ವಿದೇಶದಲ್ಲಿ ನೆಲೆಸಿದ್ದರೂ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಮರೆತಿಲ್ಲ ನಟಿ ಪ್ರಿಯಾಂಕಾ ಚೋಪ್ರಾ. ಲಾಸ್ ಏಂಜಲೀಸ್ನ ತಮ್ಮ ಮನೆಯಲ್ಲಿ ಪತಿ ನಿಕ್ ಜೋನಸ್ ಮತ್ತು ಮಗಳು ಮಾಲ್ತಿ ಮೇರಿ ಜೊತೆ ಮಹಾನವಮಿ ಹಾಗೂ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಬಾಲಿವುಡ್ನ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ವಿದೇಶದಲ್ಲಿ ನೆಲೆಸಿದ್ದರೂ ಭಾರತೀಯ ಸಂಸ್ಕೃತಿಯನ್ನು ಮರೆತಿಲ್ಲ. ಅಮೆರಿಕಾದಲಿ ವಾಸಿಸುತ್ತಿದ್ದರೂ ತಮ್ಮ ಭಾರತೀಯ ಸಂಪ್ರದಾಯಗಳ ನಂಟು ಉಳಿಸಿಕೊಳ್ಳುವುದು ಹೇಗೆ ಎಂಬುದನ್ನು ಪ್ರಿಯಾಂಕಾ ಅವರಿಂದ ಕಲಿಯಬೇಕು. ಇತ್ತೀಚೆಗೆ ನಟಿ ಲಾಸ್ ಏಂಜಲೀಸ್ನ ತಮ್ಮ ಮನೆಯಲ್ಲಿ ಮಹಾನವಮಿ ಮತ್ತು ದಸರಾ ಹಬ್ಬದ ಸಂದರ್ಭದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ.
27
ವಿದೇಶದಲ್ಲಿ ನೆಲೆಸಿದ್ದರೂ ಭಾರತೀಯ ಸಂಸ್ಕೃತಿಯನ್ನು ಮರೆತಿಲ್ಲ
ಪ್ರಿಯಾಂಕಾ ತಮ್ಮ ಪತಿ ನಿಕ್ ಜೋನಸ್ ಮತ್ತು ಮಗಳು ಮಾಲ್ತಿ ಮೇರಿ ಜೊತೆ ಸಂಪೂರ್ಣ ವಿಧಿವಿಧಾನಗಳೊಂದಿಗೆ ಮಹಾನವಮಿ ಮತ್ತು ದಸರಾ ಆಚರಿಸಿದ್ದಾರೆ. ನಟಿ ಮಗಳ ಪಾದಗಳನ್ನು ತೊಳೆಯುತ್ತಿರುವುದು ಕಂಡುಬಂದರೆ, ಮತ್ತೊಂದೆಡೆ ಹೋಮಕುಂಡದ ಮುಂದೆ ಕುಳಿತು ಪೂಜೆ ಸಲ್ಲಿಸುತ್ತಿರುವ ಪ್ರಿಯಾಂಕಾ ಮತ್ತು ನಿಕ್ ಗಮನ ಸೆಳೆದಿದ್ದಾರೆ.
37
ಪ್ರಿಯಾಂಕಾ ಮನೆಯಲ್ಲಿರುವ ದೇವಸ್ಥಾನ
ಇನ್ನು ಪ್ರಿಯಾಂಕಾ ಚೋಪ್ರಾ ಅವರ ಮನೆಯಲ್ಲಿರುವ ದೇವಸ್ಥಾನವು ತನ್ನ ಸರಳತೆ ಮತ್ತು ಭವ್ಯತೆಯಿಂದ ಎಲ್ಲರ ಗಮನ ಸೆಳೆದಿದೆ. ದೇವಸ್ಥಾನದಲ್ಲಿ ಬಿಳಿ ಅಮೃತಶಿಲೆಯಿಂದ ನಿರ್ಮಿಸಲಾದ ಬೃಹತ್ ಶಿವನ ವಿಗ್ರಹವಿದೆ. ಶಾಂತ ಭಂಗಿಯಲ್ಲಿರುವ ಶಿವನ ಈ ವಿಗ್ರಹದ ಹಿಂಭಾಗದಲ್ಲಿ ಗುಲಾಬಿ ಬಣ್ಣದ ಬೌಗೆನ್ವಿಲಿಯಾ ಹೂಗಳಿಂದ ಅಲಂಕಾರ ಮಾಡಲಾಗಿದೆ. ಇದು ಇಡೀ ದೇವಸ್ಥಾನಕ್ಕೆ ಅತ್ಯಂತ ಸುಂದರವಾದ ಲುಕ್ ನೀಡುತ್ತದೆ.
