ಮೋಹನ್‌ಲಾಲ್, ಅಜಯ್ ದೇವಗನ್ ಮತ್ತು ಪೂಜಾ ಹೆಗ್ಡೆ ಅವರು ನಟಿಸಿರುವ ಪ್ರಾಜೆಕ್ಟ್‌ಗಳು ಎರಡೂ ಪಟ್ಟಿಗಳಲ್ಲಿ ಕಾಣಿಸಿಕೊಂಡಿರುವುದನ್ನು ಗಮನಿಸಬಹುದು. ಮೋಹನ್‌ಲಾಲ್ ಅವರು ಎಲ್2: ಎಂಪುರಾನ್‌ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಮತ್ತು ಹೃದಯಪೂರ್ವಮ್‌ನಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ. ಪೂಜಾ ಹೆಗ್ಡೆ ಅವರು ದೇವಾ ಮತ್ತು ರೆಟ್ರೋದಲ್ಲಿ ಕಾಣಿಸಿಕೊಂಡಿದ್ದು, ಕೂಲಿಯಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಅಜಯ್ ದೇವಗನ್ ರೇಡ್ 2 ದಲ್ಲಿ ಕಾಣಿಸಿಕೊಂಡಿದ್ದು, ಸನ್ ಆಫ್ ಸರ್ದಾರ್ 2 ದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಜುಲೈ ತಿಂಗಳಲ್ಲಿ ಅತ್ಯಂತ ನಿರೀಕ್ಷಿತ ಹೊಸ ನಟ ಅಹಾನ್ ಪಾಂಡೆ ಅವರ ಸೈಯಾರಾ ಹಾಗೂ ಶನನ್ಯಾ ಕಪೂರ್ ಅವರ ಆಂಖೋ ಕಿ ಗುಸ್ತಾಖಿಯಾಂ ಕೂಡ ಪಟ್ಟಿಯಲ್ಲಿದೆ.