ಯಶ್‌ ರಾಮಾಯಣದ ಗ್ಲಿಂಪ್ಸ್‌ನಿಂದಲೇ 1000 ಕೋಟಿ ಏರಿಕೆ ಕಂಡ ನಿರ್ಮಾಣ ಸಂಸ್ಥೆ: ಹೇಗೆ ಗೊತ್ತಾ?

Published : Jul 09, 2025, 05:08 PM IST

ಈಗಾಗಲೇ ಏರಿಕೆಯಲ್ಲಿದ್ದ ಕಂಪನಿ ಶೇರುಗಳು ‘ರಾಮಾಯಣ’ತುಣುಕು ಬಿಡುಗಡೆಯಾದ ಕೂಡಲೇ ದಾಖಲೆಯ ಏರಿಕೆ ಕಂಡವು. ಕಂಪನಿಯ ಒಂದು ಪ್ರತಿ ಷೇರಿನ ದರ ರು. 149.69ನಿಂದ ರು. 176ಕ್ಕೆ ಜಿಗಿಯಿತು.

PREV
15

ಯಶ್‌ ನಟನೆಯ ‘ರಾಮಾಯಣ’ ಗ್ಲಿಂಪ್ಸ್‌ಗೆ ಜಗತ್ತಿನಾದ್ಯಂತ ಮೆಚ್ಚುಗೆ ಹರಿದುಬಂದಿದೆ. ಆದರೆ ಅದಕ್ಕೂ ಹೆಚ್ಚಾಗಿ ಈ ಸಿನಿಮಾ ನಿರ್ಮಿಸುತ್ತಿರುವ ಪ್ರೈಮ್‌ ಫೋಕಸ್‌ ಸಂಸ್ಥೆ ಸಿನಿಮಾ ರಿಲೀಸ್‌ಗೂ ಮೊದಲೇ ದಾಖಲೆಯ 1000 ಕೋಟಿ ರು. ಗಳಿಕೆ ಮಾಡಿ ಹೆಮ್ಮೆಯಿಂದ ಬೀಗುತ್ತಿದೆ.

25

ಈ ಬೃಹತ್‌ ಮೊತ್ತ ಬಂದದ್ದು ‘ರಾಮಾಯಣ’ ತುಣುಕಿನ ವೀಕ್ಷಣೆಯಿಂದಲ್ಲ. ಬದಲಿಗೆ ಸ್ಟಾಕ್‌ ಮಾರ್ಕೆಟ್‌ನಿಂದ. ನಮಿತ್‌ ಮಲ್ಹೋತ್ರ ಮಾಲಿಕತ್ವದ ಪ್ರೈಮ್‌ ಫೋಕಸ್‌ ಸಂಸ್ಥೆಯ ಹೆಸರು ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ ಪಟ್ಟಿಯಲ್ಲಿದೆ.

35

ಈಗಾಗಲೇ ಏರಿಕೆಯಲ್ಲಿದ್ದ ಕಂಪನಿ ಶೇರುಗಳು ‘ರಾಮಾಯಣ’ತುಣುಕು ಬಿಡುಗಡೆಯಾದ ಕೂಡಲೇ ದಾಖಲೆಯ ಏರಿಕೆ ಕಂಡವು. ಕಂಪನಿಯ ಒಂದು ಪ್ರತಿ ಷೇರಿನ ದರ ರು. 149.69ನಿಂದ ರು. 176ಕ್ಕೆ ಜಿಗಿಯಿತು.

45

ಪರಿಣಾಮ 4638 ಕೋಟಿ ರು. ಇದ್ದ ಕಂಪನಿಯ ಮಾರುಕಟ್ಟೆ ಮೌಲ್ಯ ಎರಡೇ ದಿನದಲ್ಲಿ 5641 ಕೋಟಿಗೆ ಏರಿಕೆ ಆಗಿದೆ. ‘ರಾಮಾಯಣ’ದ ದಯದಿಂದ ಕಂಪನಿ ಕೇವಲ ಎರಡೇ ದಿನಗಳಲ್ಲಿ ತನ್ನ ಮೌಲ್ಯವನ್ನು 1000 ಕೋಟಿ ಏರಿಸಿಕೊಂಡಿದೆ.

55

ಈ ಸಿನಿಮಾದಲ್ಲಿ ರಾಮನ ಪಾತ್ರ ನಿರ್ವಹಿಸುತ್ತಿರುವ ರಣಬೀರ್‌ ಕಪೂರ್‌ ಸಹ ಹೂಡಿಕೆದಾರರಾಗಿದ್ದು, ಅವರ ಕಂಪನಿಯ ಶೇರುಗಳೂ ಜಿಗಿತ ಕಂಡಿವೆ. ಈ ಬೆಳವಣಿಗೆಯಿಂದ ರಣಬೀರ್‌ ಅವರ ಗಳಿಕೆಯಲ್ಲಿ 20 ಕೋಟಿ ರು. ಏರಿಕೆಯಾಗಿದೆ ಎನ್ನಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories