ಗಿಳಿಯಿಂದ ಬಯಲಾಯ್ತು ಅಕ್ರಮ ಸಂಬಂಧದ ಗುಟ್ಟು: ಪತಿಗೆ ಕೋರ್ಟ್​ ಕೊಟ್ಟಿತು ಶಿಕ್ಷೆ!

Published : Aug 31, 2025, 08:13 PM IST

ಮನೆ ಕೆಲಸದವಳ ಜೊತೆ ಯಜಮಾನನ ಅಕ್ರಮ ಸಂಬಂಧವನ್ನು ಗಿಳಿಯೊಂದು ಬಯಲು ಮಾಡಿರುವ ಕುತೂಹಲದ ಘಟನೆ ನಡೆದಿದೆ. ಮನೆಯೊಡತಿಗೆ ಈ ವಿಷಯವನ್ನು ಗಿಳಿ ತಿಳಿಸಿದ್ದು ಹೇಗೆ? 

PREV
17
ಸಾಕ್ಷಿ ಹೇಳಿದ ಗಿಳಿ

ತಪ್ಪು ಮಾಡಿದಾಗ ಗ್ರಹಚಾರ ಕೆಟ್ಟರೆ ಸಾಕ್ಷಿ ಯಾವ ರೂಪದಲ್ಲಾದರೂ ಬರಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಮನೆಯಲ್ಲಿ ಮುತ್ತಿನಂಥ ಪತ್ನಿ ಇದ್ದರೂ, ಮನೆಗೆಲಸದವಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಪತಿಮಹಾಶಯನೊಬ್ಬನ ಬಂಡವಾಳವನ್ನು ಗಿಳಿಯೊಂದು ಬಯಲು ಮಾಡಿದೆ.

27
ಗಿಳಿ ನುಡಿದ ಸಾಕ್ಷಿ

ವಿಚಿತ್ರ ಎಂದರೂ ನಿಜವಾಗಿರುವ ಸ್ಟೋರಿ ಇದು. ಇದೇ ಗಿಳಿ ನುಡಿದ ಸಾಕ್ಷಿಯಿಂದಾಗಿ ಪತಿಗೆ ಜೈಲು ಶಿಕ್ಷೆಯೂ ಆಗಿದೆ. ಅಷ್ಟಕ್ಕೂ ಈ ಘಟನೆ ನಡೆದಿರುವುದು ಕುವೈತ್​ನಲ್ಲಿ. ಕುವೈತ್‌ನಲ್ಲಿ, ಕುಟುಂಬದ ಮುದ್ದಿನ ಗಿಳಿ ಯಜಮಾನ ಮನೆಕೆಲಸದವಳೊಂದಿಗೆ ಇಟ್ಟುಕೊಂಡ ರಹಸ್ಯ ಸಂಬಂಧವನ್ನು ಬಯಲು ಮಾಡಿದೆ.

37
ಗಿಳಿಯಿಂದ ರಿವೀಲ್​ ಆಯ್ತು ಸತ್ಯ

ಈ ದಂಪತಿ ಗಿಳಿಯೊಂದನ್ನು ಸಾಕಿದ್ದರು. ಪತ್ನಿ ಹೊರಗೆ ಹೋದಾಗ ಕೆಲಸದಾಕೆಯ ಜೊತೆ ಪತಿಯ ಅಕ್ರಮ ಸಂಬಂಧ ನಡೆಯುತ್ತಿತ್ತು. ಇದನ್ನು ಗಿಳಿ ನೋಡುತ್ತಿತ್ತು. ಆದರೆ ಗಿಳಿ ಇದನ್ನೆಲ್ಲಾ ಗಮನಿಸುತ್ತಿದೆ ಎನ್ನುವುದು ಪತಿ ಮಹಾಶಯನಿಗೆ ತಿಳಿಯಲೇ ಇಲ್ಲ.

47
ಅನುಮಾನವಿದ್ದರೂ ಸುಮ್ಮನಿದ್ದ ಪತ್ನಿ

ಗಂಡನ ಬಗ್ಗೆ ಹೆಂಡತಿಗೆ ಅನುಮಾನ ಇದ್ದರೂ ಅದನ್ನು ಸಾಬೀತು ಮಾಡಲು ಆಕೆಗೆ ಸಾಧ್ಯವಾಗುತ್ತಿರಲಿಲ್ಲ. ಏನಾದರೂ ಮಾಡಿ ಅದನ್ನು ಕಂಡುಹಿಡಿಯಬೇಕು ಎಂದುಕೊಂಡಿದ್ದಳು. ಆದರೆ, ತಮ್ಮ ಸಂದೇಹ ಸುಳ್ಳಾಗಿದ್ದರೆ ತಮ್ಮ ಮತ್ತು ಪತಿಯ ಸಂಬಂಧ ಹಾಳಾಗಬಹುದು ಎಂದು ಆಕೆ ಸುಮ್ಮನೆ ಇದ್ದಳು.

57
ಯಜಮಾನಿಗೆ ಗಿಳಿ ಸಾಕ್ಷಿ

ಆದರೆ ತನ್ನ ಯಜಮಾನಿಯ ನೋವು ಗಿಳಿಗೆ ಅರ್ಥವಾಗಿತ್ತು. ಅದು ಈ ಬಗ್ಗೆ ಹೇಳಲು ಪ್ರಯತ್ನಿಸಿತ್ತು. ಕೊನೆಗೆ ಆಕೆಯ ಬಳಿ ಬಂದು ಪದೇ ಪದೇ ಮನೆಕೆಲಸದಾಕೆಯ ಹೆಸರನ್ನು ಹೇಳತೊಡಗಿತು. ಹೀಗೆ ಹೇಳಿದಾಗ, ಪತ್ನಿಗೆ ಸಂಪೂರ್ಣ ಮನವರಿಕೆಯಾಯಿತು.

67
ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ

ಅದೊಂದು ದಿನ ಕಚೇರಿಯಿಂದ ಸಾಮಾನ್ಯಕ್ಕಿಂತ ಮುಂಚಿತವಾಗಿ ಹಿಂದಿರುಗಿದಾಗ ಪತಿ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ. ಕೊನೆಗೆ ಪತ್ನಿ ಪತ್ನಿ ಹವಾಲಿ ಪೊಲೀಸ್ ಠಾಣೆಯಲ್ಲಿ ತನ್ನ ಪತಿ ಮೋಸ ಮಾಡುತ್ತಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದಳು.

77
ಪತಿಗೆ ಶಿಕ್ಷೆ

ಕೊನೆಗೆ ಈ ಪ್ರಕರಣ ಕೋರ್ಟ್​ಗೆ ಹೋಯಿತು. ಅಲ್ಲಿ ಗಿಳಿಯ ಸಾಕ್ಷಿಯನ್ನೂ ಪರಿಗಣಿಸಲಾಯಿತು. ಅಕ್ರಮ ಸಂಬಂಧದ ಆರೋಪ ಸಾಬೀತಾಗಿ ಆತನಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

Read more Photos on
click me!

Recommended Stories