ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ ನೆಟ್‌ ವರ್ತ್‌ ಎಷ್ಟು ನೋಡಿ!

Suvarna News   | Asianet News
Published : Oct 08, 2021, 05:36 PM IST

ಈ ದಿನಗಳಲ್ಲಿ ಪೂಜಾ ದದ್ಲಾನಿ ಸುದ್ದಿಯಲ್ಲಿದ್ದಾರೆ. ಅಷ್ಟಕ್ಕೂ ಯಾರಿದು ಪೂಜಾ ದದ್ಲಾನಿ (Pooja Dadlani) ಗೊತ್ತಾ? ಸಡನ್‌ ಆಗಿ ಇವರು ಲೈಮ್‌ಲೈಟ್‌ಗೆ (Limelight) ಬರಲು ಕಾರಣವೇನು?  ಪೂಜಾ ದದ್ಲಾನಿ ಬಾಲಿವುಡ್‌ (Bollywood) ಸೂಪರ್‌ ಸ್ಟಾರ್‌ ಶಾರುಖ್ ಖಾನ್ (Shah Rukh Khan) ಅವರ ಮ್ಯಾನೇಜರ್‌  (Manager). ಈ ದಿನಗಳಲ್ಲಿ ಇವರಿಗೆ ಸಂಬಂಧಿಸಿದ ಸುದ್ದಿಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಇವರ ನೆಟ್‌ ವರ್ತ್‌ (Networth) ಬಗ್ಗೆ ಹಲವು ವರದಿಗಳು ಕಾಣಿಸಿಕೊಂಡಿವೆ ಹಾಗೂ ಶಾರುಖ್‌ ಮಗ ಮಗ ಆರ್ಯನ್ ಖಾನ್ (Aryan Khan) drug caseನಲ್ಲಿ ಆಕೆ ಯಾವ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ? ಇಲ್ಲಿದೆ ವಿವರ. 

PREV
18
ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ ನೆಟ್‌ ವರ್ತ್‌ ಎಷ್ಟು ನೋಡಿ!

ಶಾರುಖ್ ಖಾನ್ (Sharukh Khan) ಪುತ್ರ ಆರ್ಯನ್ ಖಾನ್ (Aryan Khan) ಬಂಧನವಾದಾಗಿನಿಂದ, ಖಾನ್ ಕುಟುಂಬವು (Family)  ಕಷ್ಟದ ಸಮಯವನ್ನು ಎದುರಿಸುತ್ತಿದೆ. ಕೇವಲ ಕುಟುಂಬವಷ್ಟೇ ಅಲ್ಲ, ಖಾನ್ ಅವರ ಆಪ್ತರು ಮತ್ತು ಅವರ ತಂಡ ಕೂಡ ಕೆಲವು ಸವಾಲುಗಳನ್ನು ಎದುರಿಸುತ್ತಿದೆ.

28

ಕಳೆದ ಕೆಲವು ದಿನಗಳಿಂದ, ಶಾರುಖ್ ಖಾನ್ ಫ್ಯಾಮಿಲಿಗೆ ಕ್ಲೋಸ್‌ (Close) ಆಗಿರುವ ಅವರ ಮ್ಯಾನೇಜರ್ ಪೂಜಾ ದದ್ಲಾನಿ , ಅವರು ಎನ್‌ಸಿಬಿ (NCB) ಕಚೇರಿಯಲ್ಲೂ ಕಾಣಿಸಿಕೊಂಡಿರುವುದನ್ನು ನಾವು ನೋಡಿದ್ದೇವೆ. 2012 ರಿಂದ ಎಸ್‌ಆರ್‌ಕೆ (SRK) ಜೊತೆಗಿರುವ ಪೂಜಾ ದದ್ಲಾನಿ, ಆರ್ಯನ್ ಖಾನ್ ಅವರನ್ನು ಭೇಟಿ ಮಾಡಲು ನಿಯಮಿತವಾಗಿ ಎನ್‌ಸಿಬಿ ಕಚೇರಿಯಲ್ಲಿ ಅನೇಕ ವಕೀಲರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. 


 

38

ಪೂಜಾ ದಾದ್ಲಾನಿ ಮತ್ತು ಶಾರುಖ್ ಖಾನ್ ನವೆಂಬರ್ (November) 02 ರಂದು ಒಂದೇ ಜನ್ಮ ದಿನಾಂಕವನ್ನು ಹಂಚಿಕೊಂಡಿದ್ದಾರೆ. ಅವರು ಬಾಲಿವುಡ್ ನಟಿ ದಿಯಾ ಮಿರ್ಜಾ (Dia Mirza) ಅವರ ಪತಿ ವೈಭವ್ ರೇಖಿ (Vaibhav Rekhi)  ಅವರ ಸಂಬಂಧಿ (Relative) ಕೂಡ ಹೌದು. 

