ಕಟೀಲು ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ Kangana Ranaut… ಹಳೆ ಫೋಟೊ ಈಗ ವೈರಲ್

Published : May 12, 2026, 12:07 PM IST

Kangana Ranaut: ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್, ಮಂಗಳೂರಿನಲ್ಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಗೆ ಭೇಟಿ ನೀಡಿ, ದೇವಿ ದರ್ಶನ ಪಡೆದಿರುವ ಹಳೆಯ ಫೋಟೊಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. 

PREV
16
ಕಂಗನಾ ರಣಾವತ್

ಕರಾವಳಿಯಲ್ಲಿರುವ ದೇಗುಲಗಳು ಇತಿಹಾಸ ಪ್ರಸಿದ್ಧ ಹಾಗೂ ಕಾರಣಿಕ ಸ್ಥಳಗಳಾಗಿದ್ದು, ಇಲ್ಲಿಗೆ ದೇಶದ ಮೂಲೆ ಮೂಲೆಯಿಂದ ಸೆಲೆಬ್ರಿಟಿಗಳು, ಉದ್ಯಮಿಗಳು ಸೇರಿ, ಭಕ್ತರು ಬಂದು ದರ್ಶನ ಪಡೆಯುತ್ತಿರುತ್ತಾರೆ. ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಕೂಡ ಕಟೀಲು ದುರ್ಗಾಪರಮೇಶ್ವರಿ ಸನ್ನಿಧಿಗೆ ಭೇಟಿ ನೀಡಿ, ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ದರು.

26
ಹಳೆ ಫೋಟೊ ಈಗ ವೈರಲ್

ಕಂಗನಾ ರಣಾವತ್ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕಾರಣಿಕ ಸ್ಥಳವಾದ ತುಳುನಾಡಿಗೆ ಅಚಲ ನಂಬಿಕೆಯ ಸ್ಥಳವಾದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಕಳೆದ ವರ್ಷದ ಫೋಟೊಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗುತ್ತಿವೆ. ನಟಿಯ ಭಕ್ತಿ, ಶ್ರದ್ಧೆಯನ್ನು ನೋಡಿ ಜನ ಮೆಚ್ಚಿಕೊಂಡಿದ್ದಾರೆ.

36
ಜರಿ ಸೀರೆ, ಮಂಗಳೂರು ಮಲ್ಲಿಗೆ ಮುಡಿಗೆ ಬಾಲಿವುಡ್ ಕ್ವೀನ್

ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಪಿಂಕ್ ಬಣ್ಣದ ರೇಷ್ಮೆ ಸೀರೆಯುಟ್ಟು, ಮುಡಿ ತುಂಬಾ ಮಂಗಳೂರು ಮಲ್ಲಿಗೆ ಮುಡಿದು,ಹಣೆಯ ಮೇಲೆ ಕುಂಕುಮ ಧರಿಸಿ, ಸಾಂಪ್ರದಾಯಿಕ ಉಡುಗೊರೆ ತೊಟ್ಟು, ದೇವಿಯ ಪೂಜೆ ಮಾಡಿ, ದೇಗುಲದಲ್ಲಿ ಧ್ಯಾನ ಮಾಡುತ್ತಿರುವ ಫೋಟೊಗಳು ವೈರಲ್ ಆಗುತ್ತಿದೆ. ನಟಿ ಸಾಂಪ್ರದಾಯಿಕ ಉಡುಗೆ, ತೊಡುಗೆ ಇದೀಗ ಗಮನ ಸೆಳೆಯುತ್ತಿದೆ.

46
ಕಾಪು ಮಾರಿಗುಡಿಗೂ ಭೇಟಿ ನೀಡಿದ್ದರು

ಕಳೆದ ವರ್ಷ ಕರಾವಳಿ ಜಿಲ್ಲೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ನಟಿ ಕಂಗನಾ ರಣಾವತ್ ಅವರು ಕಾಪು ಮಾರಿಗುಡಿಗೂ ಭೇಟಿ ನೀಡಿ ದರ್ಶನ ಪಡೆದಿದ್ದರ್. ತಾಯಿಯ ದರ್ಶನ ಪಡೆದಿದ್ದೇನೆ, ಬಹಳ ವರ್ಷಗಳಿಂದ ಈ ಭಾಗಕ್ಕೆ ಬರಬೇಕೆಂಬ ಆಸೆ ಇತ್ತು. ತಾಯಿಯು ಈಗ ತನ್ನ ಆಶೀರ್ವಾದ ನೀಡಲು ಕರೆಸಿಕೊಂಡಿದ್ದಾಳೆ ಎಂದು ಸಂಭ್ರಮದಿಂದ ಹೇಳಿಕೊಂಡಿದ್ದರು ಕಂಗನಾ.

56
ಸಾಕ್ಷಾತ್ ದೇವಿಯಂತೆ ಕಾಣಿಸುತ್ತಿದ್ದಾರೆ ಎಂದ ಜನ

ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹಳೆಯ ಫೊಟೊಗಳು ವೈರಲ್ ಆಗುತ್ತಿದ್ದಂತೆ, ಜನ ಮತ್ತೆ ಕಂಗನಾ ಭಕ್ತಿ ಮತ್ತು ಅಂದಕ್ಕೆ ಮನಸೋತಿದ್ದಾರೆ. ಸೀರೆಯುಟ್ಟು, ಹೂವು ಮುಡಿದು, ಹಣೆಯಲ್ಲಿ ಕುಂಕುಮ ಧರಿಸಿರುವ ಕಂಗನಾರನ್ನ ನೋಡಿದರೆ, ಸಾಕ್ಷಾತ್ ದೇವಿಯ ದರ್ಶನ ಪಡೆದ ಹಾಗೆ ಕಾಣಿಸುತ್ತಿದೆ ಎಂದಿದ್ದಾರೆ ಫ್ಯಾನ್ಸ್.

66
ಬಿಡುಗಡೆಯಾಗಲಿರುವ ಸಿನಿಮಾಗಳು

ಕಂಗನಾ ರಣಾವತ್ ಸಿನಿಮಾದೊಂದಿಗೆ ರಾಜಕೀಯದಲ್ಲೂ ಕೂಡ ಬ್ಯುಸಿಯಾಗಿದ್ದಾರೆ. ನಟಿ ಅಭಿನಯಿಸಿರುವ ಭಾರತ ಭಾಗ್ಯವಿದಾತ ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗಲಿದೆ. ಇನ್ನು ಸರ್ಕಲ್ ಮತ್ತು ಕ್ವೀನ್ 2 ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಒಟ್ಟಲ್ಲಿ ಈ ವರ್ಷ ನಟಿ ಮೂರು ಮೂರು ಸಿನಿಮಾಗಳನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳುವ ಸಾಧ್ಯತೆ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories