ಸಮಂತಾ, ಪ್ರಭಾಸ್ ಒಟ್ಟಾಗೇಕೆ ಇನ್ನೂ ಒಂದೂ ಮೂವಿ ಮಾಡಿಲ್ಲ?

First Published | Sep 18, 2024, 5:18 PM IST

ಪ್ರಭಾಸ್ ತಮ್ಮ ವೃತ್ತಿಜೀವನದಲ್ಲಿ ನಯನತಾರಾ, ತ್ರಿಷಾ, ತಮನ್ನಾ, ಅನುಷ್ಕಾ, ಶ್ರಿಯಾ, ಕಾಜಲ್ ಅವರಂತಹ ಹಲವಾರು ಸ್ಟಾರ್ ನಟಿಯರೊಂದಿಗೆ ನಟಿಸಿದ್ದಾರೆ. ಆದರೆ ಸಮಂತಾ ಕಾಂಬಿನೇಷನ್‌ನಲ್ಲಿ ಒಂದೇ ಒಂದು ಚಿತ್ರವೂ ಬಂದಿಲ್ಲ. ಅದ್ಯಾಕೆ ಹಾಗೆ?

ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಇತ್ತೀಚೆಗೆ ಕಲ್ಕಿ ಚಿತ್ರದ ಮೂಲಕ ಬ್ಲಾಕ್‌ಬಸ್ಟರ್ ಸಕ್ಸಸ್ ಕಂಡಿದ್ದಾರೆ. ಕಲ್ಕಿ ವಿಶ್ವಾದ್ಯಂತ 1000 ಕೋಟಿಗೂ ಹೆಚ್ಚು ಗಳಿಸಿದೆ. ಬಾಹುಬಲಿ ನಂತರ ಪ್ರಭಾಸ್‌ಗೆ ಇಷ್ಟು ದೊಡ್ಡ ಯಶಸ್ಸು ತಂದುಕೊಟ್ಟ ಚಿತ್ರ ಕಲ್ಕಿ. ಪ್ರಸ್ತುತ ಪ್ರಭಾಸ್ ಹನು ರಾಘವಪುಡಿ ನಿರ್ದೇಶನದಲ್ಲಿ ಬಿಗ್ ಬಜೆಟ್ ಚಿತ್ರದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಲಾಂಚ್ ಕಾರ್ಯಕ್ರಮ ನೆರವೇರಿತು. 

ಈ ಸಿನಿಮಾದಲ್ಲಿ ಇಮಾನ್ವಿ ಎಂಬ ಇನ್‌ಸ್ಟಾಗ್ರಾಮ್ ಸೆಲೆಬ್ರಿಟಿಯನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಆದರೆ ಅಭಿಮಾನಿಗಳು ಒಂದು ವಿಷಯದಲ್ಲಿ ನಿರಾಶೆಗೊಂಡಿದ್ದಾರೆ. ಪ್ರಭಾಸ್ ಮತ್ತು ಸಮಂತಾ ಕಾಂಬಿನೇಷನ್‌ನಲ್ಲಿ ಇಲ್ಲಿಯವರೆಗೆ ಒಂದೇ ಒಂದು ಚಿತ್ರವೂ ಬಂದಿಲ್ಲ. ಪ್ರಭಾಸ್ ತಮ್ಮ ವೃತ್ತಿಜೀವನದಲ್ಲಿ ನಯನತಾರಾ, ತ್ರಿಷಾ, ತಮನ್ನಾ, ಅನುಷ್ಕಾ, ಶ್ರಿಯಾ, ಕಾಜಲ್ ಅವರಂತಹ ಹಲವಾರು ಸ್ಟಾರ್ ನಟಿಯರೊಂದಿಗೆ ನಟಿಸಿದ್ದಾರೆ. ಆದರೆ ಸಮಂತಾ ಕಾಂಬಿನೇಷನ್‌ನಲ್ಲಿ ಒಂದೇ ಒಂದು ಚಿತ್ರವೂ ಬಂದಿಲ್ಲವೇಕೆ ಎನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

Tap to resize

ಸಮಂತಾ ಕೂಡ ಮಹೇಶ್ ಬಾಬು, ಪವನ್ ಕಲ್ಯಾಣ್, ಎನ್‌ಟಿಆರ್, ರಾಮ್‌ಚರಣ್, ಅಲ್ಲು ಅರ್ಜುನ್ ಅವರಂತಹ ಸ್ಟಾರ್ ನಟರೊಂದಿಗೆ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಪ್ರಭಾಸ್ ಜೊತೆ ನಟಿಸುವ ಅವಕಾಶ ಮಾತ್ರ ಸಿಕ್ಕಿಲ್ಲ. ಒಂದು ಸಂದರ್ಶನದಲ್ಲಿ ಪ್ರಭಾಸ್ ಸಮಂತಾ ಜೊತೆ ಯಾಕೆ ನಟಿಸಿಲ್ಲ ಎಂಬ ಪ್ರಶ್ನೆಗೆ ಆಸಕ್ತಿದಾಯಕ ಉತ್ತರ ನೀಡಿದ್ದಾರೆ. 

ಸಮಂತಾ ಜೊತೆ ಸಿನಿಮಾ ಮಾಡಲು ಪ್ರಯತ್ನಗಳು ನಡೆದಿವೆಯಂತೆ. ಆದರೆ ಹೈಟ್ ಸಮಸ್ಯೆಯಿಂದಾಗಿ ಕಾಂಬಿನೇಷನ್ ಸೆಟ್ ಆಗುತ್ತಿಲ್ಲ ಎಂದಿದ್ದಾರೆ ಪ್ರಭಾಸ್. ನಿಜಕ್ಕೂ ಪ್ರಭಾಸ್ ನೀಡಿದ ಉತ್ತರ ಶಾಕಿಂಗ್ ಎಂದೇ ಹೇಳಬೇಕು. ಎತ್ತರವನ್ನು ನ್ಯೂನತೆಯಾಗಿ ತೋರಿಸುವ ಸಾಹಸ ಯಾರೂ ಮಾಡುವುದಿಲ್ಲ. ಆದರೆ ಪ್ರಭಾಸ್ ಅದೇ ಸಮಸ್ಯೆ ಎಂದಿದ್ದಾರೆ.

ಪ್ರಭಾಸ್ ಎತ್ತರ ಆರು ಅಡಿಗಿಂತ ಹೆಚ್ಚು. ಮಹೇಶ್ ಬಾಬು ಕೂಡ ಆರು ಅಡಿ ಎತ್ತರ ಇದ್ದಾರೆ. ಆದರೆ ಮಹೇಶ್ ಜೊತೆ ಸಮಂತಾ ದೂಕುಡು, ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು ಇತ್ಯಾದಿ ಚಿತ್ರಗಳಲ್ಲಿ ನಟಿಸಿ ಸೂಪರ್ ಹಿಟ್ ಆಗಿವೆ. ನಿರ್ದೇಶಕರು ಬಯಸಿದರೆ ಎತ್ತರ ಸಮಸ್ಯೆಯಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಸಾಹೋ ಚಿತ್ರದಲ್ಲಿ ಮೊದಲು ಸಮಂತಾಗೆ ಅವಕಾಶ ಬಂದಿತ್ತಂತೆ. ಆದರೆ ಕೊನೆಗೆ ಶ್ರದ್ಧಾ ಕಪೂರ್ ಅವರನ್ನು ಆಯ್ಕೆ ಮಾಡಿಕೊಂಡರು ಎಂಬ ವದಂತಿಗಳೂ ಇವೆ. 

Latest Videos

click me!