ಹೋಟೆಲ್, ಟಿಕೆಟ್‌ಗೂ ಚೌಕಾಸಿ ಮಾಡ್ತಾರೆ, ಅಲ್ಲಿ ಗೌರವ ಸಿಗಲ್ಲ: ಬಾಲಿವುಡ್ ಅನುಭವ ಬಿಚ್ಚಿಟ್ಟ ನಟಿ ಸಿಮ್ರಾನ್!

Published : May 09, 2026, 07:28 PM IST

ದಕ್ಷಿಣ ಭಾರತದ ಚಿತ್ರರಂಗವನ್ನು ಆಳಿದ ನಟಿ ಸಿಮ್ರಾನ್, ಪ್ರೇಕ್ಷಕರ ಹಾಟ್ ಫೇವರಿಟ್. ಬಾಲಿವುಡ್ ಮೂಲಕವೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೂ, ಸಿಮ್ರಾನ್ ಹೆಚ್ಚು ಸಕ್ರಿಯರಾಗಿದ್ದು ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ.

PREV
15
ಚೌಕಾಸಿ ಮಾಡುತ್ತಾರೆ

ಬಾಲಿವುಡ್‌ನಲ್ಲಿ ದಕ್ಷಿಣ ಭಾರತದ ನಟರಿಗೆ ಸರಿಯಾದ ಗೌರವ ಸಿಗುವುದಿಲ್ಲ. ಹೋಟೆಲ್, ಟಿಕೆಟ್ ವಿಚಾರದಲ್ಲೂ ಚೌಕಾಸಿ ಮಾಡುತ್ತಾರೆ. ನನ್ನ ಸ್ಟಾಫ್ ಸಂಖ್ಯೆಗೂ ಮಿತಿ ಹೇರಿದ್ದರು. ಇದರಿಂದ ಬೇಸತ್ತು ಹಿಂದಿ ಸಿನಿಮಾಗಳಿಂದ ದೂರ ಉಳಿದೆ ಎಂದು ನಟಿ ಸಿಮ್ರಾನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

25
ಪ್ರೇಕ್ಷಕರ ಹಾಟ್ ಫೇವರಿಟ್

ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರರಂಗವನ್ನು ಆಳಿದ ನಟಿ ಸಿಮ್ರಾನ್, ಪ್ರೇಕ್ಷಕರ ಹಾಟ್ ಫೇವರಿಟ್. ಬಾಲಿವುಡ್ ಮೂಲಕವೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೂ, ಸಿಮ್ರಾನ್ ಹೆಚ್ಚು ಸಕ್ರಿಯರಾಗಿದ್ದು ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ. ಆದರೆ, ತಾನು ಬಾಲಿವುಡ್‌ನಲ್ಲಿ ಹೆಚ್ಚು ಸಿನಿಮಾ ಯಾಕೆ ಮಾಡಲಿಲ್ಲ ಎನ್ನುವ ಕಾರಣವನ್ನು ಸಿಮ್ರಾನ್ ಈಗ ಬಹಿರಂಗಪಡಿಸಿದ್ದಾರೆ.

35
ಗೌರವ ಸಿಗಲಿಲ್ಲ

ಬಾಲಿವುಡ್‌ನಲ್ಲಿ ತಮಗೆ ಸರಿಯಾದ ಗೌರವ ಸಿಗಲಿಲ್ಲ ಎಂದು ಸಿಮ್ರಾನ್ ನೇರವಾಗಿ ಹೇಳಿದ್ದಾರೆ. ಹೋಟೆಲ್ ಮತ್ತು ಫ್ಲೈಟ್ ಟಿಕೆಟ್‌ಗಳ ವಿಚಾರದಲ್ಲೂ ನಿರ್ಮಾಪಕರು ಚೌಕಾಸಿ ಮಾಡುತ್ತಿದ್ದರು. ಅಲ್ಲಿ ದೊಡ್ಡವರು-ಸಣ್ಣವರೆಂಬ ತಾರತಮ್ಯವಿದೆ ಎಂದು 'ಫಿಲ್ಮ್‌ಫೇರ್'ಗೆ ನೀಡಿದ ಸಂದರ್ಶನದಲ್ಲಿ ಸಿಮ್ರಾನ್ ತಮ್ಮ ಬೇಸರ ಹೊರಹಾಕಿದ್ದಾರೆ.

