ವಿಜಯ್ ದೇವರಕೊಂಡ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮತ್ತೆ ಸುದ್ದಿಯಲ್ಲಿದ್ದಾರೆ. ವಿಜಯ್ ತನ್ನ ಇನ್ಸ್ಟಾಗ್ರಾಂನಿಂದ ಪತ್ನಿ ರಶ್ಮಿಕಾ ಆನ್ಫಾಲೋ ಮಾಡಿರುವುದು ಸೋಶಃಇಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ ನಡೆದಿದೆ. ಸದ್ಯದಲ್ಲೇ ವಿಚ್ಛೇದನ ಪಡೆಯಲಿದ್ದಾರಾ? ಫ್ಯಾನ್ಸ್ ಅನುಮಾನ ಸರಿಯಾ?
ವಿಜಯ್ ದೇವರಕೊಂಡ ಇನ್ಸ್ಟಾಗ್ರಾಮ್ ಆನ್ಫಾಲೋ! ಏನು ಸಂದೇಶ?
ಸಿನಿಮಾ ನಟ-ನಟಿಯರು ವಿಚ್ಛೇದನಕ್ಕೆ ಮುನ್ನ ಹಲವು ಸಿದ್ಧತೆಗಳನ್ನ ಮಾಡಿಕೊಳ್ತಾರೆ. ಅದರಲ್ಲೂ ಮೊದಲಿಗೆ ಇನ್ಸ್ಟಾಗ್ರಾಂ ಸೇರಿದಂತೆ ಎಲ್ಲ ಸೋಷಿಯಲ್ ಮೀಡಿಯಾಗಳಲ್ಲಿಂದ ಪರಸ್ಪರ ಅಥವಾ ಇಬ್ಬರಲ್ಲಿ ಒಬ್ಬರು ಆನ್ಫಾಲೋ(Unfollow) ಮಾಡಿಕೊಳ್ಳುವುದು ಸಾಮಾನ್ಯವಾಗಿದೆ.
ಈ ಹಿಂದೆ ಹಲವು ಸೆಲೆಬ್ರಿಟಿಗಳ ಸಂಬಂಧ ಮುರಿದುಬಿದ್ದಾಗ ಈ ರೀತಿ ಆನ್ಫಾಲೋ ಮಾಡಿಕೊಂಡಿದ್ದಾರೆ. ಇದರಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಯಾವಾಗಲೂ ಯಾರು ಯಾರನ್ನ ಆನ್ಫಾಲೋ ಮಾಡ್ಕೊಳ್ತಾರೆ ಎಂಬುದರ ಮೇಲೆ ಅವರ ವೈಯಕ್ತಿಕ ಜೀವನದ ಬಗ್ಗೆ ಚರ್ಚೆ ಹುಟ್ಟುಹಾಕುತ್ತಾರೆ.
28
ರಶ್ಮಿಕಾ ಇನ್ಸ್ಟಾಗ್ರಾಮ್ ಆನ್ಫಾಲೋ, ಫ್ಯಾನ್ಸ್ ಗೆ ಅನುಮಾನ!
ಹೌದು ಇದೀಗ ಅಂತಹದ್ದೇ ಘಟನೆ ನಡೆದಿರೋದು. ಇಲ್ಲಿ ಕಳೆದ ವರ್ಷವಷ್ಟೇ ಮದುವೆಯಾಗಿರೋ, ಮದುವೆಗೆ ಹಚ್ಚಿದ ಮೆಹಂದಿ ಮಾಸದಿರೋ ಈ ನವಜೋಡಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೆಟಿಜನ್ ಗುಲ್ಲೆಬ್ಬಿಸಿದ್ದಾರೆ. ಅದಕ್ಕೆ ಅವರು ಕೊಟ್ಟ ಕಾರಣವಾದರೂ ಏನು ಅಂತೀರಾ? ವಿಜಯ್ ದೇವರಕೊಂಡ ಪತ್ನಿ ರಶ್ಮಿಕಾ ಮಂದಣ್ಣ ಅವರನ್ನ ಆನ್ಫಾಲೋ ಮಾಡಿದ್ದಾರೆಂಬುದು!
ವಿಜಯ್ ದೇವರಕೊಂಡ(Vijay Devarakonda) ಇನ್ಸ್ಟಾಗ್ರಾಮ್(Instagram)ನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ. ಎಷ್ಟೆಂದರೆ ಇದರಲ್ಲಿ ಅವರ ಪತ್ನಿ ರಶ್ಮಿಕಾ ಮಂದಣ್ಣ ಅವರ ಖಾತೆಯನ್ನು ಕೂಡ ಆನ್ಫಾಲೋ ಮಾಡಿರುವುದು, ವಿಜಯ ದೇವರಕೊಂಡ ಅವರ ಇನ್ಸ್ಟಾಗ್ರಾಂ ಫಾಲೋವರ್ ಸಂಖ್ಯೆ ಜೀರೋ ಇರುವುದು ಫ್ಯಾನ್ಸ್ ತಲೆಯಲ್ಲಿ ಅನುಮಾನದ ಹುಳು ಹೊಕ್ಕಂತಾಗಿದೆ.
ಆನ್ಫಾಲೋ ಮಾಡಲಾಗಿದೆ ಎಂಬ ಒಂದೇ ಕಾರಣ ಇಟ್ಕೊಂಡು ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಚರ್ಚೆ ಶುರು ಮಾಡಿದ್ದಾರೆ! ಕೆಲವರಂತೂ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ 'ಮತ್ತೊಂದು ವಿಚ್ಛೇದನಕ್ಕೆ ರೆಡಿ ಆಗ್ತಿದೆ..' ಎಂದೆಲ್ಲ ಬರೆದಿದ್ದಾರೆ. ಅದರರ್ಥ ವಿಜಯ್ ರಶ್ಮಿಕಾ ನಡುವಿನ ಸಂಬಂಧ ಮುರಿದಿದ್ದು ಸದ್ಯದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂಬ ಧಾಟಿಯಲ್ಲಿದೆ.
ವಿಜಯ್ ದೇವರಕೊಂಡ ಪತ್ನಿ ರಶ್ಮಿಕಾ ಮಂದಣ್ಣರನ್ನು ಸೇರಿಸಿ ಯಾರನ್ನೂ ಫಾಲೋ ಮಾಡುತ್ತಿಲ್ಲ, ಇದೊಂದೇ ಕಾರಣ ಇಟ್ಟುಕೊಂಡು ಸೋಷಿಯಲ್ ಮೀಡಿಯಾದಲ್ಲಿ ತರಹೇವಾರಿ ಚರ್ಚೆ ನಡೆಸಲಾಗುತ್ತಿದೆ. ಯಾರನ್ನೂ ಫಾಲೋ ಮಾಡದಿದ್ರೂ ಪತ್ನಿಯನ್ನಾದ್ರೂ ಫಾಲೋ ಮಾಡಬೇಕಿತ್ತು. ಆದರೆ ಪತ್ನಿಯನ್ನ ಕೂಡ ವಿಜಯ್ ದೇವರಕೊಂಡ ಆನ್ಫಾಲೋ ಮಾಡಿರೋದು ಏಕೆ? ಎಂದು ಫ್ಯಾನ್ಸ್ ಊಹಿಸಲು ಶುರು ಮಾಡಿದ್ದಾರೆ.
ಅಲ್ಲದೆ ವಿಜಯ್ ದೇವರಕೊಂಡ ಬಳಿಕ ರಶ್ಮಿಕಾ ಕೂಡ ಅನ್ಫಾಲೋ ಮಾಡಿದ್ದಾರೆ ಎಂದೂ ಅಭಿಮಾನಿಯೊಬ್ಬ ಬರೆದುಕೊಂಡಿದ್ದಾನೆ. 'ಆಘಾತಕಾರಿ! ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಆನ್ಫಾಲೋ ಮಾಡಿಕೊಂಡಿದ್ದಾರೆ, ಇಬ್ಬರ ನಡುವೆ ಏನೋ ಸಮಸ್ಯೆಗಳಿರಬಹುದು ಎಂಬ ವದಂತಿಗಳು ಕೇಳಿಬರುತ್ತಿವೆ' ಅವನ ಪೋಸ್ಟ್ ಕೂಡ ಆಘಾತಕಾರಿಯಾಗಿದೆ.
68
ಪರಸ್ಪರ ಆನ್ಫಾಲೋ ಮಾಡಿದ್ರೆ ಸಂಬಂಧ ಮುರಿದಿದೆ ಅಂತರ್ಥನಾ?
ಆದರೆ ಅವನ ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಮತ್ತೊಬ್ಬ ಫ್ಯಾನ್ಸ್, 'ಅವರು ಈಗ ಆನ್ಫಾಲೋ ಮಾಡಿರೋದಲ್ಲ, ಪ್ರಾರಂಭದಿಂದಲೂ ಪರಸ್ಪರ ಫಾಲೋ ಮಾಡುತ್ತಿರಲಿಲ್ಲ, ಈಗಲೂ ಅಷ್ಟೇ, ಪರಸ್ಪರ ಫಾಲೋ ಮಾಡ್ತಿಲ್ಲ ಅಂದ ಮಾತ್ರಕ್ಕೆ ಅವರ ಸಂಬಂಧದಲ್ಲಿ ಸಮಸ್ಯೆ ಇದೆ ಅಂತಾನಾ? ಸೋಷಿಯಲ್ ಮೀಡಿಯಾದಲ್ಲಿ ಆನ್ಫಾಲೋ ಮಾಡುವುದರ ಮೇಲೆ ಸಂಬಂಧಗಳನ್ನ ನಿರ್ಧರಿಸಬೇಕಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಇನ್ಸ್ಟಾಗ್ರಾಮ್ ಖಾತೆಗಳನ್ನು ಪರಿಶೀಲಿಸಿದಾಗ ಕಂಡಿದ್ದೇನೆಂದರೆ. ವಿಜಯ್ ರಶ್ಮಿಕಾ ಮಂದಣ್ಣರ ಖಾತೆಯಷ್ಟೇ ಅಲ್ಲ, ಯಾರನ್ನೂ ಫಾಲೋ ಮಾಡುತ್ತಿಲ್ಲ . ಆದರೆ ರಶ್ಮಿಕಾ ಮಾತ್ರ ತಮ್ಮ ಪತಿ ವಿಜಯ್ ಅವರನ್ನು ಫಾಲೋ ಮಾಡುತ್ತಿದ್ದಾರೆ.
78
ನನ್ನ ಹೊಟ್ಟೆ ಸವರುತ್ತಾರೆ.. ವಿಜಯ್ ಬಗ್ಗೆ ರಶ್ಮಿಕಾ ಹೇಳಿದ್ದೇನು?
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇತ್ತೀಚೆಗೆ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಕಾಫಿ ವಿತ್ ಕರಣ್ 9 ಕಾರ್ಯಕ್ರಮದಲ್ಲಿ ರಶ್ಮಿಕಾ ತನ್ನನ್ನು ಮದುವೆಯಾಗುವಂತೆ ಸುಮಾರು 100 ಬಾರಿ ಕೇಳಿಕೊಂಡಿದ್ದರು ಎಂದು ವಿಜಯ್ ಹೇಳಿಕೊಂಡಿದ್ದರು. ಈ ಹೇಳಿಕೆಯ ಬಳಿಕ ನಟನನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಟ್ರೋಲ್ ಮಾಡಿದ್ದರು. ಅವರ ಸಂಬಂಧಗಳನ್ನ ಕೆಲವರು ರೆಡ್ಫ್ಲ್ಯಾಗ್ ಎಂದಿದ್ದರು.
88
ಕಾಫಿ ವಿತ್ ಕರಣ್ 9: ಆ ಹೇಳಿಕೆಯಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ ವಿಜಯ್-ರಶ್ಮಿಕಾ
ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ 9 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಶ್ಮಿಕಾ, ವಿಜಯ್ ಅವರನ್ನು ಮದುವೆಯಾಗುವಂತೆ ತಾನು ಒಂದು ವರ್ಷದಿಂದ ಪದೇಪದೆ ಕೇಳಿಕೊಳ್ಳುತ್ತಿದ್ದ ಬಗ್ಗೆ ಮಾತನಾಡಿದ್ದರು. 'ನಾವು ಮದುವೆಯಾಗೋಣ' ಎಂದು ವಿಜಯ್ಗೆ ಹೇಳುತ್ತಿದ್ದುದನ್ನು ನೆನಪಿಸಿಕೊಂಡ ರಶ್ಮಿಕಾ ತಮ್ಮ ಸಂಬಂಧದಲ್ಲಿ ಮದುವೆಯ ವಿಚಾರವಾಗಿ ನಾನೇ ಮೊದಲು ಪ್ರಸ್ತಾಪಿಸಿದ್ದು ಎಂದು ಹೇಳಿಕೊಂಡಿದ್ದರು.
ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದ ವಿಜಯ್, ಈ ವಿಚಾರಕ್ಕಾಗಿ ಜನರು ತಮ್ಮನ್ನು ಟ್ರೋಲ್ ಮಾಡುತ್ತಾರೆ ಎಂಬುದು ತನಗೆ ಗೊತ್ತಿದೆ ಎಂದು ಹೇಳಿದ್ದರು. ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದು ಇಂದಿಗೂ ಆ ಬಗ್ಗೆ ಚರ್ಚೆ, ಟ್ರೋಲ್ ನಡೆಯುತ್ತಲೇ ಇದೆ. ಈ ನಡುವೆ ಇದೀಗ ಆನ್ಫಾಲೋ ವಿಚಾರ ಮುನ್ನಲೆ ತಂದು ವಿಜಯ್-ರಶ್ಮಿಕಾ ಜೋಡಿ ಸದ್ಯದಲ್ಲೇ ವಿಚ್ಛೇದನ ನೀಡಲಿದ್ದಾರೆಂಬ ಗುಲ್ಲೆಬ್ಬಿಸಿರೋ ಈ ಹುಡುಗರಿಗೆ ಏನು ಹೇಳೋಣ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.