ದೇವಸ್ಥಾನದಲ್ಲಿರುವ ಶಿವನ ವಿಗ್ರಹದ ಸುತ್ತಲೂ ಚಿನ್ನದ ಬಣ್ಣದ ಸ್ಟ್ಯಾಂಡ್ಗಳ ಮೇಲೆ ಮೇಣದಬತ್ತಿಗಳನ್ನು ಇರಿಸಲಾಗಿದೆ. ಇದರ ಜೊತೆಗೆ ದೇವಸ್ಥಾನದಲ್ಲಿ ಗಣೇಶನ ಪುಟ್ಟ ವಿಗ್ರಹ ಮತ್ತು ಪೂಜೆಗೆ ಸಂಬಂಧಿಸಿದ ಇತರ ವಸ್ತುಗಳೂ ಕಾಣಬಹುದು. ಅಮೆರಿಕದಲ್ಲಿ ವಾಸಿಸುತ್ತಿದ್ದರೂ ಪ್ರಿಯಾಂಕಾ ಮತ್ತು ನಿಕ್ ತಮ್ಮ ಮನೆಯಲ್ಲಿ ಭಾರತೀಯ ಹಬ್ಬಗಳು ಹಾಗೂ ಸಂಪ್ರದಾಯಗಳನ್ನು ಸಂಪೂರ್ಣ ವಿಧಿವಿಧಾನಗಳೊಂದಿಗೆ ಆಚರಿಸುತ್ತಾರೆ.
57
ಮಗಳು ಮಾಲ್ತಿಯ ಪಾದಗಳನ್ನು ತೊಳೆದು, ಕನ್ಯಾ ಪೂಜೆ
ಮಹಾನವಮಿ ಪೂಜೆಯ ಅತ್ಯಂತ ಮುದ್ದಾದ ಕ್ಷಣವೆಂದರೆ ಪ್ರಿಯಾಂಕಾ ಮತ್ತು ನಿಕ್ ತಮ್ಮ ಮಗಳು ಮಾಲ್ತಿಯ ಪಾದಗಳನ್ನು ತೊಳೆಯುತ್ತಿರುವುದು. ಫೋಟೋದಲ್ಲಿ ನಿಕ್ ಬೆಳ್ಳಿಯ ತಟ್ಟೆಯಲ್ಲಿ ಮಾಲ್ತಿಯ ಪಾದಗಳನ್ನು ತೊಳೆಯುತ್ತಿರುವುದು ಕಂಡುಬರುತ್ತದೆ. ಇದರ ಜೊತೆಗೆ ಪ್ರಿಯಾಂಕಾ ಕೂಡ ಮಾಲ್ತಿಯ ಪಾದಗಳನ್ನು ಸ್ಪರ್ಶಿಸುತ್ತಿದ್ದಾರೆ,. ಕನ್ಯಾ ಪೂಜೆಯಲ್ಲಿ ಚಿಕ್ಕ ಹೆಣ್ಣುಮಕ್ಕಳನ್ನು ದೇವಿಯ ಸ್ವರೂಪವೆಂದು ಭಾವಿಸಿ ಪೂಜಿಸುವ ಸಂಪ್ರದಾಯವಿದೆ.
67
ಮಾಲ್ತಿ ಮುದ್ದಾದ ಲುಕ್ ವೈರಲ್
ಈ ಸಂದರ್ಭದಲ್ಲಿ ಮಾಲ್ತಿ ಬಿಳಿ ಬಣ್ಣದ ಸುಂದರ ಲೆಹೆಂಗಾ-ಚೋಲಿ ಧರಿಸಿದ್ದು. ಆಕೆಯ ಕುತ್ತಿಗೆಯಲ್ಲಿ 'ಜೈ ಮಾತಾ ದೀ' ಎಂದು ಬರೆದಿರುವ ಕೆಂಪು ಬಣ್ಣದ ದುಪಟ್ಟಾ ಕಾಣಬಹುದು. ಹಣೆಯ ಮೇಲಿನ ಕೆಂಪು ತಿಲಕ ಮತ್ತು ಕೈಗಳಲ್ಲಿನ ಬಳೆಗಳು ಆಕೆಯನ್ನು ಮತ್ತಷ್ಟು ಮುದ್ದಾಗಿ ಕಾಣುವಂತೆ ಮಾಡಿದೆ.
77
ದೇಸಿ ಅವತಾರದಲ್ಲಿ ದೇಸಿ ಗರ್ಲ್
ಪೂಜೆಗಾಗಿ ಪ್ರಿಯಾಂಕಾ ಚೋಪ್ರಾ ತಿಳಿ ಮಿಂಟ್ ಗ್ರೀನ್ ಬಣ್ಣದ ಹೂವಿನ ವಿನ್ಯಾಸವಿರುವ ಅನಾರ್ಕಲಿ ಸೂಟ್ ಧರಿಸಿದ್ದು, ಸಂಪೂರ್ಣವಾಗಿ ದೇಸಿ ಗರ್ಲ್ ಆಗಿ ಕಾಣಿಸಿದ್ದಾರೆ. ಪೂಜೆಗಾಗಿ ಅವರು ಯಾವುದೇ ಮೇಕಪ್ ಇಲ್ಲದೆ ಸಿಂಪಲ್ ಆಗಿ ಕಾಣಿಸಿದ್ದಾರೆ. ಇನ್ನು ನಿಕ್ ಜೋನಸ್ ಕೂಡ ಮಿಂಟ್ ಗ್ರೀನ್ ಬಣ್ಣದ ಕುರ್ತಾದೊಂದಿಗೆ ಬಿಳಿ ಪೈಜಾಮಾ ಧರಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.