45
ತುಂಬಾ ನೋವಾಗುತ್ತೆ

ನನಗೆ ಅಲ್ಲಿ ತುಂಬಾ ಕೆಟ್ಟ ಅನುಭವಗಳಾಗಿವೆ. ಹಿಂದಿ ಸಿನಿಮಾ ಮಾಡಲು ನನಗೆ ಮನಸ್ಸಿರಲಿಲ್ಲ, ಯಾಕಂದ್ರೆ ಅವರ ಜೊತೆ ಹೊಂದಿಕೊಳ್ಳಲು ನನಗೆ ಆಗಲಿಲ್ಲ. ನಾವು ಬಾಲಿವುಡ್‌ಗೆ ಬರುವ ಮುನ್ನ ದಕ್ಷಿಣದಲ್ಲಿ ಮಾಡಿದ ಕೆಲಸವನ್ನು ಅವರು ನೋಡಿರುವುದೇ ಇಲ್ಲ. ನಮ್ಮ ಹಿನ್ನೆಲೆ ಏನು, ನಮ್ಮ ಸಾಧನೆ ಏನು ಅಂತ ಅವರಿಗೆ ಗೊತ್ತೇ ಇರಲ್ಲ. ಈ ವಿಚಾರ ನನಗೆ ತುಂಬಾ ಕಾಡುತ್ತಿತ್ತು. ಅಲ್ಲಿ ಗೌರವ ಅನ್ನೋದೇ ಇಲ್ಲ. ನನ್ನ ಜೀವನದ ಅರ್ಧದಷ್ಟು ಸಮಯವನ್ನು ನಾನು ಚಿತ್ರರಂಗಕ್ಕೆ ಕೊಟ್ಟಿದ್ದೇನೆ. ಆದರೂ ನನಗೆ ಸಿಗಬೇಕಾದ ಗೌರವ ಸಿಗದಿದ್ದಾಗ ತುಂಬಾ ನೋವಾಗುತ್ತೆ ಎಂದು ಸಿಮ್ರಾನ್ ಹೇಳಿದ್ದಾರೆ.

55
ಕಿರಿಕಿರಿ ಉಂಟುಮಾಡಿತ್ತು

"ಅವರು ಹೋಟೆಲ್ ವಿಚಾರದಲ್ಲಿ ಚೌಕಾಸಿ ಮಾಡುತ್ತಾರೆ. ನನ್ನ ಜೊತೆ ಪ್ರಯಾಣಿಸುವ ಸಿಬ್ಬಂದಿ ಸಂಖ್ಯೆಗೆ ಮಿತಿ ಹೇರುತ್ತಾರೆ. 'ನೀವು ಇಷ್ಟು ಜನ ಸ್ಟಾಫ್ ಕರ್ಕೊಂಡು ಬರುವ ಹಾಗಿಲ್ಲ' ಅಂತ ಹೇಳುತ್ತಾರೆ. ಹೋಟೆಲ್, ಟಿಕೆಟ್ ಎಲ್ಲದಕ್ಕೂ ಚೌಕಾಸಿ ಮಾಡುತ್ತಾರೆ. ಇದೆಲ್ಲಾ ನನಗೆ ಕಿರಿಕಿರಿ ಉಂಟುಮಾಡಿತ್ತು. ಆದರೆ ಇದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಅಲ್ಲಿ ಒಂದು ರೀತಿ ಅಧಿಕಾರದ ಆಟ ನಡೆಯುತ್ತದೆ. ಹಾಗಾಗಿ ಕೆಲಸ ಮಾಡಲು ಮನಸ್ಸು ಬರುವುದಿಲ್ಲ, ತುಂಬಾ ನೋವಾಗುತ್ತದೆ" ಎಂದು ಸಿಮ್ರಾನ್ ತಿಳಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories