ಶೂಟಿಂಗ್ ಮೊದಲು ರಂಜನಿ 'ಡಿ ಡಿ ಢಿಕ್ಕಿ' ಅಂತ ಪರ್ಸನಲ್ ವಿಚಾರ ಕೇಳಿದ್ದರು: ನಟಿ ಮೇಘನಾ ಗಾಂವ್ಕರ್‌

Published : May 09, 2026, 06:14 PM IST

ಈ ಪಾತ್ರವನ್ನು ನಾನು ಒಪ್ಪಿಕೊಂಡ ಮೇಲೆ ಶೂಟಿಂಗ್‌ಗೂ ಮೊದಲು ರಂಜನಿ ಅವರು ಖುಷಿಯಲ್ಲಿದ್ದಾಗ ಹೇಗಿರ್ತೀನಿ, ನನ್ನ ಹತ್ರ ತುಂಬ ಪರ್ಸನಲ್‌ ವಿಚಾರಗಳನ್ನು ಕೇಳಿದ್ರು ಎಂದರು ಮೇಘನಾ ಗಾಂವ್ಕರ್‌.

PREV
15
ಪಾತ್ರದ ಘೋಷಣೆ

ರಂಜನಿ ರಾಘವನ್‌ ನಿರ್ದೇಶನದ ‘ಡಿ ಡಿ ಢಿಕ್ಕಿ’ ಸಿನಿಮಾದಲ್ಲಿ ಮೇಘನಾ ಗಾಂವ್ಕರ್‌ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಅವರು ಪ್ರಗತಿ ಕೌಂಡಿನ್ಯ ಎಂಬ ಲಾಯರ್ ಪಾತ್ರದಲ್ಲಿ ನಟಿಸಿದ್ದಾರೆ. ಮೇಘನಾ ಜನ್ಮದಿನದಂದು ಅವರ ಪಾತ್ರದ ಘೋಷಣೆಯಾಗಿದೆ.

25
ಲಾಯರ್‌ ಪಾತ್ರದಲ್ಲಿ ಮೇಘನಾ

ಈ ಪಾತ್ರದ ಕುರಿತು ನಿರ್ದೇಶಕಿ ರಂಜನಿ ರಾಘವನ್‌, ಸಿನಿಮಾದ ಪ್ರಮುಖ ಪಾತ್ರವಿದು. ಸ್ತ್ರೀವಾದಿ ಧೋರಣೆಯ ಆಧುನಿಕ ಮನೋಭಾವದ ಲಾಯರ್‌ ಪಾತ್ರದಲ್ಲಿ ಮೇಘನಾ ಕಾಣಿಸಿಕೊಂಡಿದ್ದಾರೆ. ಗಂಡ ಹೆಂಡತಿ ಇಬ್ಬರಿಗೂ ಉತ್ತಮ ದುಡಿಮೆ ಸಂಬಳ ಇದ್ದರೂ ತಮಗೆ ಮಕ್ಕಳು ಬೇಡ.

35
ಪಾತ್ರ ಪ್ರತಿನಿಧಿಸುತ್ತದೆ

ದೇಶದಲ್ಲಿ ಈಗಾಗಲೇ ಜನಸಂಖ್ಯೆ ಏರುತ್ತಿದೆ, ನಾವ್ಯಾಕೆ ಅದನ್ನು ಇನ್ನಷ್ಟು ಹೆಚ್ಚಿಸಬೇಕು ಎಂಬ ಜೆನ್‌ ಜೀಗಳ ಮನೋಭಾವವನ್ನು ಪ್ರಗತಿ ಪಾತ್ರ ಪ್ರತಿನಿಧಿಸುತ್ತದೆ. ಇದಕ್ಕೆ ಒಂದೊಳ್ಳೆ ರೂಪಾಂತರವೂ ಇದೆ. ಅದಕ್ಕೆ ಮೇಘನಾ ಸೊಗಸಾಗಿ ಜೀವತುಂಬಿದ್ದಾರೆ ಎಂದಿದ್ದಾರೆ.

45
ಪರ್ಸನಲ್‌ ವಿಚಾರಗಳನ್ನು ಕೇಳಿದ್ರು

ಈ ಬಗ್ಗೆ ಮೇಘನಾ, ಈ ಪಾತ್ರವನ್ನು ನಾನು ಒಪ್ಪಿಕೊಂಡ ಮೇಲೆ ಶೂಟಿಂಗ್‌ಗೂ ಮೊದಲು ರಂಜನಿ ಅವರು ನನ್ನ ಹತ್ರ ತುಂಬ ಪರ್ಸನಲ್‌ ವಿಚಾರಗಳನ್ನು ಕೇಳಿದ್ರು. ಮನೆಯಲ್ಲಿದ್ದಾಗ ನಾನು ಹೇಗಿರ್ತೀನಿ, ನನ್ನ ಯೋಚನೆ ಹೇಗಿರುತ್ತದೆ, ಸಿಟ್ಟು ಬಂದಾಗ ಹೇಗೆ ವರ್ತಿಸುತ್ತೇನೆ, ಖುಷಿಯಲ್ಲಿದ್ದಾಗ ಹೇಗಿರ್ತೀನಿ ಇತ್ಯಾದಿ.

55
ಒಂದೊಳ್ಳೆ ಅನುಭವ

ಶುರುವಲ್ಲಿ ಇವರು ಯಾಕೆ ಇದನ್ನೆಲ್ಲ ಕೇಳ್ತಿದ್ದಾರೆ ಅನಿಸಿತು. ಆಮೇಲೆ ಅವರು ನನ್ನ ಪಾತ್ರಕ್ಕಾಗಿ ಈ ಮಾಹಿತಿ ಕಲೆ ಹಾಕುತ್ತಿದ್ದಾರೆ ಅನ್ನೋದು ತಿಳಿಯಿತು. ಈ ಸಿನಿಮಾ ಒಂದೊಳ್ಳೆ ಅನುಭವ ನೀಡಿದೆ ಎಂದರು. ನೆನಪಿರಲಿ ಪ್ರೇಮ್‌, ಗೋಲ್ಡನ್‌ ಸ್ಟಾರ್‌ ಗಣೇಶ್‌ ಪುತ್ರ ವಿಹಾನ್‌ ನಟಿಸಿದ್ದಾರೆ. ಜಡೇಶ್‌ ಕೆ ಹಂಪಿ ನಿರ್ಮಾಪಕರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories