ಟೈಗರ್ ಶ್ರಾಫ್‌ನಂತಹ ಮಸ್ಕ್ಯುಲರ್ ಬಾಡಿ ಬೇಕಾ? ಈ ವರ್ಕೌಟ್ ಟಿಪ್ಸ್ ಫಾಲೋ ಮಾಡಿ

Published : Oct 20, 2026, 06:05 PM IST

Tiger Shroff Fitness Secret: ಟೈಗರ್ ಶ್ರಾಫ್‌ನಂತೆ ಮಸ್ಕ್ಯುಲರ್ ಬಾಡಿ ಬೆಳೆಸಲು ಬಯಸುತ್ತೀರಾ? ಅವರ ವರ್ಕೌಟ್ ರೊಟೀನ್‌ನಲ್ಲಿ ಕಾರ್ಡಿಯೋ, ಕಿಕ್‌ಬಾಕ್ಸಿಂಗ್ ಮತ್ತು ಸ್ಟ್ರೆಂತ್ ಟ್ರೈನಿಂಗ್‌ನ ಪಾತ್ರವೇನು ಹಾಗೂ ಫಿಟ್ನೆಸ್‌ಗಾಗಿ ಯಾವೆಲ್ಲಾ ವಿಷಯಗಳ ಬಗ್ಗೆ ಗಮನ ಹರಿಸಬೇಕು ಎಂಬುದನ್ನು ತಿಳಿಯಿರಿ.

PREV
16
ಟೈಗರ್ ಶ್ರಾಫ್‌ನಂತೆ ಮಸಲ್ಸ್ ಬೆಳೆಸುವುದು ಹೇಗೆ?

ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಮೇಲೆ ಕಳೆದ ರಾತ್ರಿ ಮೂವರು ಬೈಕ್ ಸವಾರರು ಗುಂಡು ಹಾರಿಸಲು ಯತ್ನಿಸಿದ್ದು, ಈ ಘಟನೆಯಲ್ಲಿ ಅವರ ಚಾಲಕ ಮತ್ತು ಅಭಿಮಾನಿಗಳು ಗಾಯಗೊಂಡಿದ್ದಾರೆ ಎನ್ನುವ ವಿಷಯ ನಿಮಗೆ ಗೊತ್ತೇ ಇದೆ. ಟೈಗರ್ ಶ್ರಾಫ್ ತಮ್ಮ ಫಿಟ್ನೆಸ್, ಮಸ್ಕ್ಯುಲರ್ ಬಾಡಿ ಮತ್ತು ಅದ್ಭುತ ಆ್ಯಕ್ಷನ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ಫಿಟ್ನೆಸ್ ಹಿಂದೆ ನಿಯಮಿತ ವರ್ಕೌಟ್, ಕಾರ್ಡಿಯೋ, ಮಾರ್ಷಲ್ ಆರ್ಟ್ಸ್ ಮತ್ತು ಸ್ಟ್ರೆಂತ್ ಟ್ರೈನಿಂಗ್‌ನಂತಹ ಚಟುವಟಿಕೆಗಳ ಪ್ರಮುಖ ಪಾತ್ರವಿದೆ. ನೀವೂ ಫಿಟ್ ಮತ್ತು ಬಲಿಷ್ಠ ದೇಹವನ್ನು ಬೆಳೆಸಲು ಬಯಸಿದರೆ, ಅವರ ವರ್ಕೌಟ್ ರೊಟೀನ್‌ ಫಾಲೋ ಮಾಡಿ

26
ಟೈಗರ್ ಶ್ರಾಫ್ ಫಿಟ್ ಆಗಿರಲು, ಮಸ್ಕ್ಯೂಲರ್ ದೇಹ ಪಡೆಯಲು ಏನೇನು ಮಾಡುತ್ತಾರೆ ನೋಡಿ.

