ಧುರಂಧರ್‌ ಅಭಿಮಾನಿಗಳಿಗೆ ಗುಡ್ ನ್ಯೂಸ್: ಮೂರನೇ ಭಾಗದ ಬಗ್ಗೆ ಸುಳಿವು ಕೊಟ್ಟ ಸಹ ನಿರ್ಮಾಪಕಿ!

Published : May 09, 2026, 06:45 PM IST

ರಣವೀರ್ ಸಿಂಗ್ ನಟನೆಯ ಧುರಂಧರ್-1 ಚಿತ್ರ ಹಿಟ್ ಆಗಿದೆ. ಧುರಂಧರ್-2 ಚಿತ್ರವೂ ಸೂಪರ್ ಡ್ಯೂಪರ್ ಹಿಟ್ ಆಗಿದೆ. ಇದೀಗ ಮುಂದಿನ ಭಾಗದ ಬಗ್ಗೆ ಸಹ ನಿರ್ಮಾಪಕಿ ಜ್ಯೋತಿ ದೇಶಪಾಂಡೆ ಸುಳಿವು ಕೊಟ್ಟಿದ್ದಾರೆ.

PREV
15
ಹಿಂಟ್ ವೈರಲ್

ಭರ್ಜರಿ ರೂ.3000 ಕೋಟಿ ಕಲೆಕ್ಷನ್‌ ಮಾಡಿರುವ ಧುರಂಧರ್‌ 1 ಹಾಗೂ ಧುರಂಧರ್‌ 2 ಸಿನಿಮಾದ ಮುಂದಿನ ಭಾಗದ ಬಗ್ಗೆ ಇದೀಗ ಸಹ ನಿರ್ಮಾಪಕಿ ಜ್ಯೋತಿ ದೇಶಪಾಂಡೆ ಸುಳಿವು ಕೊಟ್ಟಿದ್ದಾರೆ.

25
ತಯಾರಿ ನಡೆಯುತ್ತಿದೆ

ಸಂದರ್ಶನವೊಂದರಲ್ಲಿ ಅವರು, ‘ಈ ವಷಾಂತ್ಯದ ಹೊತ್ತಿಗೆ ಸರ್ಪ್ರೈಸ್ ಕೊಡ್ತೀವಿ, ಇನ್ನೂ ಕೆಲಸ ಶುರು ಆಗಿಲ್ಲ. ಸದ್ಯಕ್ಕೆ ತಯಾರಿ ನಡೆಯುತ್ತಿದೆ’ ಎಂದಿದ್ದಾರೆ. ‘ಧುರಂಧರ್‌’ ಸಿನಿಮಾದ ಮೂರನೇ ಭಾಗ ಬರುವ ಸುದ್ದಿಗೆ ಈ ಮಾತು ಪುಷ್ಠಿ ನೀಡಿದೆ.

35
ಮನಸ್ಸು ಬದಲಿಸಿರುವ ಸಾಧ್ಯತೆ

ಆದರೆ ಈ ಹಿಂದೆ ನಿರ್ದೇಶಕ ಆದಿತ್ಯ ಧರ್‌ ಸೇರಿದಂತೆ ಚಿತ್ರತಂಡದವರು ಮೂರನೇ ಭಾಗ ಬರುವುದಿಲ್ಲ ಎಂದು ಹೇಳಿದ್ದರು. ಆದರೆ ಇದೀಗ ಅಭಿಮಾನಿಗಳು ‘ಧುರಂಧರ್‌ 3’ಗೆ ಪಟ್ಟು ಹಿಡಿದಿರುವ ಕಾರಣ ಅವರು ಮನಸ್ಸು ಬದಲಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.

45
ಡಾಕ್ಯುಮೆಂಟರಿ ಮಾಡಲು ಯೋಜನೆ

ಇನ್ನೊಂದೆಡೆ ‘ಧುರಂಧರ್‌ 1 ಹಾಗೂ 2’ ಸಿನಿಮಾ ಮೇಕಿಂಗ್‌ ಅನ್ನು ಇಟ್ಟುಕೊಂಡು ನಿರ್ದೇಶಕ ಆದಿತ್ಯ ಧರ್‌ ಡಾಕ್ಯುಮೆಂಟರಿ ಮಾಡಲು ಯೋಜಿಸಿದ್ದು, ಅದನ್ನು ಥೇಟರಿಗೆ ರಿಲೀಸ್‌ ಮಾಡುವ ಬಗ್ಗೆಯೂ ಮಾತು ಹೇಳಿಬಂದಿದೆ.

55
ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮ

ಈ ಹೇಳಿಕೆಯ ಬೆನ್ನಲ್ಲೇ ರಣವೀರ್ ಸಿಂಗ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸುತ್ತಿದ್ದಾರೆ. ‘ಧುರಂಧರ್ 3’ ಶೀಘ್ರದಲ್ಲೇ ಸೆಟ್ಟೇರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories