ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟ ರಿಷಬ್ ಶೆಟ್ಟಿ ಮನೆಯಲ್ಲಿ ಇತ್ತೀಚೆಗೆ ಸತ್ಯನಾರಾಯಣ ಸ್ವಾಮಿ ಪೂಜೆ ಜೊತೆಗೆ, ಲಕ್ಷ್ಮೀ ಪೂಜೆಯನ್ನು ಸಹ ನೆರವೇರಿಸಿದ್ದು, ಪತ್ನಿ ಪ್ರಗತಿ ಶೆಟ್ಟಿ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಕಾಂತಾರಾ ಸಿನಿಮಾ ಮೂಲಕ ಹೊಸ ಅಧ್ಯಾಯವನ್ನೇ ಶುರುಮಾಡುವ ಮೂಲಕ ಡಿವೈನ್ ಸ್ಟಾರ್ ಎಂದೇ ಖ್ಯಾತರಾಗಿರುವ ರಿಷಬ್ ಶೆಟ್ಟಿ ಅವರ ಮನೆಯಲ್ಲಿ ಇತ್ತೀಚೆಗೆ ಅದ್ದೂರಿಯಾಗಿ ಸತ್ಯನಾರಾಯಣ ಸ್ವಾಮಿ ಪೂಜೆ ನಡೆದಿದೆ.
27
ಅದ್ದೂರಿಯಾಗಿ ನಡೆದ ಪೂಜೆಗಳು
ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮನೆಯಲ್ಲಿ ಅದ್ದೂರಿಯಾಗಿ ನಡೆದ ಸತ್ಯನಾರಾಯಣ ಸ್ವಾಮಿ ಮತ್ತು ಲಕ್ಷ್ಮೀ ಪೂಜೆಯ ಫೋಟೊಗಳನ್ನು ಹಂಚಿಕೊಂಡಿದ್ದು, ತಾವು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದರೂ, ತಮ್ಮ ಸಂಸ್ಕೃತಿ ಸಂಪ್ರದಾಯವನ್ನು ನಟ ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದಾರೆ.
37
ಪತ್ನಿ ಮಕ್ಕಳೊಂದಿಗೆ ಪೂಜೆ
ರಿಷಬ್ ಶೆಟ್ಟಿ ತಮ್ಮ ಪತ್ನಿ ಪ್ರಗತಿ ಶೆಟ್ಟಿ ಹಾಗೂ ಮಕ್ಕಳಾದ ರಾಧ್ಯಾ ಮತ್ತು ರಣ್ವಿತ್ ಶೆಟ್ಟಿ ಜೊತೆ ಲಕ್ಷ್ಮಿ ಮತ್ತು ಸತ್ಯಾನಾಯಣ ಸ್ವಾಮಿ ಪೂಜೆಯನ್ನು ಜೊತೆಯಾಗಿ ಅದ್ದೂರಿಯಾಗಿ ನಡೆಸಿದ್ದಾರೆ. ಸದ್ಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ರಿಷಬ್ ತಮ್ಮ ಕುಟುಂಬದೊಂದಿಗೆ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ರಿಷಬ್ ಹಾಗೂ ಪುತ್ರ ರಣ್ವಿತ್ ಪಂಚೆ ಮತ್ತು ಆಫ್ ವೈಟ್ ಬಣ್ಣದ ಕುರ್ತಾದಲ್ಲಿ ಕಂಡು ಬಂದರೆ, ಪ್ರಗತಿ ಶೆಟ್ಟಿ ನೇರಳ ಬಣ್ಣದ ಜರಿ ಸೀರೆ, ಮಲ್ಲಿಗೆ ಹೂವಿನ ಉದ್ದ ಜಡೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮಗಳು ರಾಧ್ಯ ಕ್ರೀಂ ಬಣ್ಣದ ಲಂಗ ಮತ್ತು ನೇರಳೆ ಬಣ್ಣದ ಬ್ಲೌಸ್ ಧರಿಸಿದ್ದಾರೆ.
57
ಸಿನಿಮಾಗಳಲ್ಲಿ ರಿಷಬ್ ಬ್ಯುಸಿ
ಇನ್ನು ಕರಿಯರ್ ಬಗ್ಗೆ ಹೇಳುವುದಾದರೆ, ಕಾಂತಾರ ಚಾಪ್ಟರ್ 1ರ ಬಳಿಕ ರಿಷಬ್ ಶೆಟ್ಟಿ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ತೆಲುಗು ಮತ್ತು ಹಿಂದಿ ಸಿನಿಮಾಗಳ ಜೊತೆಗೆ ‘ಕಾಂತಾರ’ ಸಿನಿಮಾದ ಮುಂದುವರೆದ ಭಾಗ ನಿರ್ದೇಶನ ಮಾಡಲು ಸಹ ರಿಷಬ್ ತಯಾರಿ ನಡೆಸಿದ್ದಾರೆ.
67
ಜೈ ಹನುಮಾನ್
ರಿಷಬ್ ಶೆಟ್ಟಿ ‘ಜೈ ಹನುಮಾನ್’ ಸಿನಿಮಾದಲ್ಲಿ ಹನುಮಂತನ ಪಾತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲು ಎಲ್ಲಾ ತಯಾರಿ ನಡೆಸಿದ್ದಾರೆ. ಇದು ತೆಲುಗು ಸಿನಿಮಾವಾಗಿದ್ದು, ಪ್ರಶಾಂತ್ ವರ್ಮಾ ನಿರ್ದೇಶನ ಮಾಡಲಿದ್ದಾರೆ. ಇದು ಪ್ರಶಾಂತ್ ವರ್ಮಾರ ‘ಹನು-ಮ್ಯಾನ್’ ಸಿನಿಮಾದ ಸೀಕ್ವಲ್ ಆಗಿರಲಿದೆ.
77
ದಿ ಪ್ರೈಡ್ ಆಫ್ ಭಾರತ್- ಛತ್ರಪತಿ ಶಿವಾಜಿ ಮಹಾರಾಜ್
ಇನ್ನು ಬಾಲಿವುಡ್ ಗೂ ರಿಷಬ್ ಶೆಟ್ಟಿ ಎಂಟ್ರಿ ಕೊಟ್ಟಿದ್ದು, ಸಂದೀಪ್ ಸಿಂಗ್ ನಿರ್ದೇಶನ ಮಾಡಿರುವ ‘ದಿ ಪ್ರೈಡ್ ಆಫ್ ಭಾರತ್- ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಸಿನಿರಸಿಕರ ಬಹು ನಿರೀಕ್ಷಿತ ಸಿನಿಮಾ ಆಗಿದೆ. ಇದು ಯಾವಾಗ ರಿಲೀಸ್ ಆಗಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.