ಬಪ್ಪನ ಆಶೀರ್ವಾದದೊಂದಿಗೆ Alia-Ranbir ಮದುವೆಯ ಆಚರಣೆಗಳು ಪ್ರಾರಂಭ!

Published : Apr 13, 2022, 04:53 PM IST

ಆಲಿಯಾ ಭಟ್-ರಣಬೀರ್ ಕಪೂರ್ (Alia bhatt-Ranbir kapoor) ಮದುವೆಯ ಸಮಯ ಹತ್ತಿರದಲ್ಲಿದೆ. ಏಪ್ರಿಲ್ 13 ರಿಂದ ಅಂದರೆ ಇಂದಿನಿಂದ ವಿವಾಹ ವಿಧಿವಿಧಾನಗಳು ಆರಂಭವಾಗಲಿವೆ. ಮದುವೆಯ ಪೂರ್ವ ಸಂಭ್ರಮಾಚರಣೆಗೂ ಮುನ್ನ ಕಪೂರ್ ಕುಟುಂಬ ಮತ್ತು ಭಟ್ ಕುಟುಂಬದವರು ಒಟ್ಟಾಗಿ ಗಣಪತಿ ಪೂಜೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ‘ವಾಸ್ತು’ದಲ್ಲಿ ಗಣೇಶ ಪೂಜೆ ಇಡಲಾಗಿದೆ. ಮಾಧ್ಯಮಗಳ ವರದಿಗಳ ಪ್ರಕಾರ ಗಣೇಶ ಪೂಜೆಯ ನಂತರ ಮೆಹಂದಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1.30ರ ಸುಮಾರಿಗೆ ಆಲಿಯಾ ಭಟ್ ಕೈಗೆ ಮೆಹಂದಿ ಹಚ್ಚಲಾಗುತ್ತದೆ. 

PREV
17
ಬಪ್ಪನ ಆಶೀರ್ವಾದದೊಂದಿಗೆ Alia-Ranbir ಮದುವೆಯ ಆಚರಣೆಗಳು ಪ್ರಾರಂಭ!

ಬೆಳಗ್ಗೆ 11 ಗಂಟೆ ಸುಮಾರಿಗೆ ‘ವಾಸ್ತು’ದಲ್ಲಿ ಗಣೇಶ ಪೂಜೆ ಇಡಲಾಗಿದೆ. ಮಾಧ್ಯಮಗಳ ವರದಿಗಳ ಪ್ರಕಾರ ಗಣೇಶ ಪೂಜೆಯ ನಂತರ ಮೆಹಂದಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1.30ರ ಸುಮಾರಿಗೆ ಆಲಿಯಾ ಭಟ್ ಕೈಗೆ ಮೆಹಂದಿ ಹಚ್ಚಲಾಗುತ್ತದೆ. 

27

ಮೆಹಂದಿ ಹಚ್ಚಲು ನಟಿ ಖ್ಯಾತ ವಿನ್ಯಾಸಕಿ ವೀಣಾ ನಾಗ್ಡಾ ಅವರನ್ನು ಆಯ್ಕೆ ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಬದಲಾಗಿ ಬೇರೆಯವರಿಂದ ಮೆಹಂದಿ ಹಚ್ಚಿಸಿಕೊಳ್ಳುತ್ತಿದ್ದಾರೆ. ಆದರೆ, ರಣಬೀರ್ ಹೆಸರನ್ನು ತನ್ನ ಕೈಯಲ್ಲಿ ಬರೆಯಲು ನಟಿ ಯಾರನ್ನು ಆಯ್ಕೆ ಮಾಡಿದ್ದಾರೆ ಎಂಬುದು ತಿಳಿದಿಲ್ಲ.

37

ಮದುವೆಯ ದಿನಾಂಕದ ಬಗ್ಗೆ ಇನ್ನೂ ಗೊಂದಲವಿದೆ. ಆಲಿಯಾ ಮತ್ತು ರಣಬೀರ್ ಕಪೂರ್ ಯಾವ ದಿನ ವಿವಾಹವಾಗಲಿದ್ದಾರೆ ಎಂಬುದು ಇನ್ನೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ. ಕೆಲವರು  ಏಪ್ರಿಲ್ 14 ಎಂದು ಹೇಳುತ್ತಿದ್ದರೆ, ಕೆಲವು ವರದಿಗಳಲ್ಲಿ ಏಪ್ರಿಲ್ 15 ರ ದಿನಾಂಕ ಹೊರಬರುತ್ತಿದೆ.

47

 ಇಷ್ಟೇ ಅಲ್ಲ, ನಟಿಯ ಮಲಸಹೋದರ ರಾಹುಲ್ ಭಟ್ ಮದುವೆ ಮುಂದೆ ಹೋಗಲಿದೆ. ಮಾಧ್ಯಮಗಳ ಉಪಸ್ಥಿತಿಯಿಂದ ಮದುವೆಯ ದಿನಾಂಕವನ್ನು ಮುಂದೂಡಲಾಗಿದೆ  ಎಂದು ಹೇಳುವ ಮೂಲಕ ಗೊಂದಲವನ್ನು ಹೆಚ್ಚಿಸಿದ್ದಾರೆ.  ಇದರೊಂದಿಗೆ ಮದುವೆ ಸ್ಥಳವನ್ನೂ ಬದಲಾಯಿಸಲಾಗಿದೆ.

 

57

ಮದುವೆಗೆ ಬರೋಬ್ಬರಿ 28 ಮಂದಿ ಮಾತ್ರ ಬರಲಿದ್ದಾರೆ ಎಂದು ಹೇಳಿದ್ದಾರೆ. 200 ಬೌನ್ಸರ್‌ಗಳನ್ನು ನಿಯೋಜಿಸಲಾಗುವುದು  ಮತ್ತು ಈ ಮದುವೆಗೆ  ಬರುವ ಪ್ರತಿಯೊಬ್ಬ ಅತಿಥಿಗೂ ಫೋನ್ ಸ್ವಿಚ್ ಆಫ್ ಮಾಡುವಂತೆ ಹೇಳಲಾಗಿದೆ ಎಂದು ರಾಹುಲ್ ಹೇಳಿದ್ದಾರೆ.

67

ರಣಬೀರ್ ಕಪೂರ್ ಮತ್ತು ಆಲಿಯಾ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ತಿಳಿದೇ ಇದೆ. ಸಂದರ್ಶನವೊಂದರಲ್ಲಿ, ಕೊರೋನಾ ಬರದಿದ್ದರೆ, 2020 ರಲ್ಲಿಯೇ ಆಲಿಯಾಳನ್ನು ಮದುವೆಯಾಗುತ್ತಿದ್ದೆ ಎಂದು ನಟ ಹೇಳಿದ್ದರು. 

77

ಇತ್ತೀಚೆಗೆ ನೀತು ಕಪೂರ್ ಸಂದರ್ಶನವೊಂದರಲ್ಲಿ ಆಲಿಯಾ ತುಂಬಾ ಒಳ್ಳೆಯ ಹುಡುಗಿ. ಇಬ್ಬರನ್ನೂ ನೋಡಿದರೆ ಮೇಡ್ ಫಾರ್ ಈಚ್ ಅದರ್ ಅನ್ನಿಸುತ್ತೆ ಎಂದು ಹೇಳಿದ್ದರು. ಆದರೂ ನೀತು ಮದುವೆ ದಿನಾಂಕದ ಬಗ್ಗೆ ಮೌನ ವಹಿಸಿದ್ದಾರೆ. ಇಂದಿನ ಮಕ್ಕಳ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ ಎಂದರು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories