ಮೆಗಾಸ್ಟಾರ್ ಚಿರಂಜೀವಿ ಅವರ ವೃತ್ತಿಜೀವನಕ್ಕೆ ತಿರುವು ನೀಡಿದ್ದು ಖೈದಿ. ಈ ಚಿತ್ರದಲ್ಲಿ ಚಿರಂಜೀವಿ ನಟನೆ, ಕೋದಂಡರಾಮಿ ರೆಡ್ಡಿ ನಿರ್ದೇಶನ ಅದ್ಭುತ. ಈ ಸಿನಿಮಾದಲ್ಲಿ ನಾಯಕಿಯಾಗಿ ಮಾಧವಿ ನಟಿಸಿದ್ದರು. ಚಿರಂಜೀವಿ ಜೊತೆ ಮಾಧವಿ ಹಲವು ಚಿತ್ರಗಳಲ್ಲಿ ನಟಿಸಿದ್ದು, ಬಹು ಜನಪ್ರಿಯ ಜೋಡಿಯಾಗಿತ್ತು.
ತೆಲಗಿನ ಇಂಟ್ಲೋ ರಾಮಯ್ಯ ವೀಧಿಲೋ ಕೃಷ್ಣಯ್ಯ, ರೋಷಗಾಡು, ಚಟ್ಟಂತೋ ಪೋರಾಟಂ, ಖೈದಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಖೈದಿ ಸಿನಿಮಾದಲ್ಲಿ ಚಿರಂಜೀವಿ ಮತ್ತು ಮಾಧವಿ ನಡುವಿನ ಪ್ರೇಮ ಸನ್ನಿವೇಶಗಳು ಹೈಲೈಟ್ ಆಗಿದ್ದವು. ಮಾತೃದೇವೋ ಭವ ದಂಥ ಕ್ಲಾಸಿಕ್ ಸಿನಿಮಾದಲ್ಲೂ ಮಾಧವಿ ನಟಿಸಿದ್ದಾರೆ. ನಾಯಕಿಯಾಗಿ ಖ್ಯಾತಿ ಗಳಿಸಿದ್ದ ಮಾಧವಿ ಬಹಳ ಕಾಲದ ಹಿಂದೆಯೇ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. 1996ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪತಿ ರಾಲ್ಫ್ ಶರ್ಮ ಅಮೆರಿಕಾದಲ್ಲಿ ಫಾರ್ಮಾ ಕಂಪನಿಯ ಮುಖ್ಯಸ್ಥರಾಗಿದ್ದು, ಮದುವೆ ನಂತರ ಅಲ್ಲಿಯೇ ನೆಲೆಸಿದ್ದಾರೆ.
ಮಾಧವಿಯೂ ವ್ಯವಹಾರದಲ್ಲಿ ಪತಿಗೆ ಸಹಾಯ ಮಾಡುತ್ತಿದ್ದಾರೆ. ಈ ದಂಪತಿಗೆ ಮೂರು ಮಕ್ಕಳಿವೆ. ಮದುವೆಗೆ ಮೊದಲು ಮಾಧವಿ ತಮ್ಮ ಪತಿಗೆ ಒಂದು ಕಂಡೀಷನ್ ಹಾಕಿದ್ದರಂತೆ. ಅದೇನೆಂದರೆ, ಮದುವೆಯಾದ ಮೇಲೆ ತಮ್ಮ ಸಿನಿಮಾ ಒಂದನ್ನೂ ನೋಡಬಾರದು ಎಂದಿದ್ದರಂತೆ. ಸಂದರ್ಶನವೊಂದರಲ್ಲಿ ಸ್ವತಃ ಆಕಸ್ಮಿಕ ನಟಿ ಮಾಧವಿ ಹೇಳಿಕೊಂಡಿದ್ದಾರೆ. ತಮ್ಮ ಪತಿಗೆ ಹಾಗೆ ಕಂಡೀಷನ್ ಹಾಕಿದ ಕಾರಣವನ್ನೂ ನಟಿ ತಿಳಿಸಿದ್ದಾರೆ.
