ಕೇರಳದ ನಟಿಯರಿಗೆ ಮಲಯಾಳಂ ಭಾಷೆಗಿಂತ ತಮಿಳು ಚಿತ್ರರಂಗದಲ್ಲಿ ಡಿಮ್ಯಾಂಡ್ ಜಾಸ್ತಿ. ರಾಧಾ, ನಯನತಾರಾ, ನದಿಯಾ ಎಲ್ಲರೂ ಕೇರಳದವರೇ. ಈಗ ಈ ಲಿಸ್ಟ್‌ಗೆ ಮಮಿತಾ ಬೈಜು ಕೂಡ ಸೇರಿದ್ದಾರೆ. 'ಪ್ರೇಮಲು' ಸಿನಿಮಾದಲ್ಲಿ ನಟಿಸಿ ತಮಿಳು ಪ್ರೇಕ್ಷಕರ ಮನಗೆದ್ದಿದ್ದಾರೆ. ಹೀಗಾಗಿ ಮಲಯಾಳಂ ಭಾಷೆಗಿಂತ ತಮಿಳಿನಲ್ಲಿ ಆಫರ್ಸ್ ಜಾಸ್ತಿ. ಈಗ ಅರ್ಧ ಡಜನ್ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ.
24
ಜನನಾಯಕನ್ ಸಿನಿಮಾ
ಮಮಿತಾ ಬೈಜು 'ಜನನಾಯಕನ್' ಸಿನಿಮಾದಲ್ಲಿ ನಟಿಸ್ತಿದ್ದಾರೆ. ಎಚ್. ವಿನೋದ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ಹೀರೋ. ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ಈ ಚಿತ್ರದ ಶೂಟಿಂಗ್ ಮುಗಿದಿದೆ. 2026 ಜನವರಿ 9ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ. ಅನಿರುದ್ಧ ಸಂಗೀತವಿದೆ. ಡಿಜೆ ಅರುಣಾಚಲಂಗೆ ಜೋಡಿಯಾಗಿ ನಟಿಸಿರಬಹುದು ಅಥವಾ ವಿಜಯ್ ತಂಗಿಯಾಗಿ ನಟಿಸಿರಬಹುದು ಎನ್ನಲಾಗಿದೆ.
34
ಸೂರ್ಯಗೆ ಜೋಡಿಯಾದ ಮಮಿತಾ
ಮಮಿತಾ 'ಸೂರ್ಯ 46' ಸಿನಿಮಾದಲ್ಲಿಯೂ ನಟಿಸ್ತಿದ್ದಾರೆ. ವೆಂಕಿ ಅಟ್ಲುರಿ ನಿರ್ದೇಶನದ ಈ ಚಿತ್ರವನ್ನು ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ನಿರ್ಮಿಸುತ್ತಿದೆ. ಸೂರ್ಯಾಗೆ ಜೋಡಿಯಾಗಿ ಮಮಿತಾ ನಟಿಸುತ್ತಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ. 'ಇರಂಡು ವಾನಂ' ಸಿನಿಮಾದಲ್ಲಿಯೂ ನಟಿಸಿದ್ದಾರೆ. 'ರಾಕ್ಷಸನ್' ಖ್ಯಾತಿಯ ರಾಮ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ವಿಷ್ಣು ವಿಶಾಲ್‌ಗೆ ಜೋಡಿಯಾಗಿದ್ದಾರೆ. ಸತ್ಯಜ್ಯೋತಿ ಫಿಲ್ಮ್ಸ್ ನಿರ್ಮಾಣ.
ಮಮಿತಾ ಧನುಷ್ ಜೊತೆಗೂ ಒಂದು ಸಿನಿಮಾದಲ್ಲಿ ನಟಿಸಲಿದ್ದಾರೆ. 'ಪೋರ್ ತೊಳಿಲ್' ಖ್ಯಾತಿಯ ವಿಘ್ನೇಶ್ ರಾಜ ನಿರ್ದೇಶನ. ವೇಲ್ಸ್ ಫಿಲ್ಮ್ಸ್ ಇಂಟರ್ನ್ಯಾಷನಲ್ ನಿರ್ಮಾಣ. ಪ್ರದೀಪ್ ರಂಗನಾಥನ್ ಜೊತೆ 'ಡ್ಯೂಡ್' ಚಿತ್ರದಲ್ಲೂ ನಟಿಸುತ್ತಿದ್ದಾರೆ. ಕೀರ್ತಿಸ್ವರನ್ ನಿರ್ದೇಶನ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ. ಸಾಯಿ ಅಭಯಂಕರ್ ಸಂಗೀತ. ದೀಪಾವಳಿಗೆ ರಿಲೀಸ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.