ಕೌನ್ ಬನೇಗಾ ಕರೋಡ್ಪತಿ 13 ರ ಇತ್ತೀಚಿನ ಸಂಚಿಕೆಯಲ್ಲಿ, ಮೆಗಾಸ್ಟಾರ್ (Megastar) ಮತ್ತು ಪ್ರೆಸೆಂಟರ್ ಅಮಿತಾಬ್ ಬಚ್ಚನ್ ಅವರ ತಮ್ಮ ನಟನೆಯ (Acting) ಆರಂಭಿಕ ದಿನಗಳ ಬಗ್ಗೆ ರಿವೀಲ್ ಮಾಡಿದ್ದರು. ಚಿರಾಗ್ ಮಂಡೋಟ್, ಎಂಬ ಸ್ವರ್ಧಿ ತಮ್ಮ ಹೆಸರನ್ನು ಟಿವಿ ಮತ್ತು ಪೇಪರ್ ಅಲ್ಲಿ ನೋಡುವುದು ಅವರ ಕನಸು ಎಂದು ಹೇಳಿದ್ದರು. ಇದು ಅಮಿತಾಬ್ ಬಚ್ಚನ್ ಅವರಿಗೆ ಅವರ ಜೀವನದ ಹಳೆ ದಿನಗಳನ್ನು ನೆನಪಿಸಿತು.
ಸೂಪರ್‌ಸ್ಟಾರ್ (Super Star) ಮೊದಲು ಹೇಗೆ ನಾಟಕ ಕಲಾವಿದರಾಗಿ (Actor) ಕೆಲಸ ಮಾಡಲು ಪ್ರಾರಂಭಿಸಿದರು, ಅವರು ಪ್ರಮುಖ ಪತ್ರಿಕೆಗಳಲ್ಲಿ ಅವರ ನಾಟಕಗಳ ವಿಮರ್ಶೆಗಳನ್ನು ಓದಿ ಹೇಗೆ ಸಂಭ್ರಮಿಸಿದರು ಎಂಬುದನ್ನು ನೆನಪಿಸಿಕೊಂಡರು
ಅವರು ಥಿಯೇಟರ್‌ಗಳಲ್ಲಿ (Theaters) ಕೆಲಸ ಮಾಡುತ್ತಿದ್ದ ದಿನಗಳ ಒಂದು ಕಥೆಯನ್ನು ಹೇಳಿದರು. ಆ ಸಮಯದಲ್ಲಿ ಅಮಿತಾಬ್ ಬಚ್ಚನ್ ಇಡೀ ರಾತ್ರಿ ಪತ್ರಿಕೆಯ ಕಚೇರಿಯ ಹೊರಗೆ ಕಾಯುತ್ತಿದ್ದರು ಮತ್ತು ಏಕೆ ಎಂಬುದನ್ನು ಬಹಿರಂಗಪಡಿಸಿದರು.
'ಪದವಿ (Graduation) ಪಡೆದ ನಂತರ, ನಾನು ರಂಗಭೂಮಿ ಕಲಾವಿದರಾಗಿ (theatre artiste) ಕೆಲಸ ಮಾಡಿದಾಗ, ಗೌರವಾನ್ವಿತ ಪತ್ರಿಕೆಯಲ್ಲಿ ನಮ್ಮ ನಾಟಕದ ವಿಮರ್ಶೆಯನ್ನು ಓದಲು ನಮಗೆ ತುಂಬಾ ಸಂತೋಷವಾಗುತ್ತಿತ್ತು' ಎಂದು ಬಿಗ್ ಬಿ ವಿವರಿಸಿದರು.
ಹೇಗೆ ವಿಮರ್ಷೆ ಮಾಡಿದ್ದಾರೆ ಎಂದು ತಿಳಿಯಲು ಅವರು ಪತ್ರಿಕೆಗಳ ಮುದ್ರಣ ಕಚೇರಿಯ ಹೊರಗೆ ಕಾಯುತ್ತಿದ್ದೇವು. ಪೂರ್ತಿ ರಾತ್ರಿ ಅಲ್ಲೇ ಕಳೆದು ಬೆಳಿಗ್ಗೆ ಪೇಪರ್‌ಗಳು ತಲುಪಿದ ತಕ್ಷಣ ಅವುಗಳನ್ನು ಕದಿಯುತ್ತಿದ್ದರು ಮತ್ತು ಅವರ ಹೆಸರುಗಳನ್ನು ಅದರಲ್ಲಿ ನೋಡುತ್ತಿದ್ದರು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ, ನಟ ತನ್ನ ಮುಂಬರುವ ಪ್ರಾಜೆಕ್ಟ್ ಬಗ್ಗೆ ಕೆಲವು ವಿವರಗಳನ್ನು ಬಹಿರಂಗಪಡಿಸಿದರು. ಶೋನ ಸ್ಟರ್ಧಿ ಹಿಮಾಲಯ ಟ್ರಕ್ಕಿಂಗ್ (Himalayan Trekking) ಹೋಗುವ ಆಸೆ ಹೊಂದಿದ್ದು, ಪತ್ನಿ ತಮಗೆ ಅನುಮತಿ ನೀಡುತ್ತಿಲ್ಲ ಎಂದು ಹೇಳಿದರು. ಬಿಗ್ ಬಿ ತನ್ನ ಮುಂದಿನ ಚಿತ್ರವು ಸ್ಪರ್ಧಿಯ ಈ ಆಸಕ್ತಿಯನ್ನು ಆಧರಿಸಿದೆ ಎಂದು ಅವರು ಬಹಿರಂಗಪಡಿಸಿದರು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ (Tokyo Olympics) ಚಿನ್ನ ಗೆದ್ದ (Gold) ನೀರಜ್ ಚೋಪ್ರಾ (Neeraj Chopra) ಮತ್ತು ಭಾರತೀಯ ಹಾಕಿ ತಂಡದ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಇತ್ತೀಚೆಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಪ್ರದರ್ಶನದ ಸಮಯದಲ್ಲಿ, ಬಚ್ಚನ್ ಸ್ಥಳೀಯ ಭಾಷೆಯಾದ ಹರಿಯಾನ್ವಿಯಲ್ಲಿ ಬಾಲಿವುಡ್ (Bollywood) ಡೈಲಾಗ್ ಹೇಳಲು ಕೇಳಿಕೊಂಡಿದ್ದರು. ಈ ಸಾಲಗಳು ನಟನ ಸೂಪರ್ ಹಿಟ್ (Superhit) ಬಾಲಿವುಡ್ ಚಿತ್ರ ಸಿಲ್ಸಿಲಾದಿಂದ ತೆಗೆದುಕೊಳ್ಳಲಾಗಿತ್ತು.