ತಮಿಳುನಾಡಿನ ಚೆನ್ನೈನ ಮೇಡವಕ್ಕಂನಲ್ಲಿ ವ್ಯಭಿಚಾರದ ಶಂಕೆಯಿಂದ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದೆ. ದಂಪತಿ ಮಧ್ಯೆ ಆಗಾಗ್ಗೆ ಇದೇ ವಿಷಯವಾಗಿ ಜಗಳ ನಡೆಯುತ್ತಿತ್ತು. ಕುಡಿದ ಅಮಲಿನಲ್ಲಿದ್ದ ಪತಿ ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.
24
ಕೂಲಿ ಕೆಲಸ ಮಾಡಿಕೊಂಡಿದ್ದ ಆರೋಪಿ
ಸತ್ಯಶೀಲನ್ (38) ಚೆನ್ನೈ ಬಳಿಯ ಮೇಡವಕ್ಕಂನ ವಿಜಯನಗರ ಪಾರ್ಕ್ ಸ್ಟ್ರೀಟ್ ನಿವಾಸಿಯಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದನು. ಸತ್ಯಶೀಲನ್ ಪತ್ನಿ ಮೀನಾ (40) ಈ ಪ್ರದೇಶದಲ್ಲಿ ಮನೆಕೆಲಸ ಮಾಡಿಕೊಂಡಿದ್ದರು. ದಂಪತಿಗೆ 22 ವರ್ಷದ ಮಗ ಮತ್ತು 21 ವರ್ಷದ ಮಗಳಿದ್ದು, ನಾಲ್ವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
34
ಯುವಕನೊಂದಿಗೆ ಅಕ್ರಮ ಸಂಬಂಧ
ಸತ್ಯಶೀಲನ್ ಪತ್ನಿ ಮೀನಾ ಅವರ ಪಕ್ಕದ ಮನೆಯಲ್ಲಿ ವಾಸಿಸುವ ಅರುಣ್ ಎಂಬ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಪತಿ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಯುವಕನೊಂದಿಗೆ ಮೀನಾ ಭೇಟಿಯಾಗುತ್ತಿದ್ದಳು. ಈ ವಿಷಯ ಸತ್ಯಶೀಲನ್‌ಗೆ ನೆರೆಹೊರೆಯವರಿಂದ ಗೊತ್ತಾಗಿತ್ತು. ಇದೇ ವಿಷಯವಾಗಿ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು.
ಎಂದಿನಂತೆ ಕೆಲಸ ಮುಗಿಸಿ ಸಂಜೆ ಮನೆಗೆ ಹಿಂದಿರುಗಿದ ಸತ್ಯಶೀಲನ್ ಕುಡಿದು ಬಂದಿದ್ದನು. ಅರುಣ್ ವಿಷಯವಾಗಿಯೇ ಹೆಂಡತಿ ಜೊತೆ ಜಗಳ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಮೀನಾಳ ಕತ್ತು ಸೀಳಿ ಕೊಂದಿದ್ದಾನೆ. ರಕ್ತದ ಮಡುವಿನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದು ಮೀನಾಳನ್ನು ನೆರೆಹೊರೆಯವರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.