರು ಮದುವೆಗಳಲ್ಲಿ ನಿರಾಸೆಯನ್ನು ಕಂಡಿದ್ದಾರೆ. ಅಂತಿಮವಾಗಿ ಏಳನೇ ಮದುವೆಯಾಗಿ ಸವತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.

26
ರಾಮ್ ಲಖನ್ ಸಿನಿಮಾ ನಟಿ

ಇಂದು ನಾವು ಹೇಳುತ್ತಿರುವ ನಟಿ ತಮ್ಮ ಸಿನಿ ಜೀವನವನ್ನು ಅನಿಲ್ ಕಪೂರ್ ಮತ್ತು ಮಾಧುರಿ ದೀಕ್ಷಿತ್ ನಟನೆಯ 'ರಾಮ್ ಲಖನ್' ಸಿನಿಮಾ ಮೂಲಕ ಆರಂಭಿಸಿದ್ದರು. ಈ ಚಿತ್ರದಲ್ಲಿ ಸಪೋರ್ಟಿಂಗ್ ನಟಿಯಾಗಿ ಕಾಣಿಸಿಕೊಂಡಿದ್ದರು. ಮುಂದೆ ಸ್ಕ್ರೀನ್ ಮೇಲೆ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಹಲ್‌ಚಲ್ ಸೃಷ್ಟಿಸಿದ್ದರು. ಈ ಪಾತ್ರಗಳಿಂದ ಸಿನಿ ಅಂಗಳದಲ್ಲಿ ಮುನ್ನಲೆಗೆ ಬಂದರು.

36
ಸೋನಿಕಾ ಗಿಲ್

ನಾವು ಹೇಳುತ್ತಿರುವ ನಟಿಯ ಹೆಸರು ಸೋನಿಕಾ ಗಿಲ್. ಸುಂದರವಾದ ಕಣ್ಣುಗಳು, ಆಕರ್ಷಕ ಮೈಮಾಟದಿಂದ ಸಿನಿಲೋಕದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದರು. ರಾಮ್ ಲಖನ್ ಬಳಿಕ ರಾತ್ ಕೇ ಗುನಾ, ತೂ ನಾಗಿನ್ ಮೈ ಸಪೆರಾ, ಲಾಶ್, ಕಚ್ಚಿ ಕಲಿ, ಕೌನ್ ಕರೇ ಕುರ್ಬಾನ್, ಘರ್ ಹೋ ತೋ ಐಸಾ, ತಿರಂಗಾ ಸೇರಿದಂತೆ ಹಲವು ಬಾಲಿವುಡ್ ಸಿನಿಮಾಗಳಲ್ಲಿ ಸೋನಿಕಾ ಗಿಲ್ ನಟಿಸಿದ್ದಾರೆ.

46
ಅಪಘಾತದ ಬಳಿಕ ಜೀವನದಲ್ಲಿ ಬದಲಾವಣೆ

ಸೋನಿಕಾ ಗಿಲ್ ಖಾಸಗಿ ಬದುಕು ಚರ್ಚೆಯ ವಿಷಯವಾಗಿತ್ತು. ಹಲವು ಸವಾಲುಗಳನ್ನು ಎದುರಿಸಿದ ಸೋನಿಕಾ ಗಿಲ್, ಜೀವನದಲ್ಲಿ ನಡೆದ ಅಪಘಾತವೊಂದು ಅವರ ಬದುಕಿನ ಮಾರ್ಗವನ್ನೇ ಬದಲಿಸಿತು. ಈ ಅಪಘಾತದ ಬಳಿಕ ಸಿನಿಮಾ ಅವಕಾಶಗಳು ಕಡಿಮೆಯಾದವು. ಸಂಜಯ್ ದತ್ ನಟನೆ 'ಖಳನಾಯಕ್' ಸಿನಿಮಾ ಸಹ ಕೈಯಿಂದ ಜಾರಿತು. ಅಪಘಾತದ ಬಳಿಕ ನಟಿ ಸೋನಿಕಾ ಗಿಲ್ ಭಾರತ ತೊರೆದು ವಿದೇಶ ಸೇರಿಕೊಂಡರು.

56
ಏಳನೇ ಬಾರಿಗೆ ಮದುವೆ ಫಿಕ್ಸ್

ದುಬೈನಲ್ಲಿ ನೆಲೆಸಿದ ಬಳಿಕ ಮದುವೆಯತ್ತ ಮುಖ ಮಾಡಿದ ಸೋನಿಕಾ ಗಿಲ್ ಅಲ್ಲಿಯೂ ಹಲವು ಸಮಸ್ಯೆಗಳನ್ನು ಎದುರಿಸಿದರು. ಒಂದಲ್ಲ, ಎರಡಲ್ಲ ಬರೋಬ್ಬರಿ ಆರು ಮದುವೆಗಳು ಮುರಿದಿವೆ. ಏಳನೇ ಬಾರಿ ಮದುವೆಯಾದಾಗ ಸವತಿ ಜೊತೆ ಸೋನಿಕಾ ಗಿಲ್ ಹೊಂದಾಣಿಕೆ ಮಾಡಿಕೊಳ್ಳಬೇಕಾಯ್ತು. ಹೌದು, ಆರು ಬಾರಿ ಮದುವೆ ಫಿಕ್ಸ್ ಆದಾಗಲೂ ಕಾರಣಂತರಗಳಿಂದ ಮಂಟಪದವರೆಗೆ ಬರದೇ ಮುರಿದವು.

66
ನಮ್ಮದು ಒಂದೇ ಕುಟುಂಬ

ಮದುವೆಗಳು ಪದೇ ಪದೇ ಕ್ಯಾನ್ಸಲ್ ಆದ ಕಾರಣ ಸೋನಿಕಾ ಗಿಲ್ ವಿಶೇಷ ಪೂಜೆ ಸಲ್ಲಿಸಿದ್ದರು. ಸಂದರ್ಶನದಲ್ಲಿ ಮಾತನಾಡಿರುವ ಸೋನಿಕಾ ಗಿಲ್, ಅರ್ಚಕರ ಸಲಹೆ ಮೇರೆಗೆ ಏಳನೇ ಮದುವೆಗೂ ಮುನ್ನ ಪೂಜೆ ಮಾಡಿಸಲಾಯ್ತು. ಇದಾದ ಬಳಿಕ ಮಿತೇಶ್ ರೂಗನಿ ಅವರೊಂದಿಗೆ ನನ್ನ ಮದುವೆಯಾಯ್ತು ಎಂದು ಹೇಳಿಕೊಂಡಿದ್ದಾರೆ. ಮಿತೇಶ್ ರೂಗನಿ ಓರ್ವ ದೊಡ್ಡ ಉದ್ಯಮಿಯಾಗಿದ್ದಾರೆ.

ಸೋನಿಕಾ ಗಿಲ್ ಅವರನ್ನು ಮದುವೆಯಾಗುವಂತೆ ಮಿತೇಶ್ ರೂಗನಿ ವಿವಾಹಿತರಾಗಿದ್ದರು. ಸಂದರ್ಶನದಲ್ಲಿ ತಮಗೆ ಓರ್ವ ಮಗಳಿದ್ದು, ಗಂಡನ ಮೊದಲ ಪತ್ನಿ ಜೊತೆ ಚೆನ್ನಾಗಿದ್ದು, ಒಂದೇ ಕುಟುಂಬದಂತಿದ್ದೇವೆ ಎಂದು ಹೇಳಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories