ಬಾಲಿವುಡ್‌ನ ಖ್ಯಾತ ನಟನೊಬ್ಬನ ಬಾಲ್ಯದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸ್ಟಾರ್ ಕುಟುಂಬದ ಹಿನ್ನೆಲೆ ಹೊಂದಿರುವ ಈ ನಟ, ತಮ್ಮ 19 ವರ್ಷದ ಸಿನಿ ಪಯಣದಲ್ಲಿ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ.
ಬಾಲಿವುಡ್ ಅಂಗಳದ ಸೂಪರ್ ಸ್ಟಾರ್ ನಟನ ಬಾಲ್ಯದ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 44 ವರ್ಷದ ಈ ನಟ ತಮ್ಮ 19 ವರ್ಷದ ಸಿನಿ ಕೆರಿಯರ್‌ನಲ್ಲಿ 3 ಬ್ಲಾಕ್‌ಬಸ್ಟರ್, 6 ಸೂಪರ್ ಹಿಟ್ ಮತ್ತು 3 ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
25
ಸ್ಟಾರ್ ಕುಟುಂಬದಿಂದ ಬಂದಿರೋ ನಟ
ಬಾಲಿವುಡ್ ಸಿನಿಮಾ ಉದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಈ ನಟನ ತಂದೆ-ತಾಯಿ ಮತ್ತು ಪತ್ನಿ ಸಹ ಸ್ಟಾರ್ ಕಲಾವಿದರು. ಸದ್ಯ ದೇಶದ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾದಲ್ಲಿ ನಟ ನಟಿಸುತ್ತಿದ್ದಾರೆ. ಹಾಗಾದ್ರೆ ಯಾರು ಈ ನಟ ಎಂದು ನೋಡೋಣ ಬನ್ನಿ.
35
ಯಾರು ಈ ನಟ?
ಇಂದು ರಣ್‌ಬೀರ್ ಕಪೂರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆ ಅಭಿಮಾನಿಗಳು ರಣ್‌ಬೀರ್ ಕಪೂರ್ ಅವರ ಬಾಲ್ಯದ ಫೋಟೋವೊಂದನ್ನು ವೈರಲ್ ಮಾಡುತ್ತಿದ್ದಾರೆ. ಎನಿಮಲ್, ಬರ್ಫಿ, ಸಂಜು, ಯೇ ಜವಾನಿ ಹೇ ದಿವಾನಿ, ಬ್ರಹ್ಮಾಸ್ತ್ರ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸದ್ಯ ಬಾಲಿವುಡ್ ಟಾಪ್ ಹೀರೋಗಳ ಪಟ್ಟಿಯಲ್ಲಿ ರಣ್‌ಬೀರ್ ಕಪೂರ್ ಸಹ ಒಬ್ಬರಾಗಿದ್ದಾರೆ.
28ನೇ ಸೆಪ್ಟೆಂಬರ್ 1982ರಂದು ಜನಿಸಿರುವ ರಣ್‌ಬೀರ್ ಕಪೂರ್ ಅವರು ರಿಷಿ ಕಪೂರ್ ಮತ್ತು ನೀತಾ ಕಪೂರ್ ದಂಪತಿಯ ಮಗ. ತಮ್ಮ ಕುಟುಂಬದ ನಟನಾ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹಿಂದಿ ಸಿನಿಲೋಕದ ದಂತಕಥೆ ನಟ, ನಿರ್ದೇಶಕ ರಾಜ್ ಕಪೂರ್ ಅವರ ಮೊಮ್ಮಗನಾಗಿದ್ದಾರೆ. ರಣಬೀರ್ ಸ್ಕೂಲ್ ಆಫ್ ವಿಷುಯಲ್ ಆರ್ಟ್ಸ್ ಮತ್ತು ಲೀ ಸ್ಟ್ರಾಸ್‌ಬರ್ಗ್ ಥಿಯೇಟರ್ ಮತ್ತು ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಮೆಥಡ್ ಆಕ್ಟಿಂಗ್ ಮತ್ತು ಫಿಲ್ಮ್ ಮೇಕಿಂಗ್ ಅನ್ನು ಅಧ್ಯಯನ ಮಾಡಿದ್ದಾರೆ.
55
ಮಡದಿ ಆಲಿಯಾ ಭಟ್
ರಣ್‌ಬೀರ್ ಕಪೂರ್ ಬಣ್ಣದ ಲೋಕಕ್ಕೆ ಕಾಲಿಡುತ್ತಲೇ ಹಲವು ನಟಿಯರ ಜೊತೆಗಿನ ಸುತ್ತಾಟದಿಂದ ಹೆಚ್ಚು ಚರ್ಚೆಯಲ್ಲಿದ್ದ ನಟ. ಆರಂಭದಲ್ಲಿ ದೀಪಿಕಾ ಪಡುಕೋಣೆ ಜೊತೆ ರಣ್‌ಬೀರ್ ಹೆಸರು ಕೇಳಿ ಬಂದಿತ್ತು. ತದನಂತರ ಕತ್ರಿನಾ ಕೈಫ್ ಸೇರಿದಂತೆ ಹಲವು ನಟಿಯರೊಂದಿಗೆ ರಣ್‌ಬೀರ್ ಕಾಣಿಸಿಕೊಂಡಿದ್ದರು. ಈ ಎಲ್ಲಾ ಗಾಸಿಪ್‌ಗಳಿಗೆ ತೆರೆ ಎಳೆದ ರಣ್‌ಬೀರ್ ಕಪೂರ್ ಗೆಳತಿ ಆಲಿಯಾ ಭಟ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಸದ್ಯ ದಂಪತಗೆ ಓರ್ವ ಮುದ್ದಾದ ಮಗಳಿದ್ದಾಳೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.