ಬ್ಲ್ಯಾಕ್ ಅಂಡ್ ವೈಟ್ ಸೀರೆಯಲ್ಲಿ ರಾಣಿ ಮುಖರ್ಜಿಯ ರಾಯಲ್ ನಡಿಗೆ; ಫೋಟೋ ವೈರಲ್

Published : Mar 14, 2023, 02:22 PM IST

 ಶ್ರೀಮತಿ ಚಟರ್ಜಿ Vs ನಾರ್ವೆ ಸಿನಿಮಾ ರಿಲೀಸ್‌ ದಿನ ಭರ್ಜರಿಯಾಗಿ ಕಾಣಿಸಿಕೊಂಡ ರಾಣಿ ಮುಖರ್ಜಿ. ಸೀರೆ ಎಷ್ಟು ಚಂದ ಎಂದ ನೆಟ್ಟಿಗರು....

PREV
18
ಬ್ಲ್ಯಾಕ್ ಅಂಡ್ ವೈಟ್ ಸೀರೆಯಲ್ಲಿ ರಾಣಿ ಮುಖರ್ಜಿಯ ರಾಯಲ್ ನಡಿಗೆ; ಫೋಟೋ ವೈರಲ್

ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಂಡು ವರ್ಸಟೈಲ್ ನಟಿ ಎಂದು ಹೆಸರು ಮಾಡಿರುವ ಬಾಲಿವುಡ್ ಡೀವಾ ರಾಣಿ ಮುಖರ್ಜಿ ಬ್ಲ್ಯಾಕ್ ಆಂಡ್ ವೈಟ್ ಸೀರೆಯಲ್ಲಿ ಮಿಂಚಿದ್ದಾರೆ. 

28

 ಶ್ರೀಮತಿ ಚಟರ್ಜಿ Vs ನಾರ್ವೆ ಚಿತ್ರದ ಮೂಲಕ ರಾಣಿ ಮುಖರ್ಜಿ ಬಿ-ಟೌನ್‌ಗೆ ಭರ್ಜರಿಯಾಗಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ಸಿನಿಮಾ ಅದ್ಧೂರಿಯಾಗಿ ತೆರೆ ಕಾಣಲು ಸಜ್ಜಾಗಿದೆ.

38

ಸಿನಿಮಾ ರಿಲೀಸ್‌ ದಿನ ಬ್ಲ್ಯಾಕ್ ಅಂಡ್ ವೈಟ್ ಡಿಸೈನರ್‌ ಸೀರೆಯಲ್ಲಿ ರಾಣಿ ಮುಖರ್ಜಿ ಮಿಂಚಿದ್ದಾರೆ. ರಾಣಿಗೆ ವಯಸ್ಸೇ ಆಗುವುದಿಲ್ಲ ಎಂದು ನೆಟ್ಟಿಗರ ಕಾಮೆಂಟ್ ಮಾಡುತ್ತಿದ್ದಾರೆ. 

48

ರಾಣಿ ಬ್ಲ್ಯಾಕ್ ಅಂಡ್ ವೈಟ್ ಮತ್ತೊಂದು ವಿಶೇಷತೆ ಏನೆಂದರೆ ಸೀರೆ ಮೇಲೆ ಅಮ್ಮಾ/ಮಾ ಎಂದು ಬರೆಯಲಾಗಿದೆ. ತಮ್ಮ ಪಾತ್ರಕ್ಕೆ ಈ ಔಟ್‌ಫಿಟ್‌ ಸೂಕ್ತವಾಗಿದೆ.

58

 ಚಿತ್ರದ ಪ್ರೀಮಿಯರ್‌ ಶೊನಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಮಾರ್ಚ್‌ 17ರಂದು ಬಿಡುಗಡೆ ಕಾಣುತ್ತಿರುವ ಈ ಚಿತ್ರವನ್ನು ರಾಣಿ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಖಾಸಗಿ ಪ್ರಚಾರದಲ್ಲಿ ರಿಯಲ್ ಸಾಗರಿಕಾ ಚಟರ್ಜಿ ಅವರನ್ನು ರಾಣಿ ಭೇಟಿ ಮಾಡಿ ಭಾವುಕರಾಗಿದ್ದಾರೆ.

68

ಅನುರೂಪ್ ಭಟ್ಟಾಚಾರ್ಯ (Anup Bhattacharya) ಮತ್ತು ಸಾಗರಿಕಾ ಭಟ್ಟಾಚಾರ್ಯ (Sagarika Bhattacharya) ಎಂಬ ದಂಪತಿಯ ನೈಜ ಜೀವನವನ್ನು ಇದು ಆಧರಿಸಿದೆ ಎಂದು ಚಿತ್ರದ ಟ್ರೇಲರ್ ಉಲ್ಲೇಖಿಸಿದೆ.2011 ರಲ್ಲಿ, ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡುತ್ತಾರೆ. 

78

ಮೂರು ವರ್ಷದ ಮಗ  ಅಭಿಜ್ಞಾನ್ (Abhijnana) ಮತ್ತು ಒಂದು ವರ್ಷದ ಮಗಳು ಐಶ್ವರ್ಯಳನ್ನು  ಕರೆದುಕೊಂಡು ಹೋಗುತ್ತಾರೆ.  ಮಕ್ಕಳಿಗೆ 18 ವರ್ಷ ತುಂಬುವವರೆಗೂ ಅಪ್ಪ-ಅಮ್ಮಂದಿರನ್ನು ಭೇಟಿ ಮಾಡಲು ಮಕ್ಕಳಿಗೆ ಅನುಮತಿ ನೀಡುವುದಿಲ್ಲ.

88

ತಾಯಿ ಭಾವನೆಗಳನ್ನು ರಾಣಿ ಅದ್ಭುತವಾಗಿ ಅಭಿನಯಿಸಿದ್ದಾರೆ. ಭಾವನೆಗಳೇ ಇಲ್ಲದ ವ್ಯಕ್ತಿಯೂ ಈ ಸಿನಿಮಾ ನೋಡಿ ಫಿದಾ ಆಗುತ್ತಾರೆಂದು ಪಾಸಿಟಿವ್ ಕಾಮೆಂಟ್‌ಗಳು ಕೇಳಿ ಬರುತ್ತಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories