Thalapathy Vijay ಗುಣಕ್ಕೆ ಫುಲ್‌ ಫಿದಾ ಈ Katrina Kaif

Published : Apr 13, 2022, 06:11 PM IST

ಊಟಿಯಲ್ಲಿ, ಥಲಪತಿ ವಿಜಯ್ (Thalapathy Vijay) ಅವರು ಬಾಲಿವುಡ್ ನಟಿ ಕತ್ರಿನಾ ಕೈಫ್ (Katrina Kaif) ಅವರೊಂದಿಗೆ ಟಿವಿ ಜಾಹೀರಾತನ್ನು ಶೂಟ್ ಮಾಡಬೇಕಾಗಿತ್ತು. ನಿರ್ಮಾಣದ ಸಮಯದಲ್ಲಿ ಅಲ್ಲಿ ಇಂಟರೆಸ್ಟಿಂಗ್‌  ಪರಿಸ್ಥಿತಿ ಸಂಭವಿಸಿತ್ತು ಎಂದು ಕತ್ರಿನಾ ಕೈಫ್‌ (Katrina Kaif) ನೆನಪಿಸಿಕೊಂಡಿದದ್ರು.

PREV
16
Thalapathy Vijay ಗುಣಕ್ಕೆ ಫುಲ್‌ ಫಿದಾ ಈ Katrina Kaif

ಅನೈತಾ ಶ್ರಾಫ್ ಅದಾಜಾನಿಯಾ ಅವರ ಚಾಟ್ ಶೋನಲ್ಲಿ ಸೂಪರ್‌ಸ್ಟಾರ್ ವಿಜಯ್ (Thalapathy Vijay) ತಮಿಳು ಟಿವಿ ಜಾಹೀರಾತನ್ನು ಚಿತ್ರೀಕರಿಸಿದಾಗ ಕತ್ರಿನಾ ಕೈಫ್ ಅವರು ತಮ್ಮ ವೃತ್ತಿಜೀವನದ (Career) ಆರಂಭಿಕ ವರ್ಷಗಳಲ್ಲಿ ಸಂಭವಿಸಿದ ಒಂದು ಸುಂದರ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.

26

ಹಳೆಯ ಕೋಕಾ-ಕೋಲಾ (Coca Cola) ಜಾಹೀರಾತಿನಲ್ಲಿ ಕತ್ರಿನಾ ಬ್ಯಾಲೆ ಮಾಡುವುದನ್ನು ಮತ್ತು ವಿಜಯ್ ನಟಿಯ ಸ್ಟೆಪ್ಸ್‌ ಕಾಪಿ ಮಾಡುವುದು ಕಂಡುಬಂದಿತು. ಆ ಶಾಟ್ ಮುಗಿದ ನಂತರ ವಿಜಯ್ ತಾಳ್ಮೆಯಿಂದ ನಟಿಗೆ ಬಾಯ್‌  ಹೇಳಲು ಕಾದಿದ್ದರಂತೆ. ಆಗ ಕತ್ರಿನಾ ಫೋನ್‌ನಲ್ಲಿ ಬ್ಯುಸಿ ಇದ್ದರಂತೆ.  

36

ಈ ಘಟನೆ ಹತ್ತು ವರ್ಷಗಳ ಹಿಂದೆ ಸಂಭವಿಸಿತ್ತು. ಆಗ ಕತ್ರಿನಾ ಕೈಫ್‌ ಅವರು ಇನ್ನೂ ಸ್ಟಾರ್‌ ಆಗಿರಲಿಲ್ಲ ಮತ್ತು ತಮಿಳು ನಟ ವಿಜಯ್‌ ಆಗಲೇ ಕಾಲಿವುಡ್‌ನ ಸ್ಟಾರ್‌ (Kollywood Star) ಆಗಿದ್ದರು.  

46

'ಊಟಿಯಲ್ಲಿ ಚಿತ್ರೀಕರಣ ನಡೆಸುತ್ತಿದ್ದಾಗ ನಾವು ನೆಲದ ಮೇಲೆ ಕುಳಿತಿದ್ದೆ. ನಾನು ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ನನ್ನ ಮುಂದೆ ಒಂದು ಜೋಡಿ ಪಾದಗಳನ್ನು ಗಮನಿಸಿದೆ. ಅದು ಯಾರೋ ನಿಂತಿದ್ದಾರೆಂದುಕೊಂಡು, ತಲೆಕೆಡಿಸಿಕೊಳ್ಳಲಿಲ್ಲ. ಸ್ವಲ್ಪ ಸಮಯದ ನಂತರವೂ  ಇನ್ನೂ ಆ ಪಾದಗಳು ಅಲ್ಲೇ ಇದ್ದವು. ಕೊನೆಗೆ, ನಾನು ತಲೆ ಎತ್ತಿ ನೋಡಿದೆ.  ಆ ವ್ಯಕ್ತಿ ಹೆಸರು ವಿಜಯ್ ಮತ್ತು ಅವರು ದಕ್ಷಿಣದ  ಸೂಪರ್‌ಸ್ಟಾರ್' ಎಂದು ಕತ್ರಿನಾ ಹೇಳಿದರು. 

56

ವಿಜಯ್ ತುಂಬಾ ವಿನಯವಂತರು. ಅವರು ನನಗೆ ಬೈ ಹೇಳಲು  ಕಾಯುತ್ತಿದ್ದರು ಮತ್ತು ನನಗೆ ತೊಂದರೆ ನೀಡಲು ಬಯಸಲಿಲ್ಲ' ಎಂದಿದ್ದಾರೆ  ಕತ್ರಿನಾ ಸೇರಿಸಿದ್ದಾರೆ. 'ವಿಜಯ್ ಅವರ ವಿನಮ್ರ ಮತ್ತು ಡೌನ್ ಟು ಅರ್ಥ್‌ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ' ಎಂದು ಕತ್ರಿನಾ ಹೇಳುತ್ತಾರೆ.

66

ಇದು ಕೇವಲ ಕತ್ರಿನಾ ಒಬ್ಬರ ಅಭಿಪ್ರಾಯವಲ್ಲ. ಪ್ರಿಯಾಂಕಾ ಚೋಪ್ರಾದಿಂದ ನಯನತಾರಾ ವರೆಗೆ ಅವರೊಂದಿಗೆ ಕೆಲಸ ಮಾಡಿದ ಎಲ್ಲಾ ಮಹಿಳಾ ನಟರು ಸ್ಟಾರ್‌ ಬಗ್ಗೆ ಒಂದೇ  ಅಭಿಪ್ರಾಯ ಹೊಂದಿದ್ದಾರೆ ಮತ್ತು ಯಾವಾಗಲೂ ನಟನ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿರುತ್ತಾರೆ.

Read more Photos on
click me!

Recommended Stories