ಪತಿ ನನ್ನನ್ನು ಸಾಮಾನ್ಯ ಮಹಿಳೆಯಾಗಿ ನೋಡಬೇಕೆಂದು ನಾನು ಬಯಸುತ್ತೇನೆ. ಒಂದು ವೇಳೆ ಅವರು ನನ್ನ ಸಿನಿಮಾಗಳನ್ನು ನೋಡಿದರೆ, ನನ್ನನ್ನು ಸೆಲೆಬ್ರಿಟಿಯಂತೆ ನೋಡೋ ಸಾಧ್ಯತೆ ಇರುತ್ತದೆ. ಆ ಭಯದಿಂದಲೇ ನನ್ನ ಸಿನಿಮಾಗಳನ್ನು ನೋಡಬಾರದು ಎಂದು ಕಂಡೀಷನ್ ಹಾಕಿದೆ ಎಂದು ಮಾಧವಿ ಹೇಳಿದ್ದಾರೆ.
ಒಂದು ವೇಳೆ ಯಾರಾದರೂ ನಿಮ್ಮ ಪತ್ನಿ ನಟಿಸಿದ ಸಿನಿಮಾಗಳನ್ನು ನೋಡಿದ್ದೀರಾ ಎಂದು ಕೇಳಿದರೆ ನೋಡಿದ್ದೇನೆಂದು ಹೇಳಬೇಡ ಎಂದಿದ್ದರಂತೆ. ಆದರೆ ಮಾತೃದೇವೋ ಭವ ಚಿತ್ರವನ್ನು ಮಾತ್ರ ಅವರಿಗೆ ತಾವೇ ತೋರಿಸಿದ್ದಾಗಿ ಮಾಧವಿ ಹೇಳಿದ್ದಾರೆ. ಅವರು ಸಿನಿಮಾ ನೋಡುತ್ತಿದ್ದಾಗ ನಾನು ಮುಖ ಮರೆಮಾಚಿಕೊಂಡು ನಾಚಿಕೆಯಿಂದ ಕುಳಿತಿದ್ದೆ. ನಟಿಯಾಗಿ ನನ್ನನ್ನು ನೋಡಿದರೆ ಹೇಗೆ ಭಾವಿಸುತ್ತಾರೋ ಎಂಬ ಭಯ ನನ್ನನ್ನು ಕಾಡುತ್ತಲೇ ಇತ್ತು, ಎಂದು ಹೇಳಿ ಕೊಂಡಿದ್ದರು ಬಹುಭಾಷಾ ನಟಿ ಮಾಧವಿ.
ಆ ಸಿನಿಮಾ ನೋಡಿದ ನಂತರ ನೀವು ತುಂಬಾ ಒಳ್ಳೆಯ ನಟಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರಂತ ಮಾಧವಿ ಪತಿ. ಪ್ರಸ್ತುತ ಮಾಧವಿ ತಮ್ಮ ಫಾರ್ಮಾ ಕಂಪನಿಗಳನ್ನು ನೋಡಿಕೊಳ್ಳುತ್ತಾ ಬ್ಯುಸಿಯಾಗಿದ್ದಾರೆ. ಒಂದೆಡೆ ಮಕ್ಕಳು, ಮತ್ತೊಂದೆಡೆ ಕಂಪನಿ ವ್ಯವಹಾರಗಳಲ್ಲಿ ತಲ್ಲೀನರಾಗಿದ್ದಾರೆ. ನನ್ನ ಮಕ್ಕಳಲ್ಲಿ ಒಬ್ಬರಾದರೂ ಚಿತ್ರರಂಗದಲ್ಲಿ ನಟರಾದರೆ ನನಗೆ ತುಂಬಾ ಸಂತೋಷವೆನ್ನುತ್ತಾರೆ ಮಾಧವಿ.