48

ಪೂಜಾ ಈ ವರ್ಷದ ಆರಂಭದಲ್ಲಿ ದಿಯಾರನ್ನು ತನ್ನ ಕುಟುಂಬಕ್ಕೆ ಸ್ವಾಗತಿಸುತ್ತಿದ್ದರು. ಪೂಜಾ ತನ್ನ ಇನ್‌ಸ್ಟಾಗ್ರಾಮ್ (instagram) ಪೇಜ್‌ನಲ್ಲಿ 'ನಮ್ಮ ಕ್ರೇಜಿ ಕುಟುಂಬಕ್ಕೆ (Crazy Family) ಸ್ವಾಗತ @diamirzaofficial ನಾವೆಲ್ಲರೂ ನಿನ್ನನ್ನು ಪ್ರೀತಿಸುತ್ತೇವೆ,' ಎಂದು ಬರೆದು ಕೊಂಡಿದ್ದರು. 

58

ಪೂಜಾ ಶಾರುಖ್ ಖಾನ್ ವೇಳಾಪಟ್ಟಿಯನ್ನು ನೋಡಿಕೊಳ್ಳುತ್ತಾರೆ ಮತ್ತು ಅವರು ಹೋದಲ್ಲೆಲ್ಲಾ ಜೊತೆಯಲ್ಲಿಯೇ ಹೋಗುತ್ತಾರೆ. ಪೂಜಾ ಅವರು SRK ಯ ಐಪಿಎಲ್ (IPL) ತಂಡವಾದ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ಅನ್ನು ಸಹ ನಿರ್ವಹಿಸುತ್ತಿದ್ದರು ಎಂದು ವರದಿಯಾಗಿದೆ. 

68

ಪೂಜಾ ದದ್ಲಾನಿ ಎಸ್‌ ಆರ್‌ ಕೆ ಮತ್ತು ದೀಪಿಕಾ ಪಡುಕೋಣೆ (Deepika Padukone) ಜೊತೆಯಾಗಿ ನಟಿಸಿರುವ  ಚೆನ್ನೈ ಎಕ್ಸ್‌ಪ್ರೆಸ್ (Chennai Express)  ಸೂಪರ್‌ ಹಿಟ್ ಸಿನಿಮಾದ ಕೋ ಪ್ರೋಡ್ಯುಸರ್‌ ಸಹ ಆಗಿದ್ದರು ಎನ್ನಲಾಗಿದೆ.

78

ವಿವಿಧ ವೆಬ್‌ಸೈಟ್‌ಗಳ (Websites) ಪ್ರಕಾರ, ಪೂಜಾ ಅವರ ಅಂದಾಜು ನಿವ್ವಳ ಮೌಲ್ಯವು  2020 ರಲ್ಲಿ  ಸುಮಾರು 500,000 ಡಾಲರ್‌ನಿಂದ 1 ಮಿಲಿಯನ್‌ ಡಾಲರ್‌ಗೆ ಏರಿಕೆಯಾಗಿದೆ.ಇತರೆ ಸವಲತ್ತುಗಳ ಜೊತೆಗೆ ಆಕೆಯ ಒಟ್ಟು ನಿವ್ವಳ ಮೌಲ್ಯವು  6 ಮಿಲಿಯನ್ ಡಾಲರ್‌ ಎಂದು ಅಂದಾಜಿಸಲಾಗಿದೆ.

88

ಕೆಲವು ತಿಂಗಳ ಹಿಂದೆ, ಪೂಜಾ ದಡ್ಲಾನಿ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ  ತಮಿಳು ಚಿತ್ರ ನಿರ್ಮಾಪಕ ಅಟ್ಲೀಯವರಿಗೆ ಟೆಸ್ಟ್‌ ಶೂಟಿಂಗ್‌ಗಾಗಿ  ರಕ್ಷಣಾತ್ಮಕ ಸಾಧನಗಳನ್ನು ಒದಗಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. 'ಸೆಟ್‌ಗಳಲ್ಲಿ ನನ್ನ ಹೆಚ್ಚುವರಿ ರಕ್ಷಣಾತ್ಮಕ ಸಾಧನಕ್ಕಾಗಿ  ಮತ್ತು ನನ್ನನ್ನು ಕೂಲ್‌ ಹಾಗೂ ವಿಭಿನ್ನವಾಗಿ ಕಾಣುವಂತೆ ಮಾಡಿದಕ್ಕೆ ಧನ್ಯವಾದಗಳು ಅಟ್ಲೀ' ಎಂದು ಪೂಜಾ ಬರೆದಿದ್ದಾರೆ. 

click me!

Recommended Stories