ಬೆಳಿಗ್ಗೆ ಕಾರ್ಡಿಯೋದಿಂದ ಆರಂಭಿಸಿ

ಕಾರ್ಡಿಯೋ ವ್ಯಾಯಾಮಗಳು ಹೃದಯದ ಆರೋಗ್ಯವನ್ನು ಸುಧಾರಿಸಲು, ಸ್ಟ್ಯಾಮಿನಾ ಹೆಚ್ಚಿಸಲು ಮತ್ತು ಕ್ಯಾಲೊರಿ ಬರ್ನ್ ಮಾಡಲು ಸಹಾಯ ಮಾಡುತ್ತವೆ. ಟೈಗರ್ ಅವರ ದಿನಚರಿಯಲ್ಲಿ ಬೆಳಿಗ್ಗೆ ಟ್ರೆಡ್‌ಮಿಲ್ ಅಥವಾ ಸ್ಟೆಪ್‌ಮಿಲ್‌ನಲ್ಲಿ ಸುಮಾರು 45 ನಿಮಿಷಗಳ ಕಾಲ ಕಾರ್ಡಿಯೋ ಮಾಡುತ್ತಾರೆ. ಆದರೆ, ವ್ಯಾಯಾಮ ಆರಂಭಿಸುವವರು ಇಷ್ಟು ದೀರ್ಘ ಸಮಯ ಕಾರ್ಡಿಯೋ ಮಾಡುವುದು ಕಡ್ಡಾಯವಲ್ಲ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ 15–20 ನಿಮಿಷಗಳ ಕಾಲ ವೇಗವಾಗಿ ನಡೆಯುವುದು, ಸೈಕ್ಲಿಂಗ್ ಮಾಡುವುದು ಅಥವಾ ನಿಧಾನವಾಗಿ ಜಾಗಿಂಗ್ ಮಾಡುವುದರಿಂದ ಆರಂಭಿಸಬಹುದು.

36
ಕಿಕ್‌ಬಾಕ್ಸಿಂಗ್ ಮತ್ತು ಡ್ಯಾನ್ಸ್

ಮಸ್ಕ್ಯುಲರ್ ಬಾಡಿ ಬೆಳೆಸಲು ಕೇವಲ ತೂಕ ಎತ್ತುವುದಷ್ಟೇ ಸಾಕಾಗುವುದಿಲ್ಲ. ದೇಹದ ಚುರುಕುತನ, ಸಮತೋಲನ ಮತ್ತು ಹೊಂದಾಣಿಕೆಯ ಮೇಲೂ ಕೆಲಸ ಮಾಡುವುದು ಅಗತ್ಯ. ಕಿಕ್‌ಬಾಕ್ಸಿಂಗ್ ಮತ್ತು ಡ್ಯಾನ್ಸ್‌ನಂತಹ ಚಟುವಟಿಕೆಗಳು ದೇಹವನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತವೆ. ಟೈಗರ್ ಶ್ರಾಫ್ ಅವರಂತೆ ಆ್ಯಕ್ಷನ್ ಮತ್ತು ಮಾರ್ಷಲ್ ಆರ್ಟ್ಸ್‌ನಲ್ಲಿ ಆಸಕ್ತಿ ಹೊಂದಿದ್ದರೆ, ತರಬೇತಿ ಪಡೆದ ಪರಿಣತರಿಂದ ಅಭ್ಯಾಸ ಮಾಡಬಹುದು.

46
ಮಸಲ್ಸ್ ಬೆಳೆಸಲು ಸ್ಟ್ರೆಂತ್ ಟ್ರೈನಿಂಗ್

ಸ್ನಾಯುಗಳನ್ನು ಬಲಪಡಿಸಲು ಮತ್ತು ಅಭಿವೃದ್ಧಿಪಡಿಸಲು ಸ್ಟ್ರೆಂತ್ ಟ್ರೈನಿಂಗ್ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಪುಷ್-ಅಪ್ಸ್, ಸ್ಕ್ವಾಟ್ಸ್, ಪುಲ್-ಅಪ್ಸ್ ಮತ್ತು ಡಂಬಲ್ ವ್ಯಾಯಾಮಗಳಂತಹ ಅಭ್ಯಾಸಗಳನ್ನು ಸೇರಿಸಬಹುದು. ಆರಂಭದಲ್ಲಿ ಕಡಿಮೆ ತೂಕ ಬಳಸಿ, ಸರಿಯಾದ ತಂತ್ರಕ್ಕೆ ಗಮನ ಕೊಡಿ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನಿಧಾನವಾಗಿ ತೂಕ ಅಥವಾ ಪುನರಾವರ್ತನೆಗಳ ಸಂಖ್ಯೆಯನ್ನು ಹೆಚ್ಚಿಸಿ. ಪ್ರತಿದಿನ ಒಂದೇ ಸ್ನಾಯುಗಳ ಗುಂಪಿಗೆ ತರಬೇತಿ ನೀಡುವ ಬದಲು, ವಿವಿಧ ಸ್ನಾಯುಗಳಿಗೆ ಸಾಕಷ್ಟು ವಿಶ್ರಾಂತಿ ನೀಡುವುದೂ ಮುಖ್ಯ.

56
ಕ್ರೀಡೆಗಳ ಮೂಲಕ ಸ್ಟ್ಯಾಮಿನಾ ಹೆಚ್ಚಿಸಿಕೊಳ್ಳಿ

ಫುಟ್‌ಬಾಲ್, ಕ್ರಿಕೆಟ್ ಮತ್ತು ಬಾಸ್ಕೆಟ್‌ಬಾಲ್‌ನಂತಹ ಕ್ರೀಡೆಗಳು ದೇಹವನ್ನು ಸಕ್ರಿಯವಾಗಿಡುವುದರ ಜೊತೆಗೆ ದೇಹದ ಹೊಂದಾಣಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಟೈಗರ್ ಅವರ ಫಿಟ್ನೆಸ್ ರುಟೀನ್ ನಲ್ಲಿ ಕ್ರೀಡೆಗಳಿಗೆ ಮಹತ್ವವಿದೆ. ನಿಮ್ಮ ಇಷ್ಟದ ಯಾವುದಾದರೂ ಒಂದು ಕ್ರೀಡೆಯನ್ನು ಆಯ್ಕೆ ಮಾಡಿಕೊಂಡು ವಾರದಲ್ಲಿ ಕೆಲವು ದಿನಗಳ ಕಾಲ ಅದನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳಬಹುದು.

66
ಆಹಾರ ಮತ್ತು ವಿಶ್ರಾಂತಿಯ ಕಡೆ ಗಮನ ಕೊಡಿ

ಮಸ್ಕ್ಯುಲರ್ ಬಾಡಿ ಬೆಳೆಸಲು ವರ್ಕೌಟ್ ಜೊತೆಗೆ ಸರಿಯಾದ ಆಹಾರ ಮತ್ತು ನಿದ್ರೆಯೂ ಅಗತ್ಯ. ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರೋಟೀನ್, ಸಂಪೂರ್ಣ ಧಾನ್ಯಗಳು, ಹಣ್ಣುಗಳು, ತರಕಾರಿಗಳು ಮತ್ತು ಹೆಲ್ತಿ ಫ್ಯಾಟ್ ಸೇರಿಸಿ. ಮೊಟ್ಟೆ, ಬೇಳೆ, ಪನೀರ್, ಹಾಲು ಮತ್ತು ಮೊಸರು ಪ್ರೋಟೀನ್‌ನ ಉತ್ತಮ ಆಯ್ಕೆಗಳಾಗಿವೆ. ಇದರ ಜೊತೆಗೆ ಸಾಕಷ್ಟು ನಿದ್ರೆ ಕೂಡ ಅಗತ್ಯ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories