12 ದಿನ ಸ್ನಾನವೇ ಮಾಡಿರ್ಲಿಲ್ಲವಂತೆ ಆಮೀರ್ ಖಾನ್? ಹುಟ್ಟಿದಬ್ಬದಂದು ರಿವೀಲ್ ಆಯ್ತು ಸತ್ಯ

Published : Mar 14, 2023, 04:06 PM IST

ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತಿ ಪಡೆದಿರುವ ಆಮೀರ್ ಖಾನ್ (Aamir Khan) ಅವರಿಗೆ 58 ವರ್ಷ ತುಂಬಿದೆ. 14 ಮಾರ್ಚ್ 1965 ರಂದು ಮುಂಬೈನಲ್ಲಿ ಜನಿಸಿದ ಆಮೀರ್ ವೃತ್ತಿ ಜೀವನದಲ್ಲಿ ಒಂದಕ್ಕಿಂತ ಹೆಚ್ಚು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ಆಮೀರ್‌ ಜೀವನಕ್ಕೆ ಸಂಬಂಧಪಟ್ಟ ಇಂಟರೆಸ್ಟೆಂಗ್‌ ವಿಷಯಗಳು ಇಲ್ಲಿವೆ.

PREV
110
12 ದಿನ ಸ್ನಾನವೇ ಮಾಡಿರ್ಲಿಲ್ಲವಂತೆ ಆಮೀರ್ ಖಾನ್? ಹುಟ್ಟಿದಬ್ಬದಂದು ರಿವೀಲ್ ಆಯ್ತು ಸತ್ಯ

ಆಮೀರ್ ಖಾನ್ ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ್ದಾರೆ . ಅವರು ತಮ್ಮ 8 ನೇ ವಯಸ್ಸಿನಲ್ಲಿ ಯಾದೋನ್ ಕಾ ಬಾರಾತ್ ಚಿತ್ರದ ಮೂಲಕ ಬಾಲ ಕಲಾವಿದರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

210

ಇಂದು ಸೂಪರ್‌ಸ್ಟಾರ್‌ ಆಗಿರುವ ಆಮೀರ್‌ ಖಾನ್‌ ಜರ್ನಿ ಸುಲಭವಾಗಿರಲಿಲ್ಲ. ಅವರು ತಮ್ಮ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದಾರೆ.  

310

ಆಮೀರ್ ಖಾನ್ ಇಂದು ಕೋಟಿಗಳ ಒಡೆಯನಾಗಿರಬಹುದು, ಆದರೆ ಅವರ ಬಾಲ್ಯವು ತುಂಬಾ  ಕಷ್ಷಟದಲ್ಲಿ ಕಳೆದಿದೆ ಎಂದು ಕೆಲವೇ ಜನರಿಗೆ ತಿಳಿದಿದೆ. 

410

ಅವರ ತಂದೆ ತಾಹಿರ್ ಹುಸೇನ್ ಅವರು ಚಲನಚಿತ್ರ ನಿರ್ಮಾಪಕರಾಗಿದ್ದರು ಮತ್ತು ಅವರ ಅನೇಕ ಚಿತ್ರಗಳು ನಿರಂತರವಾಗಿ ಸೋತು ಸಾಲದಲ್ಲಿದ್ದರು ಎಂದು ಹೇಳಲಾಗುತ್ತದೆ. ಇದರಿಂದ ಕುಟುಂಬ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಯಿತು.

510

ಆಮೀರ್ ಖಾನ್ ಅವರ ಬಾಲ್ಯ ಭಯದ ನೆರಳಿನಲ್ಲಿ ಕಳೆದಿದೆ ಎಂದು ಹೇಳಲಾಗುತ್ತದೆ. ತಂದೆಯ ಬಡತನವನ್ನು ಕಂಡು ಶಾಲೆಯ ಶುಲ್ಕ ಕಟ್ಟದಿದ್ದರೆ  ತೆಗೆದು ಹಾಕುತ್ತಾರೆ ಎಂದು ಕ್ಷಣ ಕ್ಷಣವೂ ಭಯಪಡುತ್ತಿದ್ದರು. 

610

ಅಂದಹಾಗೆ, ತಾಹಿರ್ ತನ್ನ ಮಗ ಇಂಜಿನಿಯರ್ ಅಥವಾ ಡಾಕ್ಟರ್ ಆಗಬೇಕೆಂದು ಬಯಸಿದ್ದರು. ಆದರೆ ಆಮೀರ್‌ ಖಾನ್‌ ಆಯ್ಕೆ ಮಾಡಿಕೊಂಡಿದ್ದು ಸಿನಿಮಾ.

710

ಆಮೀರ್ ಖಾನ್ ಒಬ್ಬಳನ್ನು ಪ್ರೀತಿಸುತ್ತಿದ್ದರುನು ಮತ್ತು ಅವರು ಆ ಹುಡುಗಿಯನ್ನು ಪ್ರೀತಿಸಿ ಮೋಸ ಹೋದಾಗ ತಲೆ ಬೋಳಿಸಿಕೊಂಡಿದ್ದರು. ಸಿನಿಮಾಗಾಗಿ ಹೀಗೆ ಮಾಡಿದ್ದಾರೆ ಎಂದು ಹಲವರು ಅಂದುಕೊಂಡಿದ್ದರು. ಆದರೆ ಸಿಮಿ ಅಗ್ರವಾಲ್ ಅವರ ಚಾಟ್ ಶೋನಲ್ಲಿ ಈ ವಿಷಯವವನ್ನು ಆಮೀರ್ ಸ್ವತಃ ವಿವರಿಸಿದ್ದಾರೆ. ಇದು ನಡೆದದ್ದು ಸುಮಾರು 1983 ರಲ್ಲಿ. 

810

ಆಮೀರ್ ಖಾನ್ ತಮ್ಮ ನಟನಾ ವೃತ್ತಿಜೀವನವನ್ನು ಹೋಳಿ (Holi) ಚಿತ್ರದೊಂದಿಗೆ ಪ್ರಾರಂಭಿಸಿದರೂ, 1988 ರ ಚಲನಚಿತ್ರ ಖಯಾಮತ್ ಸೆ ಕಯಾಮತ್ ತಕ್ ಸಿನಿಮಾದಿಂದ ಅವರು ಗುರುತಿಸಲ್ಪಟ್ಟರು. ಚಿತ್ರ ಬಿಡುಗಡೆಯೊಂದಿಗೆ ಎಲ್ಲಾ ದಾಖಲೆಗಳನ್ನು ಮುರಿದು  ಬ್ಲಾಕ್ಬಸ್ಟರ್ ಎಂದು ಸಾಬೀತಾಯಿತು. ಚಿತ್ರದಲ್ಲಿಆಮೀರ್ ಜೊತೆ ಜೂಹಿ ಚಾವ್ಲಾ ಪ್ರಮುಖ ಪಾತ್ರದಲ್ಲಿದ್ದರು.
 

 

910

ಗುಲಾಮ್ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ಚಿತ್ರೀಕರಿಸಲು ಆಮೀರ್ ಖಾನ್ ಸುಮಾರು 12 ದಿನಗಳ ಕಾಲ ಸ್ನಾನ ಮಾಡಲಿಲ್ಲ ಎಂಬ ವಿಚಯ ಸಖತ್‌ ಪ್ರಸಿದ್ಧವಾಗಿದೆ. ವಾಸ್ತವವಾಗಿ, ಈ ದೃಶ್ಯದಲ್ಲಿ ಅವರು ಖಳನಾಯಕನನ್ನು ಹೊಡೆಯಬೇಕಾಗಿತ್ತು ಮತ್ತು ಇದಕ್ಕಾಗಿ ಅವರು ವಿಕಾರವಾಗಿ ಕಾಣಬೇಕಾಗಿತ್ತು  ಆ ಕಾರಣದಿಂದ ಅವರು 12 ದಿನಗಳ ಕಾಲ ಸ್ನಾನ ಮಾಡಲಿಲ್ಲವಂತೆ. 
 

1010

ಭಾರತದ 5 ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಲ್ಲಿ 3 ಆಮೀರ್ ಖಾನ್ ಅವರ ಸಿನಿಮಾಗಳಿವೆ. 2016 ರಲ್ಲಿ ದಂಗಲ್ 2024 ಕೋಟಿ ಗಳಿಸಿದೆ, 2017 ರಲ್ಲಿ ಸೀಕ್ರೆಟ್ ಸೂಪರ್ ಸ್ಟಾರ್ 858 ಕೋಟಿ ಗಳಿಸಿದೆ ಮತ್ತು ಪಿಕೆ 769 ಕೋಟಿ ಗಳಿಸಿದೆ.  

Read more Photos on
click me!

Recommended Stories